ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ: ವಿಶೇಷ ಚೇತನ ಸಹೋದರರ ಜಮೀನು ನಾಶ; ಪ್ರತಿಭಟನೆ ಹಾದಿ ಹಿಡಿದ ಸಹೋದರರು

| Updated By: ವಿವೇಕ ಬಿರಾದಾರ

Updated on: Aug 22, 2022 | 7:28 PM

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಜಮೀನಿಗೆ ಹಾನಿಯಾಗಿದೆ ಎಂದು ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯ ವಿಶೇಷಚೇತನ ಸಹೋದರು ಪ್ರತಿಭಟನೆ ಮಾಡುತ್ತಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ: ವಿಶೇಷ ಚೇತನ ಸಹೋದರರ ಜಮೀನು ನಾಶ; ಪ್ರತಿಭಟನೆ ಹಾದಿ ಹಿಡಿದ ಸಹೋದರರು
ವಿಶೇಷ ಚೇತನ ಸಹೋದರರ ಪ್ರತಿಭಟನೆ
Follow us on

ರಾಮನಗರ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bangalore-Mysore expressway)  ಅವೈಜ್ಞಾನಿಕ ಕಾಮಗಾರಿಯಿಂದ ಜಮೀನಿಗೆ ಹಾನಿಯಾಗಿದೆ ಎಂದು ಚನ್ನಪಟ್ಟಣ (Channapattana) ತಾಲೂಕಿನ ತಿಟ್ಟಮಾರನಹಳ್ಳಿಯ ವಿಶೇಷ ಚೇತನ ಸಹೋದರು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಪಕ್ಕದಲ್ಲಿ ವಿಶೇಷ ಚೇತನ ಸಹೋದರರಾದ ವೇಣುಗೋಪಾಲ್ ಹಾಗೂ ನವೀನ್ ಕುಮಾರ್ ಎಂಬುವವರಿಗೆ ಸೇರಿದ ಜಮೀನು ಇದೆ.

ಈ ಜಮೀನಿಗೆ ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ನುಗ್ಗಿದೆ. ಇದರಿಂದ ಜಮೀನಿನಲ್ಲಿದ್ದ 50ಕ್ಕೂ ಹೆಚ್ಚು ತೆಂಗಿನಮರಗಳು ನಾಶವಾಗಿವೆ ಎಂದು ಸಹೋದರರು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಡಿಬಿಎಲ್​ ​ಕಂಪನಿಯ ಅಧಿಕಾರಿಗಳ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲವೆಂದು ಆರೋಪ ಕೇಳಿ ಬಂದಿದೆ. ಹೀಗಾಗಿ ವಿಶೇಷ ಚೇತನ ಸಹೋದರರು ಇದೀಗ ಕೂಡಲೇ ಪರಿಹಾರ ನೀಡಿ ಅಥವಾ ಜಮೀನು ಸರಿಪಡಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ, ಫೋಟೊ ಅಂಟಿಸಿ ಪ್ರತಿಭಟನೆ

ವಿಜಯಪುರ: ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಹೋರಾಟಕ್ಕೆ ಮುಂದಾಗಿದ್ದಾರೆ. ವಿಜಯಪುರ ಜಿಲ್ಲಾ ಕಾಂಗ್ರೆಸ್​ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರು, ಇಂದು ಒಂದೇ ದಿನ ಎರಡು ಬಾರಿ ಕಚೇರಿಯ ಗೋಡೆ ಮೇಲೆ ಸಾವರ್ಕರ್​ ಫೋಟೊ ಅಂಟಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್​.ಎಸ್.ಪಾಟೀಲ್ ಕೂಚಬಾಳ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಕಾಂಗ್ರೆಸ್​ ಕಚೇರಿಗೆ ಅಂಟಿಸಿದ್ದ ಸಾವರ್ಕರ್ ಫೋಟೊವನ್ನು ಪೊಲೀಸರು ತೆರವುಗೊಳಿಸಿ, ಪ್ರತಿಭಟನಾನಿರತರನ್ನು ವಶಕ್ಕೆ ಪಡೆದುಕೊಂಡರು.

ಈ ವೇಳೆ ಬಿಜೆಪಿ ಕಾರ್ಯಕರ್ತರು ‘ಮೇ ಹೂಂ ಸಾವರ್ಕರ್’ ಎಂದು ಘೋಷಣೆಯ ಜೊತೆಗೆ ‘ಭಾರತ್ ಮಾತಾ ಕಿ ಜೈ’ ಎಂದು ಕೂಗಿದರು. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಜಲನಗರದ ನವರಸಪುರ ಕಾಲೊನಿಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಪೊಲೀಸರನ್ನು ಲೆಕ್ಕಿಸದೇ ಬಿಜೆಪಿ ಕಾರ್ಯಕರ್ತರು ನುಗ್ಗಿ, ಸಾವರ್ಕರ್ ಫೋಟೊ ಅಂಟಿಸಿದರು.

