ಆರೋಪಿ ಜಾರಕಿಹೊಳಿ ಗೂಳಿ ಥರಾ ಓಡಾಡಿಕೊಂಡಿದ್ದಾನೆ. ತಕ್ಷಣ ಆತನನ್ನು ಅರೆಸ್ಟ್ ಮಾಡಿ: ಸಿಡಿ ಯುವತಿ ಪರ ವಕೀಲ ಎಫ್ ಬಿ ಲೈವ್ ಮೂಲಕ ಆಗ್ರಹ

ಕಬ್ಬನ್ ಪಾರ್ಕ್ ಪೊಲೀಸರು, SITಯವರು ಆರೋಪಿಯನ್ನು ತಕ್ಷಣ ಬಂಧಿಸಬೇಕು. ಇವರನ್ನು ಗೂಳಿಯಂತೆ ತಿರುಗಾಡಲು ಬಿಟ್ಟರೆ ಸಾಕ್ಷ್ಯ ನಾಶ. ಸಾಮಾನ್ಯ ವ್ಯಕ್ತಿಯ ಮೇಲೆ 376C ಕೇಸ್ ದಾಖಲಾಗಿದ್ದರೆ ಅವರನ್ನು ಪೊಲೀಸರು ಸುಮ್ಮನೆ ಬಿಡುತ್ತಿದ್ದರಾ? ಜಗದೀಶ್

ಆರೋಪಿ ಜಾರಕಿಹೊಳಿ ಗೂಳಿ ಥರಾ ಓಡಾಡಿಕೊಂಡಿದ್ದಾನೆ. ತಕ್ಷಣ ಆತನನ್ನು ಅರೆಸ್ಟ್ ಮಾಡಿ: ಸಿಡಿ ಯುವತಿ ಪರ ವಕೀಲ ಎಫ್ ಬಿ ಲೈವ್ ಮೂಲಕ ಆಗ್ರಹ
ಸಿಡಿಯಲ್ಲಿರುವ ಯುವತಿ ಮತ್ತು ವಕೀಲ ಜಗದೀಶ್

Updated on: Mar 27, 2021 | 8:28 AM

ಬೆಂಗಳೂರು: ನಾವು ಯಾರ ವಿರುದ್ಧ ದೂರು ನೀಡಿದ್ದೆವೋ ಅವರಿಂದ ಬೆದರಿಕೆ ಬರುತ್ತಿದೆ. ಮಾಧ್ಯಮಗಳ ಮೂಲಕ ಬೆದರಿಕೆ ಹಾಕುವ ಕೆಲಸ ಮಾಡ್ತಿದ್ದಾರೆ. ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿ ಪರ ವಕೀಲ ಜಗದೀಶ್ ಆಗ್ರಹಿಸಿದ್ದಾರೆ. ಯುವತಿ ಪರ ದೂರು ನೀಡಿದ್ದ ಜಗದೀಶ್ ಕುಮಾರ್ ಫೇಸ್‌ಬುಕ್ ಲೈವ್‌ನಲ್ಲಿ ವಕೀಲ ಜಗದೀಶ್ ಕುಮಾರ್ ಆಗ್ರಹಿಸಿದ್ದಾರೆ. ಇವರನ್ನು ಅರೆಸ್ಟ್ ಮಾಡಿದರೆ ಸರ್ಕಾರ ಬೀಳುತ್ತೆ ಎನ್ನುತ್ತಾರೆ. ಇವರು ರಾಜ್ಯ ಸರ್ಕಾರಕ್ಕೆ ಬೆದರಿಕೆವೊಡ್ಡಿ ಓಡಾಡುತ್ತಿದ್ದಾರೆ. ಆರೋಪಿ ತನಿಖೆಯ ಹಾದಿಯನ್ನು ತಪ್ಪಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ SIT, ಪೊಲೀಸರು ಏನು ಮಾಡುತ್ತಿದ್ದಾರೆ. ಆರೋಪಿ ಸಾಕ್ಷಿಗಳನ್ನು ಹೆದರಿಸುತ್ತಿದ್ದಾರೆ ಎಂದು ಜಗದೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸರು, SITಯವರು ಆರೋಪಿಯನ್ನು ತಕ್ಷಣ ಬಂಧಿಸಬೇಕು. ಇವರನ್ನು ಗೂಳಿಯಂತೆ ತಿರುಗಾಡಲು ಬಿಟ್ಟರೆ ಸಾಕ್ಷ್ಯ ನಾಶ. ಸಾಮಾನ್ಯ ವ್ಯಕ್ತಿಯ ಮೇಲೆ 376C ಕೇಸ್ ದಾಖಲಾಗಿದ್ದರೆ ಅವರನ್ನು ಪೊಲೀಸರು ಸುಮ್ಮನೆ ಬಿಡುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ. ಇವರನ್ನೇಕೆ ಬಂಧಿಸಿಲ್ಲವೆಂದು ಜಗದೀಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’; ಬೆಳ್ಳಂಬೆಳಗ್ಗೆ ಬಿಡುಗಡೆಯಾದ ಸಿಡಿ ಲೇಡಿಯ ಇನ್ನೊಂದು ವಿಡಿಯೋದಲ್ಲಿ ಹೇಳಿಕೆ!

Ramesh Jarkiholi: ‘ಡಿಕೆಶಿ ನನ್ನ ಹಳೆಯ ಗೆಳೆಯ; ಅವರಿಗೆ ಒಳ್ಳೆಯದಾಗಬೇಕು‘; ಆಡಿಯೋ ವೈರಲ್ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಹೇಳಿಕೆ