11 ವರ್ಷದ ಬಾಲಕನ ಅಪಹರಣ ಮಾಡಿ, ಹೂತಿಟ್ಟು, ಮತ್ತೆ ಅರೆ ಸುಟ್ಟು ಹತ್ಯೆ.. ಬಾಲಕ ಸೇರಿ ಇಬ್ಬರು ಅರೆಸ್ಟ್
ಅಶ್ವಿನಿನಗರದ ನಿವಾಸಿಯಾಗಿದ್ದ ತೇಜಸ್ಗೌಡ ಮಲ್ಲಿಕೇರಿ ಎಂಬ 11 ವರ್ಷದ ಯುವಕನನ್ನು ಮಾರ್ಚ್ 7ರಂದು ಅಪಹರಿಸಿಕೊಂಡು ಹೋಗಿ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ. ಬಳಿಕ ಕೆರೆಯಲ್ಲಿ ಶವ ತೇಲಿದರೆ ಪೊಲೀಸರಿಗೆ ಗೊತ್ತಾಗಬಹುದು ಅನುಮಾನ ಬರಬಹುದು ಎಂಬ ಭೀತಿ ಹಿನ್ನೆಲೆಯಲ್ಲಿ ಶವವನ್ನು ತಂದು ಮನೆಯ ಹಿತ್ತಲಿನಲ್ಲಿ ಹೂತಿದ್ದಾರೆ. ನಂತರ ಮತ್ತೆ ಆರೋಪಿಗಳಿಗೆ ಭಯ ಶುರುವಾಗಿದೆ...

ಹಾವೇರಿ: 6 ದಿನದಿಂದ ನಾಪತ್ತೆಯಾಗಿದ್ದ 11 ವರ್ಷದ ಬಾಲಕನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಯಸಲ್ಲದ ವಯಸಲ್ಲಿ ಒಬ್ಬ ಬಾಲಕ ಮೃತಪಟ್ಟರೆ ಇಬ್ಬರು ಬಾಲಕರು ಕೊಲೆ ಆರೋಪಿಗಳಾಗಿದ್ದಾರೆ. ಹಾವೇರಿಯಲ್ಲಿ ಇಂತಹದೊಂದು ಅನಾಹುತ ಸಂಭವಿಸಿದೆ. ಅಶ್ವಿನಿನಗರದ ತೇಜಸ್ಗೌಡ ಮಲ್ಲಿಕೇರಿ ಹತ್ಯೆಯಾದ ಬಾಲಕ.
ಘಟನೆ ಹಿನ್ನೆಲೆ: ಅಶ್ವಿನಿನಗರದ ನಿವಾಸಿಯಾಗಿದ್ದ ತೇಜಸ್ಗೌಡ ಮಲ್ಲಿಕೇರಿ ಎಂಬ 11 ವರ್ಷದ ಯುವಕನನ್ನು ಮಾರ್ಚ್ 7ರಂದು ಅಪಹರಿಸಿಕೊಂಡು ಹೋಗಿ ಕೆರೆಯಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ. ಬಳಿಕ ಕೆರೆಯಲ್ಲಿ ಶವ ತೇಲಿದರೆ ಪೊಲೀಸರಿಗೆ ಗೊತ್ತಾಗುವ ಭೀತಿ ಹಿನ್ನೆಲೆಯಲ್ಲಿ ಶವ ತಂದು ಮನೆಯ ಹಿತ್ತಲಿನಲ್ಲಿ ಹೂತಿದ್ದಾರೆ. ನಂತರ ಮತ್ತೆ ಭಯ ಶುರುವಾಗಿದೆ.
ಶವವನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ ಎಂದು ಅನ್ನಿಸಿ ಮತ್ತೆ ಹೂತಿದ್ದ ಶವ ತೆಗೆದು ಮನೆ ಬಳಿ ಅರೆಬರೆ ಸುಟ್ಟು ಪರಾರಿಯಾಗಿದ್ದಾರೆ. ಮನೆ ಸಮೀಪದ ಮುಳ್ಳುಕಂಟೆ ಬಳಿ ಬಾಲಕನ ಶವಕ್ಕೆ ಬೆಂಕಿ ಇಟ್ಟಿದ್ದಾರೆ. ಈ ಸಂಬಂಧ ಮಾರ್ಚ್ 8ರಂದು ಹಾವೇರಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕೇಸ್ ಸಂಬಂಧ ರಿತೇಶ ಮೇಟಿ ಎಂಬ 21 ವರ್ಷದ ಯುವಕ ಮತ್ತು ಓರ್ವ ಬಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಇವರಿಬ್ಬರ ವಿರುದ್ಧ ಕೊಲೆ ಮತ್ತು ಸಾಕ್ಷ್ಯನಾಶ ಪ್ರಕರಣ ದಾಖಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತೇಜಸ್ಗೌಡನನ್ನು ಕೊಲೆ ಮಾಡಲು ಕಾರಣವೇನು? ಎಂಬ ಬಗ್ಗೆ ತನಿಖೆ ಬಳಿಕವೇ ಗೊತ್ತಾಗಲಿದೆ. ಸದ್ಯ ಯಾವುದೇ ಮಾಹಿತಿ ಸಿಕಿಲ್ಲ.
ಇದನ್ನೂ ಓದಿ: ಬಾಲಕನ ಮರ್ಮಾಂಗ ಕತ್ತರಿಸಿ, ಚಿತ್ರಹಿಂಸೆ ನೀಡಿ ಕೊಲೆ: ಭೀಮಾ ನದಿಯ ದಡದಲ್ಲಿ ವಿದ್ಯಾರ್ಥಿ ಶವ ಪತ್ತೆ