ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್​ ಸನಿಹದಲ್ಲಿ ಸಿಡಿ ಯುವತಿ; ವಕೀಲ ಜಗದೀಶ್

|

Updated on: Mar 30, 2021 | 2:18 PM

ನ್ಯಾಯಾಲಯ ಯಾವಾಗ ಹೇಳುತ್ತೋ ಆವಾಗ ಯುವತಿಯನ್ನು ಕರೆದುಕೊಂಡು ಬರುತ್ತೇವೆ. ನ್ಯಾಯಾಲಯ ಕರೆತನ್ನಿ ಅಂದ್ರೆ ಕರೆದುಕೊಂಡು ಬರ್ತಿನಿ. ಸೆಕ್ಯೂರಿಟಿ ಸಿದ್ದತೆಯಾದ ತಕ್ಷಣ ಅನುಮತಿ ಕೊಡಬಹುದು. ಯುವತಿ ಇರೋ ಜಾಗದಲ್ಲಿ ಈಗಾಗಲೇ ಭದ್ರತೆ ಒದಗಿಸಲಾಗಿದೆ: ವಕೀಲ ಜಗದೀಶ್

ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್​ ಸನಿಹದಲ್ಲಿ ಸಿಡಿ ಯುವತಿ; ವಕೀಲ ಜಗದೀಶ್
ವಕೀಲ ಕೆ.ಎನ್.ಜಗದೀಶ್ ಕುಮಾರ್
Follow us on

ಬೆಂಗಳೂರು: ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್​ ಸನಿಹದಲ್ಲಿಯೇ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಇದ್ದಾರೆ. ವಕೀಲರ ಜೊತೆಗೆ ಯುವತಿ ನ್ಯಾಯಾಲಯ ತಲುಪಲಿದ್ದಾರೆ ಎಂದು ಯುವತಿಪರ ವಕೀಲ ಕೆ.ಎನ್.ಜಗದೀಶ್ ಹೇಳಿದರು. ಈ ಮೊದಲು ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ್ದ ಅವರು,​ ಅರ್ಧ ಗಂಟೆ ಅಥವಾ ಒಂದು ಗಂಟೆ, ಇಲ್ಲವೇ ಎರಡು ಗಂಟೆಗಳಲ್ಲಿ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರು ಮಾಡುತ್ತೇವೆ ಎಂದು ಹೇಳಿದ್ದರು. ಈ ಮೊದಲು ಸಿಆರ್‌ಪಿಸಿ 164 ಪ್ರಕಾರ ಕೋರ್ಟ್​ನಲ್ಲಿ ಹೇಳಿಕೆ ದಾಖಲು ಮಾಡುತ್ತೇವೆ ಎಂದು ನ್ಯಾಯಾಧೀಶರು ಆದೇಶಿಸಿದ ಬೆನ್ನಲ್ಲೇ ವಕೀಲ ಜಗದೀಶ್ ಈ ಹೇಳಿಕೆ ನೀಡಿದ್ದಾರೆ.

ಡಿಸಿಪಿ ಇಶಾಪಂಥ್ ಭದ್ರತೆಯಲ್ಲಿ ಯುವತಿ ಕೋರ್ಟ್​ಗೆ ಹಾಜರಾಗಲಿದ್ದಾಳೆ.ಪೊಲೀಸ್ ಸಿಬ್ಬಂದಿ ಕಣ್ಗಾವಲಿನಲ್ಲಿ ಸಂತ್ರಸ್ತ ಯುವತಿಯನ್ನು ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ ಎಂಬ ಮಾಹಿತಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ.

ನ್ಯಾಯಾಲಯ ಯಾವಾಗ ಹೇಳುತ್ತೋ ಆವಾಗ ಯುವತಿಯನ್ನು ಕರೆದುಕೊಂಡು ಬರುತ್ತೇವೆ. ನ್ಯಾಯಾಲಯ ಕರೆತನ್ನಿ ಅಂದ್ರೆ ಕರೆದುಕೊಂಡು ಬರ್ತಿನಿ. ಸೆಕ್ಯೂರಿಟಿ ಸಿದ್ದತೆಯಾದ ತಕ್ಷಣ ಅನುಮತಿ ಕೊಡಬಹುದು. ಯುವತಿ ಇರೋ ಜಾಗದಲ್ಲಿ ಈಗಾಗಲೇ ಭದ್ರತೆ ಒದಗಿಸಲಾಗಿದೆ. ನ್ಯಾಯಾಲಯ ಅನುಮತಿ ಕೊಟ್ಟ ತಕ್ಷಣ ಕರೆದುಕೊಂಡು ಬರ್ತೀನಿ. ಕಳೆದ 28 ದಿನಗಳಿಂದ ಆಕೆ ಒತ್ತಡದಲ್ಲಿದ್ದರು. ಅವರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ..

ಸಂತ್ರಸ್ತೆ ಕೋರ್ಟ್​ನಿಂದ ನಾಲ್ಕು ಕಿಮೀ ದೂರದಲ್ಲಿದ್ದಾಳೆ. ಐದು ಕಾರಿನಲ್ಲಿ ಯುವತಿಯ ಜತೆ ವಕೀಲರ ತಂಡ ಆಗಮಿಸುತ್ತಿದೆ ಎಂಬ ಮಾಹಿತಿಗಳೂ ದೊರೆತಿವೆ. ಈ ಪ್ರಕರಣದಲ್ಲಿ ಆರೋಪಿ ಎನಿಸಿರುವ ವ್ಯಕ್ತಿ ಎಸ್​ಐಟಿ ತನಿಖಾ ತಂಡಕ್ಕೆ ಉತ್ತರ ಕೊಟ್ಟಿಲ್ಲ. ಇನ್ನು ನಾಲ್ಕು ದಿನಗಳ ಕಾಲ ಕಾಲವಕಾಶ ಕೇಳಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತೆಯನ್ನು ಬಿಟ್ಟರೆ ಬೇರೆ ಯಾರಿಗೂ ಪ್ರಧಾನವಾಗಿ ಅವಕಾಶವಿಲ್ಲ. ಆಕೆ ವಯಸ್ಕಳಾಗಿದ್ದು, ತಂದೆ ತಾಯಿ ಹೇಳಿಕೆ ಕೊಡೋದನ್ನು ನಿಲ್ಲಿಸಬೇಕು. ಮಗಳ ಯೋಗಕ್ಷೇಮ ವಿಚಾರಿಸಲಿ. ಆಕೆಯ ಹೇಳಿಕೆಯ ಪರವಾಗಿ ನಿಲ್ಲಲಿ ಎಂದು ವಕೀಲ ಜಗದೀಶ್ ಹೇಳಿದ್ದಾರೆ.

ಇದನ್ನೂ ಓದಿ: BJP Candidate Mangala Angadi Temple Run: ನಾಮಪತ್ರ ಸಲ್ಲಿಕೆಗೂ ಮುನ್ನ ಪುತ್ರಿಯರೊಂದಿಗೆ ಶಿವಾಜಿ-ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮಂಗಳಾ ಅಂಗಡಿ

Published On - 1:20 pm, Tue, 30 March 21