ಸಾರಿಗೆ ಇಲಾಖೆಗೆ 4 ಸಾವಿರ ಕೋಟಿಗೂ ಹೆಚ್ಚು ನಷ್ಟ; ಸಚಿವ ಲಕ್ಷ್ಮಣ ಸವದಿ

| Updated By: sandhya thejappa

Updated on: Jun 26, 2021 | 5:00 PM

ಹೀಗಿದ್ದರೂ ಸಾರಿಗೆ ಸಿಬ್ಬಂದಿಗೆ ಪೂರ್ಣ ಸಂಬಳ ನೀಡುತ್ತಿದ್ದೇವೆ. ಸರ್ಕಾರದಿಂದ ಹಣ ಪಡೆದು ಸಂಬಳವನ್ನು ನೀಡುತ್ತಿದ್ದೇವೆ. ಕೊರೊನಾ ಹಿನ್ನೆಲೆ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಇದರಿಂದ ಸಂಬಳ, ಇಂಧನಕ್ಕೂ ಕೊರತೆಯಾಗುತ್ತದೆ. ಹೀಗಾಗಿ ಸರ್ಕಾರದಿಂದ ಹಣ ಪಡೆದು ಸಂಬಳ ನೀಡುತ್ತಿದ್ದೇವೆ.

ಸಾರಿಗೆ ಇಲಾಖೆಗೆ 4 ಸಾವಿರ ಕೋಟಿಗೂ ಹೆಚ್ಚು ನಷ್ಟ; ಸಚಿವ ಲಕ್ಷ್ಮಣ ಸವದಿ
ಡಿಸಿಎಂ ಲಕ್ಷ್ಮಣ ಸವದಿ
Follow us on

ಬೆಳಗಾವಿ: ಕೊರೊನಾದಿಂದ ಸಾರಿಗೆ ಇಲಾಖೆಗೆ ಸುಮಾರು ನಾಲ್ಕು ಸಾವಿರ ಕೋಟಿ ರೂ. ಕ್ಕಿಂತ ಹೆಚ್ಚು ನಷ್ಟವಾಗಿದೆ ಎಂದು ಬೆಳಗಾವಿಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು. ಕಳೆದ ಮಾರ್ಚ್​ನಿಂದ ಸುಮಾರು 4 ಸಾವಿರ ಕೋಟಿಗಿಂತ ಹೆಚ್ಚು ನಷ್ಟವಾಗಿದೆ. ನಾನು ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ಮೇಲೆ 20 ಜಿಲ್ಲೆಗಳಲ್ಲಿ ಅತಿವೃಷ್ಟಿ ಬಂತು. ಇದನ್ನು ಸರಿದೂಗಿಸುವ ಸಂದರ್ಭದಲ್ಲಿ ಕೊರೊನಾ ಬಂತು. ಕೊರೊನಾ ಬಳಿಕ ಇಲಾಖೆ ಸಿಬ್ಬಂದಿ ಪ್ರತಿಭಟನೆ ಮಾಡಿದರು. ಪ್ರತಿಭಟನೆ ಮುಗಿಯುತ್ತಿದ್ದಂತೆ ಕೊವಿಡ್ ಎರಡನೇ ಅಲೆ. ಅತ್ಯಂತ ತಾಪತ್ರಯ ಅನುಭವಿಸಿದ ಇಲಾಖೆ ಅಂದ್ರೆ ಸಾರಿಗೆ ಇಲಾಖೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಹೀಗಿದ್ದರೂ ಸಾರಿಗೆ ಸಿಬ್ಬಂದಿಗೆ ಪೂರ್ಣ ಸಂಬಳ ನೀಡುತ್ತಿದ್ದೇವೆ. ಸರ್ಕಾರದಿಂದ ಹಣ ಪಡೆದು ಸಂಬಳವನ್ನು ನೀಡುತ್ತಿದ್ದೇವೆ. ಕೊರೊನಾ ಹಿನ್ನೆಲೆ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಇದರಿಂದ ಸಂಬಳ, ಇಂಧನಕ್ಕೂ ಕೊರತೆಯಾಗುತ್ತದೆ. ಹೀಗಾಗಿ ಸರ್ಕಾರದಿಂದ ಹಣ ಪಡೆದು ಸಂಬಳ ನೀಡುತ್ತಿದ್ದೇವೆ. ಸದ್ಯ ಬಸ್​ಗಳಲ್ಲಿ ಹೆಚ್ಚು ಜನರನ್ನು ಓಡಾಡಲು ಬಿಡಬಾರದು ಎಂದು ಸವದಿ ಹೇಳಿದರು.

