ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸದರಿ ವ್ಯಕ್ತಿಯು ಅಶ್ಲೀಲ ಸಿಡಿಗೆ ಸಂಬಂಧಿಸಿದ ಕೃತ್ಯದಲ್ಲಿ ಪಾಲ್ಗೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸದರಿ ವ್ಯಕ್ತಿಯು ಯುವತಿ ಜೊತೆಯಲ್ಲಿ ಸಂಪರ್ಕದಲ್ಲಿದ್ದ ಎಂಬ ಮಾಹಿತಿಯೂ ಲಭ್ಯವಿದ್ದು, ದಿನೇಶ್ ಕಲ್ಲಹಳ್ಳಿಗೆ ಯಶವುಂತಪುರದಲ್ಲಿ ಆ ಸಿಡಿ ಹಸ್ತಾಂತರಿಸಿದ್ದು ಸಹ ಆತನೇ ಎಂಬ ಬಗ್ಗೆ ಬಲವಾದ ಅನುಮಾನ ಮೂಡಿದೆ. ಹೀಗಾಗಿ ಆತನನ್ನು ವಿಚಾರಣೆಗೆ ಕರೆತಂದಿರುವ ಎಸ್ಐಟಿ ಅಧಿಕಾರಿಗಳು ಸತ್ಯಾಂಶ ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ:
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿಗೆ ತನಿಖೆ ಹೊಣೆ, ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ
Published On - 3:20 pm, Fri, 12 March 21