Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramesh Jarkiholi: ‘ಡಿಕೆಶಿ ನನ್ನ ಹಳೆಯ ಗೆಳೆಯ; ಅವರಿಗೆ ಒಳ್ಳೆಯದಾಗಬೇಕು‘; ಆಡಿಯೋ ವೈರಲ್ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಹೇಳಿಕೆ

ಡಿ.ಕೆ.ಶಿವಕುಮಾರ್ ನನ್ನ ಹಳೆಯ ಗೆಳೆಯ, ಡಿ.ಕೆ.ಶಿವಕುಮಾರ್‌ಗೆ ಒಳ್ಳೆಯದಾಗಬೇಕು. ನನ್ನ ಕಷ್ಟ ಸುಖದಲ್ಲಿ ಕೂಡಿ ಬಂದವ ಡಿ.ಕೆ.ಶಿವಕುಮಾರ್​. ಆಡಿಯೋದಲ್ಲಿ ಹೆಸರಿದೆ ಅಂತಾ ಡಿಕೆಶಿ ಆರೋಪಿ ಅಲ್ಲ: ಮಾಜಿ ಸಚಿವ ರಮೇಶ್ ಜಾರಕಿಹೊಳಿ

Ramesh Jarkiholi: ‘ಡಿಕೆಶಿ ನನ್ನ ಹಳೆಯ ಗೆಳೆಯ; ಅವರಿಗೆ ಒಳ್ಳೆಯದಾಗಬೇಕು‘; ಆಡಿಯೋ ವೈರಲ್ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಹೇಳಿಕೆ
ರಮೇಶ್​ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್
Follow us
guruganesh bhat
|

Updated on:Mar 26, 2021 | 7:56 PM

ಬೆಂಗಳೂರು: ಸಿಡಿಯಲ್ಲಿದ್ದ ಯುವತಿ ಮಾತನಾಡಿದ್ದು ಎಂದು ಹೇಳಲಾದ ಆಡಿಯೋ ವೈರಲ್ ಆದ ಬೆನ್ನಲ್ಲೇ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದರು. ‘ಆ ಆಡಿಯೋ ನನಗೆ ಗೊತ್ತಿಲ್ಲ, ನಾನು ಕೇಳಿಸಿಕೊಂಡಿಲ್ಲ. ಡಿ.ಕೆ.ಶಿವಕುಮಾರ್ ನನ್ನ ಹಳೆಯ ಗೆಳೆಯ, ಡಿ.ಕೆ.ಶಿವಕುಮಾರ್‌ಗೆ ಒಳ್ಳೆಯದಾಗಬೇಕು. ನನ್ನ ಕಷ್ಟ ಸುಖದಲ್ಲಿ ಕೂಡಿ ಬಂದವ ಡಿ.ಕೆ.ಶಿವಕುಮಾರ್​. ಆಡಿಯೋದಲ್ಲಿ ಹೆಸರಿದೆ ಅಂತಾ ಡಿಕೆಶಿ ಆರೋಪಿ ಅಲ್ಲ. ಕಷ್ಟ ಸುಖದಲ್ಲಿ ಡಿಕೆಶಿ ನಾನು ಕೂಡಿ ಬಾಳಿದ್ದೇವೆ. ಹೀಗಾಗಿ, ನನ್ನ ರೀತಿಯಲ್ಲಿ ಡಿಕೆಶಿ ರಾಜೀನಾಮೆ ಕೊಡಬಾರದು. ನಾನು ಯಾರಿಗೂ ಕೆಟ್ಟದ್ದನ್ನು ಬಯಸುವ ವ್ಯಕ್ತಿ ಅಲ್ಲ’ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಎಫ್ಐಆರ್ ದಾಖಲಾಯಿತು ಎಂದ ಮಾತ್ರಕ್ಕೆ ನಾನು ಆರೋಪಿ ಅಲ್ಲ. ಮೊದಲು ನಾನು ದಾಖಲಿಸಿದ FIR ತನಿಖೆ ಆಗಲಿ. ನನಗೆ ಜಾಮೀನು ಪಡೆಯುವ ಅವಶ್ಯಕತೆಯೇ ಇಲ್ಲ. ನಾನು ಯಾರಿಗೂ ಕೆಟ್ಟದ್ದನ್ನು ಬಯಸುವ ವ್ಯಕ್ತಿ ಅಲ್ಲ. ನಾನು ನಿರಪರಾಧಿಯಾಗಿ ಹೊರಗಡೆ ಬರುತ್ತೇನೆ. ನಾನು ಜಾಮೀನು ತೆಗೆದುಕೊಳ್ಳುವ ತಪ್ಪು ಮಾಡಿಲ್ಲ. ನಾಳೆ ಇದಕ್ಕಿಂತ ಸ್ಫೋಟಕ ಮಾಹಿತಿ ಇದೆ. ನಾಳೆ ಸಂಜೆ 4ರಿಂದ 6 ಗಂಟೆಗೆ ದೊಡ್ಡ ಸುದ್ದಿ ಸ್ಫೋಟ ಮಾಡುತ್ತೇನೆ. ಅಲ್ಲಿಯವರೆಗೆ ವಕೀಲರು ಏನನ್ನೂ ಮಾತಾಡದಂತೆ ಹೇಳಿದ್ದಾರೆ. ನಾನು ಈಗ ಆ ಆಡಿಯೋ ಟಿವಿ ನಲ್ಲಿ ನೋಡಿದೆ. ಆ ಹೆಣ್ಣು ಮಗು ಕೂಡ ಗ್ರಾಫಿಕ್ಸ್ ಎಂದು ಹೇಳಿದ್ದಾರೆ. ನಂದಲ್ಲ ಅಂತಾ ಹೇಳಿದ್ದಾರೆ,ನಾನು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ನಾಳೆ ಸಂಜೆ 4ರಿಂದ 6 ಗಂಟೆಗೆ ದೊಡ್ಡ ಸುದ್ದಿ ಸ್ಫೋಟ ಮಾಡುತ್ತೇನೆ ಎಂದು ಅವರು ಹೇಳಿದರು.

