AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಆ್ಯಸಿಡ್ ಕೊಟ್ಟು ಶಾಲೆಯ ಶೌಚಾಲಯ ಕ್ಲೀನ್​ ಮಾಡಿಸಿದ ಶಿಕ್ಷಕರು; ವಿದ್ಯಾರ್ಥಿನಿ ಅಸ್ವಸ್ಥ

ಮುಖ್ಯೋಪಾಧ್ಯಾಯ ಮತ್ತು ಸಹ ಶಿಕ್ಷಕ ಮೂರನೇ ತರಗತಿ ವಿದ್ಯಾರ್ಥಿನಿ ಕೈಗೆ ಆ್ಯಸಿಡ್​ ಕೊಟ್ಟು ಶಾಲೆಯ ಶೌಚಾಲಯ ಕ್ಲೀನ್​ ಮಾಡಿಸಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ‌ತೂಬಿನಕೆರೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ರಾಮನಗರ: ಆ್ಯಸಿಡ್ ಕೊಟ್ಟು ಶಾಲೆಯ ಶೌಚಾಲಯ ಕ್ಲೀನ್​ ಮಾಡಿಸಿದ ಶಿಕ್ಷಕರು; ವಿದ್ಯಾರ್ಥಿನಿ ಅಸ್ವಸ್ಥ
ಅಸ್ವಸ್ಥಗೊಂಡಿರುವ ವಿದ್ಯಾರ್ಥಿನಿ ಹೇಮಲತಾ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ವಿವೇಕ ಬಿರಾದಾರ|

Updated on:Oct 07, 2023 | 2:59 PM

Share

ರಾಮನಗರ ಅ.07: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಿಂದ (Head Master) ಬೇಜವಾಬ್ದಾರಿ ತನದಿಂದ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಶಾಲೆಯ ಶೌಚಾಲಯ (Tolet) ಕ್ಲೀನ್ ಮಾಡಿ ಉಸಿರಾಟದ ಸಮಸ್ಯೆಯಿಂದ ವಿದ್ಯಾರ್ಥಿನಿ (Student) ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಗಡಿ ತಾಲೂಕಿನ ‌ತೂಬಿನಕೆರೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಹೇಮಲತಾ (9) ಮೂರನೇ ತರಗತಿ ಓದುತ್ತಿದ್ದಾಳೆ. ಶುಕ್ರವಾರ (ಅ.07) ಬ್ಲೀಚಿಂಗ್ ಪೌಡರ್, ಆ್ಯಸಿಡ್ ಕೊಟ್ಟು ಶೌಚಾಲಯ ಕ್ಲೀನ್ ಮಾಡುವಂತೆ ಹೇಮಲತಾಳಿಗೆ ಮುಖ್ಯೋಪಾಧ್ಯಾಯ ಸಿದ್ದಲಿಂಗಯ್ಯ ಗುರು, ಸಹ ಶಿಕ್ಷಕ ಬಸವರಾಜು ತಾಕೀತು ಮಾಡಿದ್ದಾರೆ.

ಶಿಕ್ಷಕರು ಹೇಳಿದಂತೆ ಹೇಮಲತಾ ಶೌಚಾಲಯ ಕ್ಲೀನ್ ಮಾಡಿದ್ದಾಳೆ. ಕ್ಲೀನ್​ ಮಾಡಿ ವಿದ್ಯಾರ್ಥಿನಿ ಹೇಮಲತಾ ಮನೆಗೆ ಬಂದ್ದಿದ್ದು, ಕೆಲ ಸಮಯದ ನಂತರ ಅಸ್ವಸ್ಥಗೊಂಡಿದ್ದಾಳೆ. ತಕ್ಷಣವೇ ಪೋಷಕರು ಮಾಗಡಿ ತಾಲೂಕು‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಹೇಮಲತಾಳನ್ನು ವಿಚಾರಿಸಿದಾಗ ಶೌಚಾಲಯ ಕ್ಲೀನ್​ ಮಾಡಿಸಿದ ಬಗ್ಗೆ ಹೇಳಿದ್ದಾಳೆ. ಅಲ್ಲದೆ ಆ್ಯಸಿಡ್ ವಾಸನೆಗೆ ಅಸ್ವಸ್ಥಗೊಂಡಿರುವುದಾಗಿ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಶಿಕ್ಷಕರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅಮಾನತು ಗೊಳಿಸುವಂತೆ ಪೋಷಕರು ಆಗ್ರಹಿಸಿದ್ದಾರೆ.

ಆಸ್ಪತ್ರೆಗೆ ಶಾಸಕ ಎಚ್ ಸಿ ಬಾಲಕೃಷ್ಣ ಭೇಟಿ ನೀಡಿ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದರು. “ಹೇಮಲತಾ ಸರಿಯಾಗಿ ವರ್ತನೆ ಮಾಡುತ್ತಿಲ್ಲ. ಏನೇನೋ ಮಾತನಾಡುತ್ತಿದ್ದಾಳೆ” ಎಂದು ಪೋಷಕರು ಶಾಸಕರ ಎದರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:31 am, Sat, 7 October 23