ಬೆಂಗಳೂರು: ರಮೇಶ್ ಜಾರಕಿಹೊಳಿ CD ಕೇಸ್ಗೆ ಸಂಬಂಧಿಸಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎಸ್ಐಟಿಗೆ ಒಂದು ಮಹತ್ವದ ಸಾಕ್ಷಿ ಸಿಕ್ಕಿದೆ. ಸಿಡಿ ಬಿಡುಗಡೆ ಸಮಯದಲ್ಲಿ ಸಿಡಿ ಲೇಡಿ ಜೊತೆಗೆ ಇದ್ದ ಕೋಲಾರದ ಮಾಲೂರು ಮೂಲದ ಓರ್ವ ಯುವತಿಯನ್ನು ಪತ್ತೆ ಮಾಡಿದ್ದ ಎಸ್ಐಟಿ ಆಕೆಯಿಂದ ಮಹತ್ವದ ಸಾಕ್ಷಿ ಕಲೆ ಹಾಕಿದೆ. ಮಾಲೂರಿನ ಈ ಯುವತಿ ಸಿಡಿ ರಿಲೀಸ್ ಆಗುವ ಸಮಯದಲ್ಲಿ ಹಾಗೂ ಸಿಡಿ ರಿಲೀಸ್ ಆಗಿದ ನಂತ್ರ ಸಹ ಸಿಡಿ ಲೇಡಿ ಜೊತೆಗೆ ಇದ್ದಾಳಂತೆ. ಸದ್ಯ ಈಕೆಯಿಂದ ಹೇಳಿಕೆ ಪಡೆದಿರುವ ಎಸ್ಐಟಿಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಹಾಗಾದ್ರೆ ಆ ಯುವತಿ ನೀಡಿದ ಹೇಳಿಕೆ ಏನು ಎಂಬುದರ ಡೀಟೈಲ್ಸ್ ಇಲ್ಲಿದೆ.
ಸಿಡಿ ಲೇಡಿ ಖಿನ್ನತೆಗೆ ಒಳಗಾಗಿದ್ದಾಗ ಸಾಥ್ ನೀಡಿದ್ದ ಮಾಲೂರಿನ ಯುವತಿ
ಮಾಲೂರಿನ ಈ ಯುವತಿಗೆ ಸಿಡಿ ಗ್ಯಾಂಗ್ ಒಂದು ದಿನಕ್ಕೆ 25 ಸಾವಿರದಂತೆ ಹಣ ನೀಡಿದ್ದಾರಂತೆ. ಸಿಡಿ ರಿಲೀಸ್ ಆಗುವ ಸಮಯದಲ್ಲಿ ಸಿಡಿ ಲೇಡಿ ತನ್ನ ಮುಖ ಎಲ್ಲವು ಬಯಲಾಗಿದೆ ಎಂದು ಖಿನ್ನತೆಗೆ ಒಳಗಾಗಿದ್ದಳಂತೆ. ಆಗ ಸಿಡಿ ಲೇಡಿಗೆ ಕೋಲಾರದ ಮಾಲೂರಿನ ಯುವತಿ ಮಾನಸಿಕವಾಗಿ ಧೈರ್ಯ ತುಂಬಿ ಸಹಾಯ ಮಾಡಿದ್ದಾಳಂತೆ. ನಂತ್ರ ಯುವತಿ ಜೊತೆಗೂ ಸಾಕಷ್ಟು ಸಮಯ ಕಳೆದಿದ್ದಾಳೆ. ಈ ವೇಳೆ ಯುವತಿಯನ್ನು ಯಾರು ಯಾರು ಭೇಟಿ ಮಾಡಿದ್ರು. ಯಾರು ಯಾರು ಎಷ್ಟು ಹಣ ನೀಡಿದ್ರು ಎಲ್ಲವನ್ನೂ ಮಾಲೂರಿನ ಈ ಯುವತಿ ಬಾಯಿ ಬಿಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಎಸ್ಐಟಿ ಕೋಲಾರದ ಯುವತಿಯನ್ನು ಸಾಕ್ಷಿಯಾಗಿ ಪರಿಗಣಿಸಿದೆ.
