ರಾಮನಗರ, ಜು.28: ಪಟ್ಟಣದ ಹೊರವಲಯದಲ್ಲಿ ವಂದೇ ಭಾರತ್ ರೈಲಿನ(Vande Bharat Train) ಮೇಲೆ ಮತ್ತೆ ಕೀಡಿಗೇಡಿಗಳು ಕಲ್ಲೆಸೆದಿದ್ದಾರೆ. ಈ ಹಿಂದೆ ಕೂಡ ಇಂತಹುದೇ ಘಟನೆ ನಡೆದಿತ್ತು. ಮತ್ತೆ ಇದೀಗ ಇಂತಹ ಘಟನೆ ಬೆಳಕಿಗೆ ಬಂದಿದೆ. ಈ ರೈಲು ಮೈಸೂರಿನಿಂದ ಚೆನೈಗೆ ತೆರಳುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಕಲ್ಲು ಎಸೆದ ರಭಸಕ್ಕೆ ಕಿಟಕಿ ಗಾಜು ಪುಡಿಯಾಗಿ ಸೀಟಿನ ಮೇಲೆ ಬಿದ್ದಿದ್ದು, ಆತಂಕದಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವಂತಾಗಿದೆ. ಇದೀಗ ಕಲ್ಲು ಹೊಡೆದ ಕಿಡಗೇಡಿಗಳ ಪತ್ತೆ ಕಾರ್ಯ ಶುರುವಾಗಿದೆ.
ಕೇಂದ್ರದ ಮಹತ್ತರ ಸೇವೆಗಳಲ್ಲಿ ಒಂದಾಗ ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳ ಮೇಲೆ ಕಲ್ಲೆಸೆತ ನಡೆಯುತ್ತಲೇ ಇದೆ. ಹೌದು ಇದೆ ಮೊದಲಲ್ಲ ಧಾರವಾಡ ಬೆಂಗಳೂರು ವಂದೇ ಭಾರತ್ ರೈಲು ಆರಂಭವಾದ ನಾಲ್ಕೇ ದಿನಕ್ಕೆ ದಾವಣಗೆರೆಯ ಹೊರವಲಯದಲ್ಲಿ ಕಲ್ಲೆಸೆತವಾಗಿತ್ತು. ಧಾರವಾಡದಿಂದ ಜುಲೈ 1 ರಂದು ಬೆಂಗಳೂರಿಗೆ ತೆರೆಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲವಾಗಿತ್ತು.
ಇದನ್ನೂ ಓದಿ:ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ನೀಡಲಾದ ಆಹಾರದಲ್ಲಿ ಜಿರಳೆ ಪತ್ತೆ, ಕ್ಷಮೆಯಾಚಿಸಿದ ಐಆರ್ಸಿಟಿಸಿ
ಕರ್ನಾಟಕದ ಮೊದಲ ಮೈಸೂರು-ಚನ್ನೈ ವಂದೇ ಭಾರತ್ ಎಕ್ಸಪ್ರೆಸ್ ರೈಲಿಗೂ ಕೆ ಆರ್ ಪುರಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೇಲ್ವೆ ನಿಲ್ದಾಣದ ಮಧ್ಯೆ ಕೀಡಿಗೇಡಿಗಳು ಕಲ್ಲೆಸೆತ ಮಾಡಿದ ಘಟನೆ ನಡೆದಿತ್ತು. ಈ ವೇಳೆ ಕಿಟಕಿಯ ಗಾಜು ತಾಕಿ ಪ್ರಯಾಣಿಕರಿಗೆ ಗಾಯಗಳಾಗಿತ್ತು ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿತ್ತು. ಈ ಘಟನೆ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ರಾಮನಗರದಲ್ಲಿ ಮತ್ತೆ ಇಂತಹ ಘಟನೆ ನಡೆದಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Fri, 28 July 23