ಸಚಿವ ಸ್ಥಾನಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ; ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪಗೆ ಪತ್ರ ರವಾನೆ

Ramesh Jarkiholi Resignation: ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ತಪ್ಪಿಸಲು ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪತ್ರ ರವಾನೆ ಮಾಡಿದ್ದು ತಮ್ಮ ನಿಲುವನ್ನು ತಿಳಿಸಿದ್ದಾರೆ.

ಸಚಿವ ಸ್ಥಾನಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ; ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪಗೆ ಪತ್ರ ರವಾನೆ
ರಮೇಶ್​ ಜಾರಕಿಹೊಳಿ
Edited By:

Updated on: Mar 03, 2021 | 4:08 PM

ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮುಜುಗರ ತಪ್ಪಿಸಲು ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪತ್ರ ರವಾನೆ ಮಾಡಿದ್ದು ತಮ್ಮ ನಿಲುವನ್ನು ತಿಳಿಸಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯೂ ಸಮೀಪಿಸುತ್ತಿರುವುದರಿಂದ ಪಕ್ಷಕ್ಕೆ ತೊಂದರೆಯಾಗಬಾರದೆಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿರುವ ರಮೇಶ್​ ಜಾರಕಿಹೊಳಿ, ಸಂಪುಟ ಸಭೆಗೂ ಮುನ್ನ ರಾಜೀನಾಮೆ ನೀಡಿದ್ದು ಆರೋಪಮುಕ್ತರಾಗಿ ಬಂದ ಬಳಿಕ ಸಚಿವ ಸ್ಥಾನ ನೀಡಿ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖ ಮಾಡಿರುವುದು ತಿಳಿದುಬಂದಿದೆ.

ಸಿಡಿ ವಿಚಾರದಲ್ಲಿ ಪಕ್ಷಕ್ಕೆ ಸಹಿಸಲಾಗದಷ್ಟು ಮುಜುಗರ ಉಂಟುಮಾಡಿದ್ದಕ್ಕೆ ಬಿಜೆಪಿ ಹೈಕಮಾಂಡ್​ ಸಿಡಿಮಿಡಿಗೊಂಡು ಮೊದಲು ರಮೇಶ್​ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯಿರಿ, ಉಳಿದಿದ್ದು ಆಮೇಲೆ ನೋಡೋಣ ಎನ್ನುವುದಾಗಿ​ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಮಾಹಿತಿ ರವಾನಿಸಿರುವುದಾಗಿ ಕೆಲ ಮೂಲಗಳು ಈ ಹಿಂದೆ ತಿಳಿಸಿದ್ದವು. ಸದ್ಯ ರಾಜೀನಾಮೆ ಪತ್ರ ರವಾನಿಸಿರುವ ರಮೇಶ್​, ಕೆಲವೇ ಹೊತ್ತಲ್ಲಿ ಪತ್ರಿಕಾಗೋಷ್ಠಿ ನಡೆಸುವುದಾಗಿ ತಿಳಿಸಿದ್ದಾರೆ.

Resignation Letter by Ramesh Jarkiholi

ನಿನ್ನೆ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಸಿಡಿ ಬಿಡುಗಡೆ ಮಾಡಿದ ನಂತರ ಬಳಿಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವೇ ಉಂಟಾಗಿದ್ದು, ಪ್ರತಿಪಕ್ಷಗಳು ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಕೊಡಿಸಲಿ ಎಂದು ಪಟ್ಟು ಹಿಡಿದಿದ್ದವು. ಆದರೆ, ರಮೇಶ್​ ಜಾರಕಿಹೊಳಿ ಈ ವಿಡಿಯೋಗೂ ನನಗೂ ಸಂಬಂಧವಿಲ್ಲ, ಬೇಕಿದ್ದರೆ ತನಿಖೆ ನಡೆಯಲಿ. ಆರೋಪ ಸಾಬೀತಾದರೂ ನಾನು ನಿವೃತ್ತಿ ತೆಗೆದುಕೊಳ್ಳುವೆ ಎಂದು ಹೇಳಿಕೆ ನೀಡಿದ್ದರು. ಅವರ ಬೆನ್ನಿಗೆ ನಿಂತ ಬಾಲಚಂದ್ರ ಜಾರಕಿಹೊಳಿ, ತನ್ನ ಸಣ್ಣ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಇಂತಹ ಫೇಕ್ ಸಿಡಿಗಳಿಗಾಗಿ ರಾಜೀನಾಮೆ ನೀಡಿಸಿದರೆ ಸಂಪುಟವೇ ಉಳಿಯುವುದಿಲ್ಲ ಎಂಬ ಮಾತುಗಳನ್ನಾಡಿದ್ದರು.

ರಾಜೀನಾಮೆ ಅಂಗೀಕರಿಸಿದರೆ ಬೆಳಗಾವಿ ಬಂದ್​​
ಇದೀಗ, ರಮೇಶ್​ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಗೋಕಾಕದಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದು, ರಾಜೀನಾಮೆ ಅಂಗೀಕಾರ ಮಾಡಿದರೆ ಬೆಳಗಾವಿ ಬಂದ್ ಮಾಡೋದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರಮೇಶ್​ ಅವರಿಂದ ರಾಜೀನಾಮೆ ಪಡೆಯಬಾರದು ಎಂದು ಒತ್ತಾಯಿಸುತ್ತಿರುವ ಬೆಂಬಲಿಗರು ನಗರದ ಬಸವ ವೃತ್ತದಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಡಾ. ಬಸವರಾಜ ಗುರೂಜಿಯಿಂದ ರಮೇಶ ಜಾರಕಿಹೊಳಿ ಜಾತಕ ವಿಶ್ಲೇಷಣೆ: ಸದ್ಯಕ್ಕೆ ಸಂಕಷ್ಟ, ಏಪ್ರಿಲ್ ನಂತರ ಗುರು ಬಲ

Published On - 1:01 pm, Wed, 3 March 21