ಕೆಲವೇ ದಿನಗಳಲ್ಲಿ ಬಹಿರಂಗ
ಜುಲೈ 5ರ ನಂತರ ಪ್ರತಿಭಟನೆ ನಡೆಸಲ್ಲ ಎಂದು ಸಾರಿಗೆ ಸಂಘಟನೆಗಳ ಮುಖಂಡರು ಹೇಳಿದ್ದಾರೆ. ತಪ್ಪು ಮಾಹಿತಿ ಕೊಟ್ಟು ಅನೇಕರು ಹುನ್ನಾರ ಮಾಡಿದರು. ನಿಮ್ಮ ಜತೆ ಕೈಜೋಡಿಸುವುದಾಗಿ ಮುಖಂಡರು ಹೇಳಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬೇಕು, ಇಲಾಖೆಗೆ ಹಾನಿ ಆಗಬೇಕು ಅಂತಾ ಹುನ್ನಾರ ನಡೆಸಿ ಪ್ರತಿಭಟನೆ ನಡೆಸಿದ್ದರು. ಹುನ್ನಾರ ಮಾಡಿದವರು ಯಾರೆಂದು ಕೆಲವೇ ದಿನಗಳಲ್ಲಿ ಬಹಿರಂಗವಾಗುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಪಕ್ಷದಲ್ಲಿದ್ದವರೇ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು ರಮೇಶ್ ಯಾವ ಆಲೋಚನೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಯಾವ ಸಂದರ್ಭದಲ್ಲಿ ಹೇಳಿದ್ದಾರೆ ಎಂಬುದೂ ಗೊತ್ತಿಲ್ಲ ಎಂದರು. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಠಕ್ಕೆ ಭೇಟಿ ವಿಚಾರಕ್ಕೆ ಸವದಿ, ಸುತ್ತೂರು ಮಠ ನಮ್ಮ ಧಾರ್ಮಿಕ ಕೇಂದ್ರ. ರಾಜಕಾರಣಿಗಳು, ಸಂತರು, ಭಕ್ತರು ಮಠಕ್ಕೆ ಹೋಗುತ್ತಾರೆ. ಅವರವರ ಶ್ರದ್ಧಾ ಕೇಂದ್ರಗಳಿಗೆ ಹೋಗುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

ಅಥಣಿಯಲ್ಲಿ ಆರ್​ಎಸ್​ಎಸ್​ ಪ್ರಮುಖರು ಇರುವುದರಿಂದ ಭೇಟಿ ಕೊಟ್ಟಿದ್ದಾರೆ. ನಾನು ಅಥಣಿಯಲ್ಲಿದ್ದರೆ 1 ದಿನವಾದರೂ ಅಲ್ಲಿಗೆ ಹೋಗುತ್ತೇನೆ. ನಮ್ಮ, ಸರ್ಕಾರದ ಏಳಿಗೆಗೆ ಮಾರ್ಗದರ್ಶನ ಕೊಡುತ್ತಾರೆ. ಅವರ ಮಾರ್ಗದರ್ಶನ ಪಡೆಯಲು ಎಲ್ಲರೂ ಹೋಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ

Nikhil Kumaraswamy : ಹೌದು, ನೀವು ಕೇಳಿದ ಸುದ್ದಿ ನಿಜನೇ.. ಸದ್ಯದಲ್ಲೇ ನಾನು ತಂದೆ ಆಗ್ತಿದ್ದಿನಿ

(Ramesh Jarkiholi says loss of 4 thousand crore to transport department from Corona)