ಎಸ್​ಐಟಿ ವಿಚಾರಣೆ ಬಳಿಕ ಪೊಲೀಸ್ ಭದ್ರತೆಯೊಂದಿಗೆ ಬೆಳಗಾವಿಗೆ ಮರಳಿದ ಸಿಡಿ ಯುವತಿ ಪೋಷಕರು

| Updated By: ganapathi bhat

Updated on: Apr 05, 2022 | 1:10 PM

ಪೊಲೀಸ್ ಭದ್ರತೆಯೊಂದಿಗೆ ಯುವತಿ ಪೋಷಕರು ಬೆಳಗಾವಿಗೆ ತೆರಳಿದ್ದಾರೆ. ಸಿಡಿ ಲೇಡಿ ಪೋಷಕರಿಗೆ ಎಸ್​ಕಾರ್ಟ್​ ಭದ್ರತೆ ನೀಡಲಾಗಿದೆ. ಇನ್ಸ್​ಪೆಕ್ಟರ್​ ಪರಮೇಶ್ವರ್​ ಮತ್ತು ಇಬ್ಬರು ಕಾನ್​ಸ್ಟೇಬಲ್ ನೆರವಿನೊಂದಿಗೆ ಅವರು ಬೆಳಗಾವಿಗೆ ಮರಳಿದ್ದಾರೆ.

ಎಸ್​ಐಟಿ ವಿಚಾರಣೆ ಬಳಿಕ ಪೊಲೀಸ್ ಭದ್ರತೆಯೊಂದಿಗೆ ಬೆಳಗಾವಿಗೆ ಮರಳಿದ ಸಿಡಿ ಯುವತಿ ಪೋಷಕರು
ಸಿಡಿ ಯುವತಿಯ ಕುಟುಂಬಸ್ಥರು
Follow us on

ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ವಿದ್ಯಮಾನಗಳು ಇಂದು (ಮಾರ್ಚ್ 27) ಘಟಿಸಿವೆ. ಸಿಡಿಯಲ್ಲಿದ್ದ ಯುವತಿಯ ಹೆತ್ತವರು ಮತ್ತು ಸಹೋದರ ಎಸ್​ಐಟಿ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಬಳಿಕ ಮಾಧ್ಯಮದ ಜೊತೆಗೂ ಮಾತನಾಡಿದ್ದಾರೆ. ಈ ಘಟನೆಯ ಬಳಿಕ ಯುವತಿಯ ಮನೆಯವರು ಬೆಳಗಾವಿಗೆ ಮರಳಿದ್ದಾರೆ.

ಪೊಲೀಸ್ ಭದ್ರತೆಯೊಂದಿಗೆ ಯುವತಿ ಪೋಷಕರು ಬೆಳಗಾವಿಗೆ ತೆರಳಿದ್ದಾರೆ. ಸಿಡಿ ಲೇಡಿ ಪೋಷಕರಿಗೆ ಎಸ್​ಕಾರ್ಟ್​ ಭದ್ರತೆ ನೀಡಲಾಗಿದೆ. ಇನ್ಸ್​ಪೆಕ್ಟರ್​ ಪರಮೇಶ್ವರ್​ ಮತ್ತು ಇಬ್ಬರು ಕಾನ್​ಸ್ಟೇಬಲ್ ನೆರವಿನೊಂದಿಗೆ ಅವರು ಬೆಳಗಾವಿಗೆ ಮರಳಿದ್ದಾರೆ.

ಎಸ್​ಐಟಿ ವಿಚಾರಣೆ ಬಳಿಕ ಬೆಳಗಾವಿಗೆ ಹೊರಟಿರುವ ಯುವತಿ ಪೋಷಕರು ಈಗ ನೆಲಮಂಗಲ ಬಿಟ್ಟು ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ತಲುಪಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್​ ವಿಚಾರವಾಗಿ ಸಿಡಿ ಲೇಡಿಯ ಪೋಷಕರು ಸುದ್ದಿಗೋಷ್ಠಿ ನಡೆಸಿದ್ದರು. SIT ಟೆಕ್ನಿಕಲ್ ವಿಂಗ್​ನಲ್ಲಿ ಯುವತಿ ಪೋಷಕರು ಸುದ್ದಿಗೋಷ್ಠಿ ನಡೆಸಿದ್ದರು. ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ, ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಒಬ್ಬ ಹೆಣ್ಣುಮಗಳನ್ನ ಇಟ್ಟುಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ಸಂತ್ರಸ್ತೆ ಸಹೋದರ ಹೇಳಿದ್ದರು.

ಮಾರ್ಚ್ 2ರಂದು ಸಿಡಿ ಪ್ರಕರಣ ಬೆಳಕಿಗೆ ಬಂದಾಗ ನನ್ನ ಅಕ್ಕನ ಜೊತೆ ಮೊಬೈಲ್​ನಲ್ಲಿ ಚರ್ಚಿಸಿದ್ದ ಆಡಿಯೋ ವೈರಲ್​ ಆಗಿದೆ. ನನ್ನ ಅಕ್ಕನ ಮೊಬೈಲ್​ ಸ್ವಿಚ್​​ಆಫ್​ ಆಗಿತ್ತು. ನಮ್ಮ ಅಕ್ಕನನ್ನು ತಂದು ಕೊಡುವಂತೆ ಯುವತಿ ಸಹೋದರ ಮನವಿ ಮಾಡಿದ್ದಾರೆ. ಮಾರ್ಚ್ 2ನೇ ತಾರೀಖು ಡಿಕೆಶಿ ನಿವಾಸದ ಬಳಿ ತೆರಳಿದ್ದಳು. ನಮ್ಮ ಅಕ್ಕ ಡಿ.ಕೆ.ಶಿವಕುಮಾರ್​ ಮನೆ ಮನೆ ಬಳಿ ತೆರಳಿದ್ದಳು ಎಂದು ಸಿಡಿ ಲೇಡಿ ಸಹೋದರ ಹೇಳಿದ್ದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಬಿಜೆಪಿ ಸಂಸ್ಕೃತಿ ಬಿಂಬಿಸುವ ‘ದೊಡ್ಡ ದೊಡ್ಡ‘ ಮಾತಾಡಿದ್ದಾರೆ, ಇದು ಹೊಲಸುತನದ ಪರಮಾವಧಿ: ಕರ್ನಾಟಕ ಕಾಂಗ್ರೆಸ್

ನಮ್ಮ ಅಕ್ಕನನ್ನು ಡಿ.ಕೆ.ಶಿವಕುಮಾರ್ ಒತ್ತೆಯಾಳಾಗಿಸಿ ಕೊಂಡಿದ್ದಾರೆ; ಆಕೆಯನ್ನು ವಾಪಸ್​ ತಂದುಕೊಟ್ಟುಬಿಡಿ -ಸಿಡಿ ಲೇಡಿ ಸಹೋದರ

Published On - 7:55 pm, Sat, 27 March 21