ಆಡಿಯೋ ವೈರಲ್

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಈ ಇಳಿಸಂಜೆಯಲ್ಲಿ ಸ್ಫೋಟಕ ತಿರುವು ದೊರೆತಿದೆ.​ ಆ ಸಿಡಿಗೆ ಸಂಬಂಧಿಸಿದ ಯುವತಿ ತನ್ನ ಕುಟುಂಬದವರ ಜತೆ ಮಾತಾಡಿರುವುದು ಎಂದು ಹೇಳಲಾದ ಆಡಿಯೋ ತುಣುಕು ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಗೆಳೆಯ ಆಕಾಶ್​ ಜತೆಗಿದ್ದ ವೇಳೆyಲ್ಲಿ ಅವಳು ತನ್ನ ತಮ್ಮನ ಜತೆ ಮಾತನಾಡಿದ್ದಾಳೆ ಎನ್ನುವ 6 ನಿಮಿಷ 59 ಸೆಕೆಂಡ್​ಗಳ ಆಡಿಯೋ ಹೊರಬಿದ್ದಿದೆ.  ‘ನಾನು ನಂಬುವ ಕೃಷ್ಣನ ಮೇಲಾಣೆ ವೈರಲ್ ಆದ ಸಿಡಿ ವಿಡಿಯೋದಲ್ಲಿ ಇರುವುದು  ನಾನಲ್ಲ, ನನ್ನ ನಂಬು’ ಎಂದು ಆಡಿಯೋ ತುಣುಕಿನಲ್ಲಿ ತನ್ನ ತಮ್ಮನ ಬಳಿ ಯುವತಿ ಮನವಿ ಮಾಡಿದ್ದಾಳೆ. ಅಲ್ಲದೇ ‘ಇವೆಲ್ಲವೂ ನಿನಗೆ ಬೇಕಾ?‘ ಎಂದು ಯುವತಿಯ ತಮ್ಮ ಅವಳನ್ನು ಪ್ರಶ್ನಿಸುತ್ತಾನೆ.  ಅದಕ್ಕುತ್ತರಿಸುವ ಯುವತಿ,  ಖುದ್ದು ಡಿ. ಕೆ.ಶಿವಕುಮಾರ್ ಮತ್ತು ಡಿಕೆಶಿ ಕಡೆಯವರೇ  ಬರುತ್ತಿದ್ದಾರೆ ಎಂದು ಆಡಿಯೋ ತುಣುಕಿನಲ್ಲಿ ಹೇಳಲಾಗಿದೆ. ಈ ಆಡಿಯೋ ತುಣುಕು ವೈರಲ್ ಆಗುತ್ತಿದೆ. ಈ ಆಡಿಯೋದ ಕುರಿತು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಅಥವಾ ಹೇಳಿಕೆ ಹೊರಬಿದ್ದಿಲ್ಲ. ತನಿಖೆಯ ನಂತರವಷ್ಟೇ ಅಧಿಕೃತ ಮಾಹಿತಿ ತಿಳಿದುಬರಬೇಕಿದೆ.

