ಯುವಕನ ಸಾವು: ಮೈಮೇಲಿನ ಗಾಯದ ಗುರುತು ಬೇರೆಯೇ ಕಥೆ ಹೇಳುತ್ತಿದೆ ಏನದು?
ಮಂಡ್ಯದ ಸಾದತ್ ನಗರದ ರೂಹಿತ್ ಪಾಷಾ (21) ಮೃತನಾಗಿದ್ದು,ಈತನ ಮೈ ಮೇಲಿನ ಗಾಯದ ಗುರುತಿನಿಂದ ಇದು ಸಹಜವಾದ ಸಾವಲ್ಲ ಕೊಲೆ ಎಂದು ಶಂಕಿಸಲಾಗಿದೆ.

ಪ್ರಾತಿನಿಧಿಕ ಚಿತ್ರ
ಮಂಡ್ಯ: ಪ್ಲ್ಯಾಸ್ಟಿಕ್ ಲೋಡ್ ಮಾಡುವ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರಗಾವಲು ಗ್ರಾಮದಲ್ಲಿ ನಡೆದಿದೆ.
ಮಂಡ್ಯದ ಸಾದತ್ ನಗರದ ರೂಹಿತ್ ಪಾಷಾ (21) ಮೃತನಾಗಿದ್ದು, ಈತನ ಮೈ ಮೇಲೆ ಗಾಯದ ಗುರುತು ಕಂಡು ಬಂದ ಕಾರಣ ಇದು ಸಹಜವಾದ ಸಾವಲ್ಲ ಕೊಲೆ ಎಂದು ಶಂಕಿಸಲಾಗಿದೆ.
ಮಾಲೀಕ ಹಾಗೂ ಜೊತೆಗಾರರ ನಡುವೆ ಜಗಳ ನಡೆದು ಆತನನ್ನ ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಎಸ್ಪಿ ಪರಶುರಾಮ್ಗೆ ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ. ಸದ್ಯ ಕಿರಗಾವಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.