ದಾವಣಗೆರೆ: ವೀರಭದ್ರ ಹೆಸರು ಕೇಳಿದರೆ ಭಯ ಬಿಳುವ ಭಕ್ತರಿದ್ದಾರೆ. ವೀರಭದ್ರ ಸಿಟ್ಟಿಗೆದ್ದರೆ ಭಸ್ಮ ಆಗುತ್ತೀರಾ ಎಂಬ ಮಾತು ಜಿಲ್ಲೆಯ ಜನರ ಬಾಯಿಂದ ಕೇಳಿ ಬರುತ್ತವೆ. ಅಂತಹ ಉಗ್ರ ದೇವರ ಉತ್ಸವ ವರ್ಷಕ್ಕೊಮ್ಮೆ ನಡೆಯುತ್ತದೆ. ಇಂತಹ ಉತ್ಸವದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಲೇಬೇಕು ಎಂಬ ಸುತ್ತ ಮುತ್ತಲಿನ ಹಳ್ಳಿಯಲ್ಲಿ ಅಲಿಖಿತ ನಿಮಯವಿದೆ.
ಆವರಗೋಳ್ ಎಂದರೆ ದಾವಣಗೆರೆ ಜಿಲ್ಲೆಯಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ. ಕಾರಣ ಸಾವಿರಾರು ವರ್ಷದ ಐತಿಹಾಸಿಕ ವೀರಭದ್ರನ ಪುಣ್ಯಕ್ಷೇತ್ರವಿದೆ. ನಿನ್ನೆ (ಫೆಬ್ರವರಿ 3) ಮತ್ತು ಇಂದು (ಫೆಬ್ರವರಿ 4) ದಾವಣಗೆರೆ ತಾಲೂಕಿನ ಆವರಗೋಳ್ ಗ್ರಾಮದಲ್ಲಿ ಪುಣ್ಯೋತ್ಸವ ನಡೆಯುತ್ತಿದೆ. ಹೀಗಾಗಿ ಸಾವಿರಾರು ಸಂಖ್ಯೆಯ ಭಕ್ತ ಸಾಗರ ಹರಿದು ಬರುತ್ತದೆ. ಮೇಲಾಗಿ ಎಲ್ಲರೂ ತಪ್ಪದೇ ಈ ವೀರಭದ್ರನ ಉತ್ಸವಕ್ಕೆ ಬರಬೇಕು ಎಂಬ ಮಾತೊಂದಿದೆ.
ಇದೇ ಕಾರಣಕ್ಕೆ ಎರಡು ದಿನಗಳ ಕಾಲ ಬೆಳಗ್ಗೆಯಿಂದ ನಿರಂತರ ಪೂಜೆ ಇಲ್ಲಿ ನಡೆಯುತ್ತದೆ. ನಿನ್ನೆ ಬೇರೆ ಸ್ಥಳದಿಂದ ಬರುವ ಭಕ್ತರಿಗೆ ಮಾತ್ರ ಎನ್ನುವಂತೆ ರಾಜ್ಯದ ಬಹುತೇಕ ಸ್ಥಳಗಳಿಂದ ನಿರಂತರವಾಗಿ ಭಕ್ತರು ಬರುತ್ತಾರೆ. ನಿನ್ನೆ ರಥೋತ್ಸವ ಸಹ ಇಲ್ಲಿ ನಡೆಯಿತು. ಇಲ್ಲಿನ ಇನ್ನೊಂದು ವಿಶೇಷ ಎಂದರೆ ಗ್ರಾಮದ ಗಡಿಯಲ್ಲಿ ಪೂಜೆ ನಡೆಸುವುದು ಪಂಚಪೀಠ ಶಾಖಾ ಮಠವಾದ ಪುರವರ್ಗದ ಮಠ ಕೂಡಾ ಇಲ್ಲಿದೆ. ಇಲ್ಲಿನ ಓಂಕಾರ ಶಿವಾಚಾರ್ಯ ಸ್ವಾಮೀಜಿಗಳು ಇಲ್ಲಿನ ಪೂಜೆ ನಡೆಸಿಕೊಡುತ್ತಾರೆ.
ವೀರಭದ್ರ ದೇವಸ್ಥಾನ ಎಂದರೆ ಇಲ್ಲಿ ಗುಬ್ಬಳ ಇರುವುದು ಸ್ವಾಭಾವಿಕ. ಜೊತೆಗೆ ವೀರಭದ್ರನ ಅವತಾರ ಸ್ವರೂಪವಾದ ಭದ್ರನ ವೇಷದಾರಿಗಳ ಬಂದಿರುತ್ತಾರೆ. ಇವರೆ ಅಸ್ತ್ರ ಪವಾಡ ಸಹ ನಡೆಸಿಕೊಡುತ್ತಾರೆ. ಭಕ್ತರು ತಮ್ಮ ಹರಕೆಗೆ ಅನುಗುಣವಾಗಿ ಇಲ್ಲಿ ಬಂದು ಹರಕೆ ಸ್ವೀಕರಿಸುತ್ತಾರೆ. ಇದು ಇಲ್ಲಿನ ವಿಶೇಷ. ಮದುವೆಯಾದ ವಧು ವರಗಳು ಇಲ್ಲಿಗೆ ಬಂದು ದರ್ಶನ ಪಡೆದು ವೀರಭದ್ರನ ಪ್ರಸಾದ ಸ್ವೀಕರಿಸಿ ಹೋಗುತ್ತಾರೆ.
ಸುತ್ತ ಹಳ್ಳಿಯಲ್ಲಿ ಪ್ರಸಿದ್ಧ ಪಡೆದ ವೀರಭದ್ರನ ಉತ್ಸವ ಗ್ರಾಮದ ಗಡಿ ಪೂಜೆ ಮೇಲಾಗಿ ಸುತ್ತ ಹಳ್ಳಿಯ ಎಲ್ಲರು ಬಂದು ದರ್ಶನ ಪಡೆಯಬೇಕು ಎಂಬ ಅಧಿನಿಯಮ ಇರುವುದರಿಂದ ದೇವಸ್ಥಾನದ ಉತ್ಸವ ಹಾಗೂ ಜಾತ್ರೆ ಪ್ರಸಿದ್ಧಿ ಪಡೆದಿದೆ. ಇದೇ ಕಾರಣಕ್ಕೆ ಬೆಂಕಿಯಂತಹ ದೇವರು ಎಂಬ ಕಾರಣ ಇಲ್ಲಿಗೆ ಬರಬೇಕಾದರೆ ಮಡಿವಂತಿಕೆ ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ
ತುಮಕೂರಿನಲ್ಲಿ ದನಗಳ ಜಾತ್ರೆ: ಕರ್ನಾಟಕದ ಮೂಲೆ ಮೂಲೆಗಳಿಂದ ರೈತರ ಆಗಮನ
ವಿದ್ಯಾಕಾಶಿಯಲ್ಲಿ ಮಾರ್ಚ್ 2 ರವರೆಗೆ ವಿಜ್ಞಾನ ಜಾತ್ರೆ; ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ..
Published On - 12:54 pm, Thu, 4 March 21