“ನಾನು ಡಿ.ಕೆ.ಶಿವಕುಮಾರ್‌ ಅವರ ಜತೆಗೆ ಇದ್ದೇನೆ” ಎಂದು ಯುವತಿಯದ್ದು ಎಂದು ಹೇಳಲಾದ ಸ್ಫೋಟಕ ಆಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಲಾಗಿದೆ.  ನನ್ನ ಕಡೆ ಡಿಕೆಶಿ ಕಡೆಯವರು ಇದ್ದಾರೆ, ಯಾರೂ ಹೆದರಬೇಡಿ. ಖುದ್ದು ಅವರೇ ಬಂದು ಮಾತಾಡ್ತಾರೆ ಎಂದು  ಯುವತಿಯದ್ದು ಎಂದು ಹೇಳಲಾದ ಆಡಿಯೋದಲ್ಲಿ ಕೇಳಿಸುತ್ತದೆ.

ಆಡಿಯೋ ತುಣುಕಿನಲ್ಲಿ ಏನಿದೆ? 3.31 ಟು 05.07ವರೆಗೆ

ತಾಯಿ – ಹಲೋ ಯುವತಿ – ಮಮ್ಮಿ ನೀನೇ ನನ್ನನ್ ನಂಬು ಮಮ್ಮಿ ತಾಯಿ – ನಂಬಿದೆ ಇಷ್ಟುದಿನ ನಂಬಿ ನಂಬಿನೇ ಹೀಗಾಗಿದೆ ಯುವತಿ – ನನಗೆ ಆಕಾಶ್​ ಮತ್ತು ನನ್ನ ಫ್ರೆಂಡ್ಸ್​ ಸಪೋರ್ಟ್ ಮಾಡ್ತಿದ್ದಾರೆ, ನೀವೆ ಸಪೋರ್ಟ್​ ಮಾಡ್ತಿಲ್ಲ, ನನಗೆ ಅಂಜಿಕೆ ಬರುತ್ತೆ ಮಮ್ಮಿ ತಾಯಿ – ನಾನು ನಂಬಿಗೆ ಅದಕ್ಕೆ ನಾನು ನಿನ್ನ ಬೆಂಗಳೂರಿನಲ್ಲಿ ಇಟ್ಟಿದ್ಧೇನೆ, ನನಗೆ ಗೊತ್ತಿದೆ ನನ್ನ ಮಗಳು ಹೇಗೆ ಅಂತ. ಯುವತಿ – ಇಲ್ಲ ಮಮ್ಮಿ ಅದೆಲ್ಲಾ ಗ್ರಾಫಿಕ್ ಮಮ್ಮಿ ತಾಯಿ – ನಿಂದೆಲ್ಲಾ ಪೋಟೋಸ್​ ಇದ್ಯಲ್ಲಾ, ನೀನು ಸ್ವಲ್ಪ ದಿನ ಮನೆಗೆ ಬಂದುಬಿಡು ಯುವತಿ -ಎಲ್ಲಾ ಕ್ಲಿಯರ್ ಮಾಡಿಕೊಂಡ್ರೆ ಬರ್ತಿನಿ ತಾಯಿ – ಅವತ್ತೇ ನಾನು ಬೇಡ ಅಂತ ಹೇಳಿಲ್ವಾ..ರಾಜಕೀಯದವರ ಜೊತೆ ಹೋಗಬೇಡ ಅಂದಿಲ್ಲೇನು ಯುವತಿ – ನಿಮ್ಮ ಕಾಲಿಗೆ ಬೀಳುತ್ತೇನೆ, ಅಂಗೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ಅಪ್ಪನಿಗೆ ಏನು ಹೇಳಿಲ್ಲೇನು..? ತಾಯಿ – ನಿಮ್ಮ ಅಪ್ಪನಿಗೆ ಏನು ಹೇಳಿಲ್ಲ ಯುವತಿ – ಅಪ್ಪನಿಗೆ ಏನು ಹೇಳಿಲ್ವಾ ತಾಯಿ – ರಾಜಕೀಯ ಹೊಲಸು,ಅದೆಲ್ಲಾ ಏನು ಬೇಡೇ ಬೇಡ ಬಿಟ್ಟು ಊರಿಗೆ ಬಂದು ಬಿಡವ್ವಾ.. ಯುವತಿ – ಹ್ಹೂ

ಇದನ್ನೂ ಓದಿ:Ramesh Jarkiholi: ರಮೇಶ್ ಜಾರಕಿಹೊಳಿ ಪ್ರಕರಣದ ಯುವತಿಯದ್ದು ಎನ್ನಲಾದ ಸ್ಫೋಟಕ ಆಡಿಯೋ ಪತ್ತೆ; ಡಿ ಕೆ ಶಿವಕುಮಾರ್ ಹೆಸರು ಪ್ರಸ್ತಾಪ

ದೂರಿನ ಬೆನ್ನಲ್ಲೇ ಅರೆಸ್ಟ್ ಆಗಿಬಿಡ್ತಾರಾ ರಮೇಶ್ ಜಾರಕಿಹೊಳಿ? ಎಸ್​ಐಟಿ ಮುಂದಿನ ನಡೆ ಏನು?

Published On - 7:48 pm, Fri, 26 March 21