ಬೆಳಗಾವಿ: ಜಿಲ್ಲೆಯ ರಾಮದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಕಚೇರಿಯಲ್ಲಿ ಕಳ್ಳತನವಾಗಿದೆ. ರಾಮದುರ್ಗದಲ್ಲಿರುವ ಶಾಸಕರ ಕಚೇರಿಯ ಬಾಗಿಲಿನ ಬೀಗ ಒಡೆದ ಖದೀಮರು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಅಚ್ಚರಿಯ ಸಂಗತಿಯೆಂದರೆ ಕಚೇರಿಯಲ್ಲಿ ಏನು ಕಳ್ಳತನವಾಗಿದೆ ಎಂದು ಪೊಲೀಸರು ಪ್ರಶ್ನಿಸಿದರೆ ಆಫೀಸ್ ಸಿಬ್ಬಂದಿ ಮಾತ್ರ ಪೂರಾ ಗಪ್ಚುಪ್ ಅಂತೆ! ಸಿಬ್ಬಂದಿ ಯಾವುದೇ ಗುಟ್ಟು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಸದ್ಯ ಖಾಕಿ ಪಡೆ ಕಚೇರಿ ಬಳಿಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ. ಜೊತೆಗೆ, ಶ್ವಾನ ದಳದ ಸಹಾಯದಿಂದ ಆರೋಪಿಗಳ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ.
ರಾಬರ್ಟ್ ಸಿನಿಮಾ ನಿರ್ಮಾಪಕರ ಅಣ್ಣನ ಕೊಲೆಗೆ ಸ್ಕೆಚ್: 7 ಜನ ಖಾಕಿ ವಶಕ್ಕೆ
Published On - 5:25 pm, Sun, 20 December 20