ಮಾಲೂರಿನ ಯುವತಿ, ಸಿಡಿ ಲೇಡಿ ಜೊತೆ ಎಲ್ಲಿ ಎಲ್ಲಿ ಇದ್ದರು ಎಂದು ಸ್ಥಳವನ್ನು ತೋರಿಸಿದ್ದಾರೆ. ವಿಟ್ನೆಸ್ ಮಾಡಿಕೊಂಡು ಹೇಳಿಕೆ ಕೂಡ ದಾಖಲಿಸಲಾಗಿದೆ. ಸದ್ಯ ಎಸ್ಐಟಿ ಹೆಚ್ಚಿನ ತನಿಖೆ ಮುಂದುವರೆಸಿದ್ದು ಇದುವರೆಗೆ 70ಕ್ಕೂ ಹೆಚ್ಚು ಜನರ ಹೇಳಿಕೆ ದಾಖಲಿಸಿಕೊಂಡಿದೆ. ತನಿಖೆ ಅಂಗವಾಗಿ ಹಲವಾರು ಜನರನ್ನು ವಿಚಾರಣೆ ನಡೆಸಿದೆ. ಇದುವರೆಗೆ ಎಸ್ಐಟಿಗೆ ಸಿಕ್ಕಿರೊ ಪ್ರಮುಖ ಸಾಕ್ಷಿ ಎಂದರೆ ಯುವತಿ ಮಾಜಿ ಬಾಯ್ ಫ್ರೆಂಡ್ ಹಾಗೂ ಕೋಲಾರದ ಮಾಲೂರಿನ ಯುವತಿ.
ಸಿಡಿ ಕಿಂಗ್ ಪಿನ್ಗಳ ಹಿಂದೆ ಗ್ರಾನೈಟ್ ಉದ್ಯಮಿ
ಸಂಪೂರ್ಣ ಕೇಸ್ನಲ್ಲಿ ಕೋಟ್ಯಾಂತರ ರೂ ಹಣ ಖರ್ಚಾಗಿದೆ. ಗ್ರಾನೈಟ್ ಉದ್ಯಮಿ ಕನಕಪುರದ ಶಿವಕುಮಾರ್ನಿಂದ ಫೈನಾನ್ಸ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಶಿವಕುಮಾರ್ ಮೂಲತಃ ಕನಕಪುರದವರು. ಜೆಪಿನಗರದಲ್ಲಿ ವಾಸವಾಗಿರುವ ಉದ್ಯಮಿ ಶಿವಕುಮಾರ್, ನರೇಶ್ ಹಾಗೂ ಶ್ರವಣ್ಗೆ ಹಣ ಸಂದಾಯ ಮಾಡಿದ್ದಾರೆ. ಸದ್ಯ ಶಿವಕುಮಾರ್ ಹಾಗೂ ಆತನ ಚಾಲಕ ಪರಶಿವಮೂರ್ತಿ ಸಹ ನಾಪತ್ತೆಯಾಗಿದ್ದಾರೆ. ಶಿವಕುಮಾರ್ಗಾಗಿಯೂ ಎಸ್ಐಟಿ ಹುಡುಕಾಟ ನಡೆಸುತ್ತಿದೆ. ಸದ್ಯ ತನ್ನ ಗ್ರಾನೈಟ್ ಕ್ವಾರೆ ಹಾಗೂ ತನ್ನ ಎಲ್ಲ ಉದ್ಯಮಗಳನ್ನು ಅರ್ಧಕ್ಕೆ ನಿಲ್ಲಿಸಿ ಶಿವಕುಮಾರ್ ಎಸ್ಕೇಪ್ ಅಗಿದ್ದಾರೆ.
(Ramesh Jarkiholi CD Case CD Lady Friend From Malur Narrates The Travel History of The CD Gang to SIT)
ಇದನ್ನೂ ಓದಿ: ನಾನು ಉಲ್ಟಾ ಹೊಡೆದಿಲ್ಲ, ಈ ಹಿಂದೆ ನೀಡಿದ ಹೇಳಿಕೆಗೆ ಬದ್ಧಳಾಗಿದ್ದೇನೆ.. ರಿಲೀಸ್ ಆಯ್ತು ಸಿಡಿ ಲೇಡಿಯ ಮತ್ತೊಂದು ವಿಡಿಯೋ