ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀಡಲಾದ ಆಹಾರದಲ್ಲಿ ಜಿರಳೆ ಪತ್ತೆ, ಕ್ಷಮೆಯಾಚಿಸಿದ ಐಆರ್​ಸಿಟಿಸಿ

ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು(Vande Bharat Express Train) ದೇಶದ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿದೆ. ಕಳೆದ ತಿಂಗಳು ರಾಣಿ ಕಮಲಪತಿ ಹಾಗೂ ಹಜರತ್ ನಿಜಾಮುದ್ದೀನ್ ನಡುವೆ ಪ್ರಾರಂಭವಾಗಿತ್ತು.

ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀಡಲಾದ ಆಹಾರದಲ್ಲಿ ಜಿರಳೆ ಪತ್ತೆ, ಕ್ಷಮೆಯಾಚಿಸಿದ ಐಆರ್​ಸಿಟಿಸಿ
ಊಟದಲ್ಲಿ ಜಿರಳೆ
Follow us
|

Updated on:Jul 28, 2023 | 9:02 AM

ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು(Vande Bharat Express Train) ದೇಶದ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿದೆ. ಕಳೆದ ತಿಂಗಳು ರಾಣಿ ಕಮಲಪತಿ ಹಾಗೂ ಹಜರತ್ ನಿಜಾಮುದ್ದೀನ್ ನಡುವೆ ಪ್ರಾರಂಭವಾಗಿತ್ತು. ಆದರೆ ತಿಂಗಳೊಳಗೆ ದೂರೊಂದು ಕೇಳಿ ಬಂದಿದೆ. IRCTC ಪ್ರಯಾಣಿಕರಿಗೆ ನೀಡಿದ ಆಹಾರದಲ್ಲಿ ಜಿರಳೆ ಕಂಡುಬಂದಿದೆ. ಇದರಿಂದ ಕೋಪಗೊಂಡ ಪ್ರಯಾಣಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕ್ಷಮೆಯಾಚಿಸಿದ ಐಆರ್​ಸಿಟಿಸಿ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀಡಲಾದ ಆಹಾರದಲ್ಲಿ ಹುಳು ಪತ್ತೆಯಾಗಿರುವ ಕುರಿತು ಪುಂಡೂಕ್ ಎಂಬ ಟ್ವಿಟ್ಟರ್ ಖಾತೆಯಿಂದ ಫೋಟೊವನ್ನು ಹಂಚಿಕೊಳ್ಳಲಾಗಿದೆ. ಐಆರ್​ಸಿಟಿಸಿಯನ್ನು ಟ್ಯಾಗ್ ಮಾಡಲಾಗಿದೆ. ಪ್ರಯಾಣಿಕರ ಕೆಟ್ಟ ಅನುಭವಕ್ಕಾಗಿ ಐಆರ್​ಸಿಟಿಸಿ ಕ್ಷಮೆ ಯಾಚಿಸಿದೆ.

ಮತ್ತಷ್ಟು ಓದಿ: Best Local Food: ರೈಲಿನಲ್ಲಿ ಪ್ರಯಾಣಿಸಿದರೆ ,ಈ 5 ರೈಲ್ವೇ ನಿಲ್ದಾಣಗಳ ಪುಡ್ ಸವಿಯಲು ಮರೆಯದಿರಿ

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ಭಾರಿ ದಂಡ ವಿಧಿಸುವುದರ ಜತೆಗೆ ಆಹಾರ ತಯಾರಿಕೆ ಸಮಯದಲ್ಲಿ ಎಲ್ಲಾ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವಂತೆ ಎಚ್ಚರಿಕೆ ನಿಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ಘಟನೆ ಕುರಿತು ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿರುವ ಭೋಪಾಲ್​ನ ವಿಭಾಗೀಯ ರೈಲ್ವೆ ಮ್ಯಾನೇಜರ್ ಈ ಕೆಟ್ಟ ಅನುಭವದಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಪರ್ಯಾಯ ಆಹಾರ ವ್ಯವಸ್ಥೆ ಮಾಡಲಾಗಿತ್ತು, ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ರಾಜಧಾನಿ ಮತ್ತು ಶತಾಬ್ದಿಗಳು ಸೇರಿದಂತೆ ಭಾರತೀಯ ರೈಲ್ವೇ ತಮ್ಮ ರೈಲುಗಳಲ್ಲಿ ಗುಣಮಟ್ಟದ ಗುಣಮಟ್ಟದ ಆಹಾರಕ್ಕಾಗಿ ಆಗಾಗ ಟೀಕೆಗೆ ಒಳಗಾಗಿದೆ. ಆದರೆ ಈಗ ಅಂತಹ ಪ್ರಕರಣಗಳು ವಂದೇ ಭಾರತ್‌ ರೈಲಿನಲ್ಲಿಯೂ ಸಂಭವಿಸುತ್ತಿವೆ. ಇತ್ತೀಚೆಗೆ ಪ್ರಯಾಣಿಕರೊಬ್ಬರು ಭೋಪಾಲ್‌ನಿಂದ ಗ್ವಾಲಿಯರ್‌ಗೆ ಪ್ರಯಾಣಿಸುವಾಗ ಪರೋಟದಲ್ಲಿ ಜಿರಳೆ ಕಂಡು ಆಹಾರದ ಫೋಟೋಗಳನ್ನು ಟ್ವೀಟ್ ಮಾಡಿದ್ದರು.

ತನ್ನ ಟ್ವೀಟ್‌ನಲ್ಲಿ, ಪ್ರಯಾಣಿಕ ಸುಬೋಧ್ ಪಹಲಾಜನ್ ಪರೋಟದಲ್ಲಿ ಜಿರಳೆ ಕಾಣುವ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೆಹಲಿ ಮತ್ತು ಭೋಪಾಲ್ ನಡುವೆ 700 ಕಿಮೀಗಳನ್ನು ಕ್ರಮಿಸಲು 7 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:01 am, Fri, 28 July 23

ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