Ramanagara rains: ರಾಗಿ ಕಣಜ ರಾಮನಗರ ಜಿಲ್ಲೆಯಲ್ಲಿ ಭೀಭತ್ಸವಾಗಿದೆ ಮಳೆಯ ರಾಗ -ಸಾವಿರಾರು ಹೆಕ್ಟರ್ ರಾಗಿ ನಾಶ!

| Updated By: ಸಾಧು ಶ್ರೀನಾಥ್​

Updated on: Nov 20, 2021 | 9:46 AM

Ragi crop loss: ರಾಮನಗರ ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆ ರಾಮನಗರ ಜಿಲ್ಲಾಡಳಿತ ಕಂಟ್ರೋಲ್ ರೂಂ ತೆರೆದಿದೆ. ಮಳೆ ಹಾನಿ ಸಂಬಂಧ ದೂರು ನೀಡಲು ಸಹಾಯವಾಣಿ ಸಂಖ್ಯೆ 080-2727 6615 ಕಾರ್ಯಗತವಾಗಿದೆ. ಪ್ರಾಣ ಹಾನಿ, ಮನೆ ಹಾನಿ, ಬೆಳೆ ಹಾನಿ ಸಂಬಂಧಿಸಿದಂತೆ ದೂರು‌ ಸ್ವೀಕರಿಸಲು ದಿನದ 24 ಗಂಟೆಯೂ ಕಂಟ್ರೋಲ್ ರೂಮ್ ಆರಂಭವಾಗಿದೆ.

Ramanagara rains: ರಾಗಿ ಕಣಜ ರಾಮನಗರ ಜಿಲ್ಲೆಯಲ್ಲಿ ಭೀಭತ್ಸವಾಗಿದೆ ಮಳೆಯ ರಾಗ -ಸಾವಿರಾರು ಹೆಕ್ಟರ್ ರಾಗಿ ನಾಶ!
ರಾಗಿ ಕಣಜ ರಾಮನಗರ ಜಿಲ್ಲೆಯಲ್ಲಿ ಭೀಭತ್ಸವಾಗಿದೆ ಮಳೆಯ ರಾಗ: ಸಾವಿರಾರು ಹೆಕ್ಟರ್ ರಾಗಿ ನಾಶ!
Follow us on

ರಾಮನಗರ: ಅನಿರೀಕ್ಷಿತ ಮಳೆಯಬ್ಬರಕ್ಕೆ ಇಡೀ ರಾಜ್ಯ ತತ್ತರಿಸಿದೆ. ಚಳಿಗಾಲ ಹುಟ್ಟುತ್ತಿದ್ದರೂ ಇನ್ನೂ ಮುಗಿದಿಲ್ಲ ಮಳೆಯ ರಗಳೆ ಎಂಬಂತಾಗಿದೆ. ಇದರಿಂದ ಜನ ಜಾನುವಾರುಗಳಿಗೂ ಕಂಟಕ ತಪ್ಪಿದ್ದಲ್ಲ. ಈ ಮಧ್ಯೆ ಹೆಕ್ಟೇರ್ ಗಟ್ಟಲೆ ಅಪಾರ ಪ್ರಮಾಣದ ಬೆಳೆ ನಾಶ ಪ್ರಕರಣಗಳು ವರದಿಯಾಗುತ್ತಿವೆ. ರಾಜಧಾನಿಗೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯೂ ಇದಕ್ಕೆ ಹೊರತಲ್ಲ. ರಾಮನಗರ ಜಿಲ್ಲೆಯಲ್ಲಿ (ramanagara rains) ನಿರಂತರ ಮಳೆಯಿಂದಾಗಿ ರಾಗಿ ಪೈರು ನೆಲಕಚ್ಚಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ರಾಗಿ ಬೆಳೆ ನಾಶಗೊಂಡಿದೆ (Ragi crop loss). ಜಿಲ್ಲೆಯಲ್ಲಿ ಅಂದಾಜು 1628 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ನಾಶವಾಗಿದೆ.

ಮಳೆ ಹೀಗೆಯೇ ತನ್ನ ರೌದ್ರಾವತಾರ ಮುಂದುವರಿಸಿದರೆ ಇನ್ನೂ 10 ಸಾವಿರ ‌ಹೆಕ್ಟರ್ ರಾಗಿ ನಾಶವಾಗಲಿದೆ. ಜಿಲ್ಲೆಯಲ್ಲಿ ರೇಷ್ಮೆ, ಮಾವು ನಂತರ ಅತೀ ಹೆಚ್ಚು ರಾಗಿ ಬೆಳೆ ಬೆಳೆಯಲಾಗುತ್ತದೆ. ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲಾಗುತ್ತದೆ. ಇದೀಗ ನಿರಂತರ ಮಳೆಗೆ ರಾಗಿ ಬೆಳೆ ನೆಲಕಚ್ಚಿ ಮೊಳಕೆ ಕೂಡ ಬಂದಿತ್ತು. ನಿರಂತರ ಮಳೆಯಿಂದಾಗಿ ರಾಗಿ ಬೆಳೆಗಾರರು ‌ಕಂಗಾಲಾಗಿದ್ದಾರೆ.

ರಾಮನಗರ ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆ ರಾಮನಗರ ಜಿಲ್ಲಾಡಳಿತ ಕಂಟ್ರೋಲ್ ರೂಂ ತೆರೆದಿದೆ. ಮಳೆ ಹಾನಿ ಸಂಬಂಧ ದೂರು ನೀಡಲು ಸಹಾಯವಾಣಿ ಸಂಖ್ಯೆ 080-2727 6615 ಕಾರ್ಯಗತವಾಗಿದೆ. ಪ್ರಾಣ ಹಾನಿ, ಮನೆ ಹಾನಿ, ಬೆಳೆ ಹಾನಿ ಸಂಬಂಧಿಸಿದಂತೆ ದೂರು‌ ಸ್ವೀಕರಿಸಲು ದಿನದ 24 ಗಂಟೆಯೂ ಕಂಟ್ರೋಲ್ ರೂಮ್ ಆರಂಭವಾಗಿದೆ.

ಕೋಡಂಬಳ್ಳಿಯಲ್ಲಿ ಭಾರಿ ಮಳೆಗೆ 3 ಮನೆ ಗೋಡೆ ಕುಸಿತ
ರಾಮನಗರ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ರಾಮನಗರ ಜಿಲ್ಲೆ ಚನ್ನಪಟ್ಟಣ ‌ತಾಲೂಕಿನ ಕೋಡಂಬಳ್ಳಿ ಗ್ರಾಮದ ವಿನಾಯಕ‌ನಗರದಲ್ಲಿ ಗುಡಿಸಲು ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಗ್ರಾಮದ ಲಕ್ಷಮ್ಮ, ವಿಜಿಯಮ್ಮ, ಕುಮಾರ್ ಎಂಬುವವರ ಗುಡಿಸಲು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Heavy Rain: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ ಹೇಗಿತ್ತು ಗೊತ್ತಾ? | Tv9 Kannada

Published On - 8:33 am, Sat, 20 November 21