ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ವಿಚಾರವಾಗಿ ಸಿಡಿ ಲೇಡಿಯ ಪೋಷಕರು ಸುದ್ದಿಗೋಷ್ಠಿ ನಡೆಸಿದ್ದಾರೆ. SIT ಟೆಕ್ನಿಕಲ್ ವಿಂಗ್ನಲ್ಲಿ ಯುವತಿ ಪೋಷಕರು ಸುದ್ದಿಗೋಷ್ಠಿ ನಡೆಸಿದ್ದಾರೆ.
ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ, ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಒಬ್ಬ ಹೆಣ್ಣುಮಗಳನ್ನ ಇಟ್ಟುಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ಸಂತ್ರಸ್ತೆ ಸಹೋದರ ಹೇಳಿದರು. ಬಳಿಕ ಯುವತಿ ಪೋಷಕರು ಆಡಿಯೋ ರೆಕಾರ್ಡ್ ಪ್ಲೇ ಮಾಡಿದರು.
ಮಾರ್ಚ್ 2ರಂದು ಸಿಡಿ ಪ್ರಕರಣ ಬೆಳಕಿಗೆ ಬಂದಾಗ ನನ್ನ ಅಕ್ಕನ ಜೊತೆ ಮೊಬೈಲ್ನಲ್ಲಿ ಚರ್ಚಿಸಿದ್ದ ಆಡಿಯೋ ವೈರಲ್ ಆಗಿದೆ. ನನ್ನ ಅಕ್ಕನ ಮೊಬೈಲ್ ಸ್ವಿಚ್ಆಫ್ ಆಗಿತ್ತು. ನಮ್ಮ ಅಕ್ಕನನ್ನು ತಂದು ಕೊಡುವಂತೆ ಯುವತಿ ಸಹೋದರ ಮನವಿ ಮಾಡಿದ್ದಾರೆ. ಮಾರ್ಚ್ 2ನೇ ತಾರೀಖು ಡಿಕೆಶಿ ನಿವಾಸದ ಬಳಿ ತೆರಳಿದ್ದಳು. ನಮ್ಮ ಅಕ್ಕ ಡಿ.ಕೆ.ಶಿವಕುಮಾರ್ ಮನೆ ಮನೆ ಬಳಿ ತೆರಳಿದ್ದಳು ಎಂದು ಸಿಡಿ ಲೇಡಿ ಸಹೋದರ ಹೇಳಿದ್ದಾರೆ.
ನಮ್ಮ ಅಕ್ಕನನ್ನು ಬೆಂಗಾವಲಿನಲ್ಲಿ ಗೋವಾಗೆ ಕಳುಹಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಮ್ಮಕ್ಕ ಎಲ್ಲೂ ಕಾಣಲಿಲ್ಲ. ನಿಮ್ಮ ಹೊಲಸು ರಾಜಕಾರಣಕ್ಕಾಗಿ ನಮ್ಮಕ್ಕನನ್ನು ಬಳಸಿಕೊಂಡಿದ್ದಾರೆ. ನೀವು ಗಂಡಸರೇ ಆಗಿದ್ದರೆ ಎದುರು ಬದುರು ಹೋರಾಡಿ. ನಮ್ಮ ಅಕ್ಕನನ್ನು ಮುಂದಿಟ್ಟುಕೊಂಡು ಹೀನ ರಾಜಕಾರಣ ಮಾಡಬೇಡಿ. ನಮ್ಮ ಅಕ್ಕನನ್ನು ಬಿಟ್ಟುಬಿಡಿ ಎಂದು ಸಿಡಿ ಲೇಡಿ ಸಹೋದರ ಮನವಿ ಮಾಡಿದರು.
‘ನಿಮ್ಮ ಹೊಲಸು ರಾಜಕಾರಣಕ್ಕೆ ಯುವತಿ ಬಳಕೆ ಒಳ್ಳೇದಲ್ಲ’
ನಮ್ಮಪ್ಪ ಮಾಜಿ ಸೈನಿಕರಿದ್ದಾರೆ, ರಕ್ಷಣೆ ಮಾಡಿಕೊಳ್ಳುತ್ತಾರೆ. ದೇಶ ಕಾಯುವವನಿಗೆ ಮಗಳನ್ನು ಕಾಯುವುದು ದೊಡ್ಡದಲ್ಲ. ನಿಮ್ಮ ಹೊಲಸು ರಾಜಕಾರಣಕ್ಕೆ ಯುವತಿ ಬಳಕೆ ಒಳ್ಳೇದಲ್ಲ ಎಂದು ಯುವತಿ ಸಹೋದರ ಹೇಳಿದರು.
‘ನರೇಶ್ಗೌಡ ಹೇಳುತ್ತಿರುವುದೆಲ್ಲ ಬರೀ ಸುಳ್ಳೇ ಸುಳ್ಳು’
ನಮ್ಮಕ್ಕನಿಗೆ ರಕ್ಷಣೆ ಕೊಡಲು ಆ ನರೇಶ್ಗೌಡ ಯಾರು? ನರೇಶ್ಗೌಡ ಹೇಳುತ್ತಿರುವುದೆಲ್ಲ ಬರೀ ಸುಳ್ಳೇ ಸುಳ್ಳು. ನಮ್ಮ ಅಕ್ಕನ ರಕ್ಷಣೆ ಮಾಡಿಕೊಳ್ಳುವುದು ನಮಗೆ ಗೊತ್ತಿದೆ ಎಂದು ಸಿಡಿ ಲೇಡಿ ಸಹೋದರು ಹೇಳಿದರು.
ಯಾವುದೇ ಭಯಬೇಡ ಮನೆಗೆ ಬಾ ಮಗಳೇ- ಸಿಡಿ ಲೇಡಿ ಅಪ್ಪ
ಯಾವುದೇ ಭಯಬೇಡ ಮನೆಗೆ ಬಾ ಮಗಳೇ. ನಾವೆಲ್ಲರೂ ನಮ್ಮ ಸಂಬಂಧಿಕರ ಮನೆಯಲ್ಲಿದ್ದೇವೆ ಎಂದು ಎಸ್‌ಐಟಿ ವಿಚಾರಣೆ ಬಳಿಕ ಯುವತಿ ತಂದೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಊರಿಗೆಲ್ಲ ನೈತಿಕತೆ ಪಾಠ ಮಾಡುವ ಖರ್ಗೆ, ಸಿದ್ದರಾಮಯ್ಯ, ರಮೇಶ್ ಕುಮಾರ್, ಪಾಟೀಲ್ ಈಗ ಎಲ್ಲಿ ಭೂಗತರಾಗಿದ್ದಾರೆ?: ಬಿಜೆಪಿ ಕರ್ನಾಟಕ
Published On - 5:54 pm, Sat, 27 March 21