ಕೈ ನಾಯಕನ ಬರ್ತ್​​ಡೇ ಪಾರ್ಟಿಯಲ್ಲಿ ನಂಗಾನಾಚ್: ಡ್ಯಾನ್ಸರ್​​ಗಳ ಜತೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕು ಇರಿತ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 27, 2022 | 2:52 PM

ನಂಗಾನಾಚ್​​ ಕಾರ್ಯಕ್ರಮದ ವೇಳೆ ಯುವಕನಿಗೆ ಚಾಕು ಇರಿದಿರುವಂತಹ ಘಟನೆ ಜಿಲ್ಲೆಯ ಯಾರಬ್ ನಗರದ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಕೈ ನಾಯಕನ ಬರ್ತ್​​ಡೇ ಪಾರ್ಟಿಯಲ್ಲಿ ನಂಗಾನಾಚ್: ಡ್ಯಾನ್ಸರ್​​ಗಳ ಜತೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕು ಇರಿತ
ನಂಗನಾಚ್​​ ಕಾರ್ಯಕ್ರಮದ ವೇಳೆ ಓರ್ವನಿಗೆ ಚಾಕು ಇರಿತ
Follow us on

ರಾಮನಗರ: ನಂಗನಾಚ್ (Nanganach)​​ ಕಾರ್ಯಕ್ರಮದ ವೇಳೆ ಯುವಕನಿಗೆ ಚಾಕು ಇರಿದಿರುವಂತಹ ಘಟನೆ ಜಿಲ್ಲೆಯ ಯಾರಬ್ ನಗರದ ಕಲ್ಯಾಣ ಮಂಟಪದಲ್ಲಿ ನಡೆದಿದೆ. ನವೆಂಬರ್​​ 24ರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಗರಸಭೆ ಕಾಂಗ್ರೆಸ್​ ಸದಸ್ಯ ದೌಲತ್​ ಶರೀಷ್ (Doulat Shariff) ಹುಟ್ಟುಹಬ್ಬದ ಪ್ರಯುಕ್ತ ನಂಗಾನಾಚ್​​ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಡ್ಯಾನ್ಸರ್​​ಗಳ ಜತೆ ಅಸಭ್ಯವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮೆಹಬೂಬ್​​​ ನಗರದ ನಿವಾಸಿಯಾದ ಮುಫಾಗೆ ಚಾಕು ಇರಿಯಲಾಗಿದೆ. ಅದೇ ನಗರದ ನಿವಾಸಿ ರುಮಾನ್​ನಿಂದ ಕೃತ್ಯವೆಸಗಲಾಗಿದೆ. ಗಾಯಾಳು ಮುಫಾಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ರುಮಾನ್​ನ್ನು ರಾಮನಗರ ಟೌನ್ ಪೊಲೀಸರು ಬಂಧಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರರ ತವರು ಜಿಲ್ಲೆಯ 19ನೇ ವಾರ್ಡ್ ಸದಸ್ಯ ದೌಲತ್ ಷರೀಫ್ ತಮ್ಮ ಬರ್ತ್​​ಡೇ ಆಚರಣೆಗೆ ಬೆಂಗಳೂರಿನಿಂದ ಡ್ಯಾನ್ಸರ್​ಗಳನ್ನು ಕರೆಸಿ ಅವರು ಅರೆಬೆತ್ತಲೆಯಾಗಿ ಕುಣಿಯುವಾಗ ನೋಟುಗಳ ಸುರಿಮಳೆ ಗೈದು ದೌಲತ್ತು ಮೆರೆದಿದ್ದಾರೆ. ಇದು ಸಾರ್ವಜನಿಕರಿಂದ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು. ಪಕ್ಷದ ಕಾರ್ಯಕರ್ತರು ಮತ್ತು ದೌಲತ್ ಬೆಂಬಲಿಗರು ಯಾರಬ್ ನಗರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಹುಚ್ಚೆದ್ದು ಕುಣಿದು ಮೋಜು ಮಸ್ತಿ ಮಾಡಿದ್ದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:48 pm, Sun, 27 November 22