ಡ್ರಗ್ಸ್ ಪ್ರಕರಣದ ಸಮಗ್ರ ತನಿಖೆಯಾಗದಿದ್ದರೆ ಕರ್ನಾಟಕ ಬಂದ್ ಮಾಡುತ್ತೇವೆ: ವಾಟಾಳ್

|

Updated on: Sep 16, 2020 | 4:57 PM

ಮಾತೆತ್ತಿದರೆ ಬಂದ್ ಮಾಡುವುದಾಗಿ ಹೇಳುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದ ಸಮಗ್ರ ತನಿಖೆ ನಡೆಸದಿದ್ದರೆ ಕರ್ನಾಟಕ ಬಂದ್​ಗೆ ಕರೆ ನೀಡುವುದಾಗಿ ಎಚ್ಚರಿಸಿದ್ದಾರೆ. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತಾಡಿದ ನಾಗರಾಜ್, ‘‘ಪ್ರಕರಣದಲ್ಲಿ ರಾಗಣಿ, ಸಂಜನಾ ಬಿಟ್ಟರೆ ಬೇರೆ ಯಾರೂ ಇಲ್ವಾ? ಹಲವಾರು ರಾಜಕಾರಣಿ ಮತ್ತು ಅಧಿಕಾರಿಗಳ ಮಕ್ಕಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಅವರನ್ನು ಯಾಕೆ ಬಂಧಿಸುತ್ತಿಲ್ಲ?’’ ಎಂದು ಪ್ರಶ್ನಿಸಿದರು ‘‘ಪೊಲೀಸರು ಕೇವಲ ಚಿತ್ರರಂಗದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಮತ್ತು ಅವರನ್ನು […]

ಡ್ರಗ್ಸ್ ಪ್ರಕರಣದ ಸಮಗ್ರ ತನಿಖೆಯಾಗದಿದ್ದರೆ ಕರ್ನಾಟಕ ಬಂದ್ ಮಾಡುತ್ತೇವೆ: ವಾಟಾಳ್
Follow us on

ಮಾತೆತ್ತಿದರೆ ಬಂದ್ ಮಾಡುವುದಾಗಿ ಹೇಳುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದ ಸಮಗ್ರ ತನಿಖೆ ನಡೆಸದಿದ್ದರೆ ಕರ್ನಾಟಕ ಬಂದ್​ಗೆ ಕರೆ ನೀಡುವುದಾಗಿ ಎಚ್ಚರಿಸಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತಾಡಿದ ನಾಗರಾಜ್, ‘‘ಪ್ರಕರಣದಲ್ಲಿ ರಾಗಣಿ, ಸಂಜನಾ ಬಿಟ್ಟರೆ ಬೇರೆ ಯಾರೂ ಇಲ್ವಾ? ಹಲವಾರು ರಾಜಕಾರಣಿ ಮತ್ತು ಅಧಿಕಾರಿಗಳ ಮಕ್ಕಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಅವರನ್ನು ಯಾಕೆ ಬಂಧಿಸುತ್ತಿಲ್ಲ?’’ ಎಂದು ಪ್ರಶ್ನಿಸಿದರು

‘‘ಪೊಲೀಸರು ಕೇವಲ ಚಿತ್ರರಂಗದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಮತ್ತು ಅವರನ್ನು ಮಾತ್ರ ಬಂಧಿಸಿದ್ದಾರೆ. ರಾಜಕಾರಣಿಗಳ ಮಕ್ಕಳು ಅವರಿಗೆ ಸಿಗುತ್ತಿಲ್ಲವೇ? ಪ್ರಕರಣವನ್ನು ಮುಚ್ಚಿಹಾಕುವಂತಹ ತಂತ್ರಗಾರಿಕೆ ನಡೆಯುತ್ತಿದೆ. ನಾವು ಹಾಗಾಗಲು ಬಿಡಲ್ಲ. ಅಂಥ ಪ್ರಯತ್ನವೇನಾದರೂ ಸಫಲವಾದರೆ ನಾವು ಉಗ್ರ ಹೋರಾಟ ನಡೆಸುತ್ತೇವೆ, ಕರ್ನಾಟಕ ಬಂದ್​ಗೆ ಕರೆ ನೀಡುತ್ತೇವೆ,’’ ಎಂದು ವಾಟಾಳ್ ಎಚ್ಚರಿಸಿದರು.