ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸದ್ಯದ ಕೇಂದ್ರಬಿಂದುವಾಗಿರುವ ಸಿಡಿ ಪ್ರಕರಣದ ಕುರಿತು ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಖುದ್ದಾಗಿ ಮತ್ತೊಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ನಿನ್ನೆ ಸಿಡಿ ಲೇಡಿಯ ಆಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸೋದಾಗಿ ಹೇಳಿದ್ದ ರಮೇಶ್ ಜಾರಕಿಹೊಳಿ ತಾವು ನುಡಿದಂತೆ ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ಮಾಧ್ಯಮಗೋಷ್ಠಿ ಸಾರಾಂಶ ಇಲ್ಲಿದೆ:
ನನ್ನ ಬಳಿ 11 ಸಾಕ್ಷ್ಯಗಳಿವೆ. ಮಹಾನಾಯಕ ಯಾರೆಂದು ಪೋಷಕರು ಬಹಿರಂಗಗೊಳ್ಸಿದ್ದಾರೆ. ಮಹಾನಾಯಕ ರಾಜಕೀಯದಲ್ಲಿರಲು ನಾಲಾಯಕ್. ನಾನು ಗಂಡಸು, ಆ ಮಹಾನಾಯಕ ಓರ್ವ ಗಾಂ.. ಎಂದು ರಮೇಶ್ ಜಾರಕಿಹೊಳಿ ಖಾರವಾಗಿ ಮಾತನಾಡಿದ್ದಾರೆ.
‘ನಮ್ಮ ಕುಟುಂಬದವರು ಯಾವ ಹುಡುಗಿಯನ್ನೂ ಮೂಸಿನೋಡಿಲ್ಲ’
ನಮ್ಮ ಕುಟುಂಬದವರು ಯಾವ ಹುಡುಗಿಯನ್ನೂ ಮೂಸಿನೋಡಿಲ್ಲ. ಡಿ.ಕೆ.ಶಿವಕುಮಾರ್ ವಿರುದ್ಧ ನೇರ ಹೋರಾಟಕ್ಕೆ ಇಳಿಯುತ್ತೇವೆ. ಕನಕಪುರದಲ್ಲಿ ಅವನನ್ನು ಸೋಲಿಸಲು ಹೋರಾಟ ಮಾಡುವೆ. ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬಂದರೆ ಸ್ವಾಗತಿಸುತ್ತೇವೆ. ಬೆಳಗಾವಿಯಿಂದ ಮರ್ಯಾದೆಯಿಂದ ಕಳಿಸಿಕೊಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಬೆಳಗಾವಿಗೆ ಬಂದಾಗ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ. ಯಾಕೆಂದರೆ ಬೆಳಗಾವಿ ನಮ್ಮೂರು, ಯಾವುದೇ ತೊಂದರೆಕೊಡಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
‘ಯಾರು ತಪ್ಪುಮಾಡಿದ್ದರೋ ಅವರನ್ನು ಒದ್ದು ಒಳಗೆಹಾಕಬೇಕು’
ಬೆಳಗಾವಿ ಉಪಚುನಾವಣೆಯಲ್ಲಿ ಗೆಲ್ಲಲು ಹೋರಾಡುತ್ತೇನೆ. ತನು, ಮನ, ಧನ ವಿನಿಯೋಗಿಸಿ ಗೆಲ್ಲಲು ಹೋರಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಜೊತೆಗೆ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಸೋಲಿಸಲು ಹೋರಾಡುವೆ. ಪ್ರಕರಣದಲ್ಲಿ ಯಾರದ್ದೇ ತಪ್ಪಿದ್ದರೂ ಒದ್ದು ಒಳಹಾಕಬೇಕು. ಯುವತಿ, ನಾನು, ಡಿಕೆಶಿ ಯಾರೇ ತಪ್ಪಿತಸ್ಥರಿದ್ರೂ ಒಳಗೆ ಹಾಕಿ. ಯಾರು ತಪ್ಪುಮಾಡಿದ್ದರೋ ಅವರನ್ನು ಒದ್ದು ಒಳಗೆಹಾಕಬೇಕು ಎಂದು ರಮೇಶ್ ಜಾರಕಿಹೊಳಿ ಹೇಳಿದರು.
‘ಯುವತಿ ಎಸ್ಟಿ ಸಮುದಾಯದವಳೆಂದು ಈಗ ಗೊತ್ತಾಗಿದೆ’
ಯುವತಿ ಎಸ್ಟಿ ಸಮುದಾಯದವಳೆಂದು ಈಗ ಗೊತ್ತಾಗಿದೆ. ಮಹಾನಾಯಕನ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲಿ. ಪ್ರಕರಣದಲ್ಲಿ ಯುವತಿ ಹೊರಬಂದು ಹೋರಾಟಮಾಡಬೇಕು. ಪೊಲೀಸರು ನಿಜವಾಗಿಯೂ ತಪ್ಪಿತಸ್ಥರನ್ನು ಒಳಗೆಹಾಕಬೇಕು ಎಂದು ರಮೇಶ್ ಜಾರಕಿಹೊಳಿ ಹೇಳಿದರು.
‘ನಾನು ನಿರಪರಾಧಿ ಎಂದು ಆ ಕುಟುಂಬಸ್ಥರು ಹೇಳಿದ್ದಾರೆ’
ಡಿ.ಕೆ.ಶಿವಕುಮಾರ್ ರಾಜಕೀಯದಲ್ಲಿರಲು ಅರ್ಹನೇ ಅಲ್ಲ. ಡಿಕೆಶಿ ರಾಜಕೀಯದಿಂದ ನಿವೃತ್ತಿ ಪಡೆಯುವುದು ಉತ್ತಮ. ಯುವತಿ ಕುಟುಂಬಸ್ಥರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ನಿರಪರಾಧಿ ಎಂದು ಆ ಕುಟುಂಬಸ್ಥರು ಹೇಳಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ನಮ್ಮ ಸಿಎಂ, ಅಮಿತ್ ಶಾ ಜತೆ ಮಾತನಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ನಮ್ಮ ಅಕ್ಕನನ್ನು ಡಿ.ಕೆ.ಶಿವಕುಮಾರ್ ಒತ್ತೆಯಾಳಾಗಿಸಿಕೊಂಡಿದ್ದಾರೆ; ಆಕೆಯನ್ನು ವಾಪಸ್ ತಂದುಕೊಟ್ಟುಬಿಡಿ -ಸಿಡಿ ಲೇಡಿ ಸಹೋದರ
Published On - 6:04 pm, Sat, 27 March 21