ಗಲಾಟೆ ಪ್ರಕರಣವೊಂದರಲ್ಲಿ ವಕೀಲರ ಮೇಲೆ ಸುಳ್ಳು ಎಫ್ಐಆರ್ ಆರೋಪ: ಊಟ ಬಿಟ್ಟು ಬಂದು ಮನವಿ ಸ್ವೀಕರಿಸಿದ ಡಿಸಿ
40 ವಕೀಲರ ವಿರುದ್ಧ ದೂರು ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ರಾಮನಗರದ ಐಜೂರು ಸರ್ಕಲ್ ಬಳಿ ಸುಮಾರು 300ಕ್ಕೂ ಹೆಚ್ಚು ವಕೀಲರಿಂದ ಪ್ರತಿಭಟನಾ ರ‍್ಯಾಲಿ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಕೀಲರ ಪ್ರತಿಭಟನೆ ಮಾಡಿದ್ದು, ಈ ವೇಳೆ ಡಿಸಿ ಮತ್ತು ಎಸ್ಪಿ ಊಟ ಬಿಟ್ಟು ವಕೀಲರ ಮನವಿ ಸ್ವಿಕರಿಸಿದ್ದಾರೆ.
ರಾಮನಗರ, ಫೆಬ್ರವರಿ 19: 40 ವಕೀಲರ (lawyers) ವಿರುದ್ಧ ದೂರು ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಐಜೂರು ಸರ್ಕಲ್ ಬಳಿ ಸುಮಾರು 300ಕ್ಕೂ ಹೆಚ್ಚು ವಕೀಲರಿಂದ ಪ್ರತಿಭಟನಾ ರ‍್ಯಾಲಿ ಮಾಡಲಾಗಿದೆ. ಪಿಎಸ್ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ರಾಮನಗರ ಜಿಲ್ಲಾಧಿಕಾರಿ ಕಚೇರಿವರೆಗೆ ವಕೀಲರ ಮೆರವಣಿಗೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಕೀಲರ ಪ್ರತಿಭಟನೆ ಮಾಡಿದ್ದು, ಡಿಸಿ ಊಟಕ್ಕೆ ಹೋಗಿದ್ದಾರೆ ಎಂದು ಸಿಬ್ಬಂದಿ ಹೇಳಿದ್ದಾರೆ. ನಾವು ಹಸಿದುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಅದ್ಹೇಗೆ ಅವರು ಊಟ ಮಾಡುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಡಿಸಿ ಮತ್ತು ಎಸ್ಪಿ ಊಟ ಬಿಟ್ಟು ಹೊರ ಬಂದಿದ್ದಾರೆ. ವಕೀಲರ ಮನವಿ ಸ್ವಿಕರಿಸಲು ಡಿಸಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಮತ್ತು ಎಸ್ಪಿ ಕಾರ್ತಿಕ್ ರೆಡ್ಡಿ ಊಟ ಬಿಟ್ಟು ಬಂದಿದ್ದಾರೆ.
