ಆರೋಗ್ಯ ಸಚಿವರೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಸಂಬಳ ನೀಡುತ್ತಿಲ್ಲವೇ?

ಆರೋಗ್ಯ ಸಚಿವರೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ ಸಂಬಳ ನೀಡುತ್ತಿಲ್ಲವೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 26, 2022 | 3:52 PM

ರಾಮನಗರದ ಉಸ್ತುವಾರಿ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಮತ್ತು ರಾಜ್ಯದ ಅರೋಗ್ಯ ಸಚಿವ ಡಾ ಕೆ ಸುಧಾಕರ್ ಇಬ್ಬರೂ ವೈದ್ಯರೇ. ತಮ್ಮ ಸಮುದಾಯದ ಒಬ್ಬ ಸದಸ್ಯೆ ನಡೆಸುತ್ತಿರುವ ಭ್ರಷ್ಟಾಚಾರ ಅವರ ಕಣ್ಣಿಗೆ ಕಾಣುತ್ತಿಲ್ಲವೇ?

ರಾಮನಗರ: ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಲಂಚಾವತಾರ ಯಾವುಮಟ್ಟಿಗೆ ತಳವೂರಿದೆ ಅಂತ ಅರ್ಥಮಾಡಿಕೊಳ್ಳಲು ಈ ವಿಡಿಯೋವನ್ನು ನೀವು ನೋಡಬೇಕು. ರಾಮನಗರ ಜಿಲ್ಲೆ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಲ್ಲಿ ಒಬ್ಬರಾಗಿರುವ ಪ್ರಸೂತಿ ತಜ್ಞೆ ಡಾ ಶಶಿಕಲಾ (Dr Shashikala) ಅವರು ಒಂದು ವಾರದ ಹಿಂದೆ ಮಗು ಹೆತ್ತ ಬಾಣಂತಿ ರೂಪ ಎನ್ನುವವರನ್ನು ಡಿಸ್ಚಾರ್ಜ್ ಮಾಡಲು ರೂ. 6,000 ಲಂಚ ಕೇಳುತ್ತಿದ್ದಾರೆ. ಅವರೇ ಹೇಳುತ್ತಿರುವಂತೆ ಅರು ಸಾವಿರ ರೂ. ಗಳಲ್ಲಿ ರೂ. 2,000 ಆಕೆ ತೆಗೆದುಕೊಳ್ಳುತ್ತಾರಂತೆ. ಉಳಿದ ರೂ. 4,000 ಇನ್ನಿಬ್ಬರ ವೈದ್ಯರಿಗೆ ತಲಾ ರೂ. 2,000 ಗಳಂತೆ ಹಂಚುತ್ತಾರಂತೆ. ರಾಮನಗರದ ಉಸ್ತುವಾರಿ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ (Dr CN Ashwath Narayan) ಮತ್ತು ರಾಜ್ಯದ ಅರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಇಬ್ಬರೂ ವೈದ್ಯರೇ. ತಮ್ಮ ಸಮುದಾಯದ ಒಬ್ಬ ಸದಸ್ಯೆ ನಡೆಸುತ್ತಿರುವ ಭ್ರಷ್ಟಾಚಾರ ಅವರ ಕಣ್ಣಿಗೆ ಕಾಣುತ್ತಿಲ್ಲವೇ?

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