Medak: ಮನೆ ಮೇಲ್ಛಾವಣಿ ಕುಸಿದು ಗರ್ಭದಲ್ಲಿದ್ದ ಮಗು ಸಾವು, ತಾಯಿಯ ಸ್ಥಿತಿ ಗಂಭೀರ
ವೈದ್ಯರು ತಪಾಸಣೆ ನಡೆಸಿದಾಗ ಯಾಸ್ಮಿನ್ ಹೊಟ್ಟೆಯಲ್ಲಿ ಭ್ರೂಣ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಕೂಡಲೇ ಆಕೆಯನ್ನು ಹೈದರಾಬಾದ್‌ಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ.
ಮೇಡಕ್, ಜು. 28: ಮನೆಯ ಮೇಲ್ಛಾವಣಿ ಕುಸಿದು ಬಿದ್ದು (house Roof collapse) ಗರ್ಭದಲ್ಲಿದ್ದ ಮಗು (baby in fetus) ಸಾವನ್ನಪ್ಪಿದೆ. ಇನ್ನು, ತಾಯಿಯ (mother) ಸ್ಥಿತಿ ಚಿಂತಾಜನಕವಾಗಿದೆ. ಬುಧವಾರ (ಜುಲೈ 27) ಮೇಡಕ್ (Medak) ಜಿಲ್ಲೆಯಲ್ಲಿರುವ ಮಿಲಿಟರಿ ಕಾಲೋನಿಯಲ್ಲಿ ಈ ದಾರುಣ ಘಟನೆ ನಡೆದಿದೆ. ವಿವರಗಳನ್ನು ನೋಡುವುದಾದರೆ…
ಮೇಡಕ್ ನಿವಾಸಿ ಮೊಹಮ್ಮದ್ ಸರ್ವರ್ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರ ಎರಡನೇ ಮಗಳು ಯಾಸ್ಮಿನ್ ಸುಲ್ತಾನಾ ಅವರು ಗರ್ಭಿಣಿಯಾಗಿದ್ದರು. ಇನ್ನು 15 ದಿನಗಳಲ್ಲಿ ಹೆರಿಗೆಯಾಗಬೇಕಿತ್ತು. ಅಷ್ಟರಲ್ಲಿ ಭೀಕರ ಅವಘಡ ಸಂಭವಿಸಿದೆ. ಬುಧವಾರ ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ನೆನೆದು, ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಗರ್ಭಿಣಿ ಯಾಸ್ಮಿನ್ ಹಾಗೂ ಆಕೆಯ ತಾಯಿ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಟುಂಬಸ್ಥರು ಅವರನ್ನು ಮೇಡಕ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ತಪಾಸಣೆ ನಡೆಸಿದಾಗ ಯಾಸ್ಮಿನ್ ಹೊಟ್ಟೆಯಲ್ಲಿ ಭ್ರೂಣ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಕೂಡಲೇ ಆಕೆಯನ್ನು ಹೈದರಾಬಾದ್‌ಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಯಾಸ್ಮಿನ್ ಅವರ ತಾಯಿ ಚಾಂದ್ ಸುಲ್ತಾನಾ ಮೇಡಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಕಾಜಿಗಿರಿ ಶಾಸಕ ಮೈನಂಪಲ್ಲಿ ಹನುಮಂತ ರಾವ್ ಅವರು ಸುಲ್ತಾನ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಸ್ಥಳದಲ್ಲೇ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