ಪೊಲೀಸರನ್ನು ತಳ್ಳುತ್ತಾ ಬಂದವರನ್ನು ಕಂಡು ಕಾಂಗ್ರೆಸ್ ನಾಯಕರು ಆಕ್ರೋಶಗೊಂಡರು‌. ನಂತರ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ದೂರಕ್ಕೆ ಕರೆದೊಯ್ದರು. ಈ ವೇಳೆ ಪೊಲೀಸ್ ಅಧಿಕಾರಗಳನ್ನು ಕಾಂಗ್ರೆಸ್ ಮುಖಂಡರು ತರಾಟೆಗೆ ತೆಗೆದುಕೊಂಡರು. ನೀವೇ ಬಿಜೆಪಿ ಕಾರ್ಯಕರ್ತರನ್ನು ಛೂ ಬಿಟ್ಟಿದ್ದೀರಿ, ನಿಮ್ಮ ಬೆಂಬಲದಿಂದಲೇ ಬಿಜೆಪಿ ಕಾರ್ಯಕರ್ತರು ಇಲ್ಲಿಗೆ ಬಂದಿದ್ದಾರೆ ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಪೊಲೀಸ್ ವಶಕ್ಕೆ ಬಿಜೆಪಿ ಪದಾಧಿಕಾರಿ

ಕಾಂಗ್ರೆಸ್ ಕಚೇರಿಯ ಗೋಡೆಗೆ ಸಾವರ್ಕರ್ ಫೋಟೊ ಅಂಟಿಸಿದ್ದು ನಾನೇ ಎಂದು ಬಿಜೆಪಿ ಪದಾಧಿಕಾರಿ ಬಸವರಾಜ ಹೂಗಾರ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಆದರೂ ಕೆಲಸ ಹೊತ್ತಿನ ನಂತರ ಮತ್ತೆ ಬಂದ ಕಾರ್ಯಕರ್ತರು, ಪುನಃ ಕಚೇರಿ ಗೋಡೆ ಹಾಗೂ ಫ್ಲೆಕ್ಸ್ ಮೇಲೆ ಸಾವರ್ಕರ್ ಫೋಟೊ ಅಂಟಿಸಿದರು.

ಕಾಂಗ್ರೆಸ್​ನವರು ಸಾವರ್ಕರ್ ಪೋಟೋ ಸುಟ್ಟಿದ್ದಕ್ಕಿಂತ ನಾವು ಸಾವರ್ಕರ್ ಪೋಟೋ ಅಂಟಿಸಿದ್ದು ದೊಡ್ಡ ಅಪರಾಧವಲ್ಲ. ಸಾವರ್ಕರ್ ಅವರನ್ನು ಕಾಂಗ್ರೆಸ್​ನವರು ಪ್ರಚಾರದ ವಸ್ತುವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾಡಲು ಕೆಲಸವಿಲ್ಲದ ಕೈ ಪಕ್ಷದವರು ಸಾವರ್ಕರ್ ಬಗ್ಗೆ ಮಾತನಾಡಿ ಪ್ರಚಾರ ಪಡೆಯಲು ಮಾಡುತ್ತಿದ್ದಾರೆ. ಸಾರ್ವಕರ್ ಅವರನ್ನು ಗೌರವಿಸೋ ಕೆಲಸ ಮಾಡಿ, ಅವರ ಬಗ್ಗೆ ತಿಳಿದುಕೊಳ್ಳಿ ಎಂದು ಕಾಂಗ್ರೆಸ್ ಮುಖಂಡರಿಗೆ ಬಸವರಾಜ ಸಲಹೆ ಮಾಡಿದರು.

ಸಾವರ್ಕರ್ ಅವರ ಕೇವಲ ಆರು ಪತ್ರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮಾತನಾಡುವುದು ಸರಿಯಲ್ಲ. ಸಾವರ್ಕರ್ ಬಗ್ಗೆ ಕಾಂಗ್ರೆಸ್ ನವರು ಮಾತನಾಡುವುದನ್ನು ಇಲ್ಲಿಗೆ ನಿಲ್ಲಿಸಿದರೆ ಸರಿ. ಇಲ್ಲವಾದರೆ ಇಂದು ಅವರ ಕಚೇರಿಗೆ ಸಾವರ್ಕರ್ ಪೋಟೋ ಹೋಗಿದೆ, ನಾಡಿದ್ದು ಅವರ ಮನೆಗೆ ಹೋಗುತ್ತದೆ ಎಂದರು.

ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Mon, 22 August 22