ಜಿಲ್ಲಾಧಿಕಾರಿಗೆ 2 ಗಂಟೆಗಳ ಡೆಡ್ಲೈನ್ ನೀಡಿದ ವಕೀಲರು
ಈ ವೇಳೆ ಮಾತನಾಡಿದ ಡಿಸಿಜಿಲ್ಲಾಧಿಕಾರಿ ಡಾ.ಅವಿನಾಶ್ ತಪ್ಪು ಮಾಡಿದರೆ ತನಿಖೆ ಮಾಡಿ ಕ್ರಮ ತಗೊಳ್ಳುತ್ತೇವೆ. ಅವರಿಗೆ ಒಂದು ಅವಕಾಶ ಮಾಡಿಕೊಡಿ ಎಂದಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗೆ 2 ಗಂಟೆಗಳ ಡೆಡ್ಲೈನ್ ನೀಡಿದ ವಕೀಲರು, 2 ಗಂಟೆಯೊಳಗೆ ಒಂದು ನಿರ್ಧಾರಕ್ಕೆ ಬಂದು ಪಿಎಸ್ಐ ಸಸ್ಪೆಂಡ್ ಮಾಡುವಂತೆ ತಾಕೀತು ಮಾಡಿದ್ದಾರೆ. ಜೊತೆಗೆ ಗೃಹ ಸಚಿವರೂ ಸ್ಥಳಕ್ಕೆ ಬರಬೇಕು ಎಂದು ವಕೀಲರು ಪಟ್ಟುಹಿಡಿದ್ದಾರೆ. 5 ಗಂಟೆಯವರೆಗೆ ಇನ್ವೆಸ್ಟಿಗೇಷನ್ ಮಾಹಿತಿ ಪಡೆದುಕೊಳ್ಳುತ್ತೇನೆ. ಬಳಿಕ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಡಿಸಿ ಡಾ.ಅವಿನಾಶ್ ಹೇಳಿದ್ದಾರೆ.
ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಿಷ್ಟು
ಎಸ್ಪಿ ಕಾರ್ತಿಕ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಕಳೆದ ವಾರ ಬಾರ್ ಕೌನ್ಸಿಲ್ ಹಾಗೂ ಪದಾಧಿಕಾರಿ ಅರ್ಜಿ ಕೊಟ್ಟಿದ್ದಾರೆ. ಅದನ್ನು ನಾವು ತನಿಖೆ ಮಾಡುತ್ತಿದ್ದೇವೆ. ವಕೀಲರು ಕೊಟ್ಟ ಅರ್ಜಿಯನ್ನು ತನಿಖೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸಿದಿ ತೀರ್ಪು: ವಾರಾಣಸಿ ಜಿಲ್ಲಾ ಕೋರ್ಟ್ನ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್, ವಕೀಲ ಅರೆಸ್ಟ್
ವಕೀಲರ ಮೇಲೆ ದೂರು ವಿಚಾರವಾಗಿ 100% ವಾಸ್ತವಾಂಶವಾಗಿ ನಾವು ರಿಪೋರ್ಟ್ ಕೊಡುತ್ತೇವೆ ಎಂದಿದ್ದು, ಈ ವೇಳೆ ಕಾರ್ತಿಕ್ ರೆಡ್ಡಿ ಮಾತನ್ನು ವಕೀಲರು ಅಲ್ಲಗೆಳೆದಿದ್ದಾರೆ. ಕೂಡಲೇ ಸಸ್ಪೆಂಡ್ ಆಗಲೇಬೇಕು ಅಂತ ಪಟ್ಟ ಹಿಡಿದಿದ್ದಾರೆ.
ಇದನ್ನೂ ಓದಿ: ಮಂಡ್ಯ ಲೋಕಸಭಾ ಕಣದಿಂದ ಹಿಂದೆ ಸರಿದಿದ್ದ ನಿಖಿಲ್ ಕುಮಾರಸ್ವಾಮಿ ಯೂಟರ್ನ್
ಮಂಡ್ಯ, ಮೈಸೂರು, ಆನೇಕಲ್, ಭದ್ರಾವತಿ ಸೇರಿದಂತೆ ಅನೇಕ ಕಡೆಯಿಂದ ವಕೀಲರು, ಮಹಿಳಾ ವಕೀಲರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಘಟನೆ ಹಿನ್ನೆಲೆ
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾರ ಕಡೆಯೊಬ್ಬರು ನೀಡಿದ್ದ ಸುಳ್ಳು ದೂರಿನ ಆಧಾರದ ಮೇಲೆ ಐಜೂರು ಪೊಲೀಸರು ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಸದ್ಯ ಇದನ್ನು ಖಂಡಿಸಿ ವಕೀಲರಿಂದ ಪ್ರತಿಭಟನಾ ಮಾಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:58 pm, Mon, 19 February 24