ಆರ್ ಡಿ ಪಾಟೀಲ್ ರಕ್ಷಣೆಗೆ ಪ್ರಿಯಾಂಕ್ ಖರ್ಗೆ ನಡುಕಟ್ಟಿ ನಿಂತಿದ್ದಾರೆ: ಆರಗ ಜ್ಞಾನೇಂದ್ರ, ಮಾಜಿ ಗೃಹ ಸಚಿವ

|

Updated on: Nov 09, 2023 | 6:52 PM

ಪ್ರಿಯಾಂಕ್ ಖರ್ಗೆಗೆ ಪಾಟೀಲ್ ಚೆನ್ನಾಗಿ ಗೊತ್ತು ಅವನು ಅವರ ಅಪ್ತ ಸಖ, ಯಾವಾಗಲೂ ಸಚಿವರ ಮನೆಯಲ್ಲೇ ಬಿದ್ದಿರುತ್ತಾನೆ. ಹಿಂದೆ ಪಿಎಸ್ ಐ ಹಗರಣ ನಡೆದಾಗ ವಿಧಾನ ಸಭೆಯಲ್ಲಿ ಪ್ರಿಯಾಂಕ್, ಪಾಟೀಲ್ ತನಗೆ ಗೊತ್ತಿಲ್ಲ ಅಂತ ಸುಳ್ಳು ಹೇಳಿದ್ದರು. ಪಾಟೀಲ್ ಕಾಂಗ್ರೆಸ್ ಟಿಕೆಟ್ ನಿಂದಲೇ ಅಫಜಲಪುರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆಗ ನನ್ನ ರಾಜೀನಾಮೆ ಕೇಳಿದ್ದ ಪ್ರಿಯಾಂಕ್ ಈಗೇನು ಮಾಡುತ್ತಾರೆ? ಎಂದು ಬಿಜೆಪಿ ಶಾಸಕ ಪ್ರಶ್ನಿಸಿದರು.

ಬೆಂಗಳೂರು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಾ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರನ್ನು ಉಗ್ರವಾಗಿ ಟೀಕಿಸಿದರಲ್ಲದೆ ಹಲವು ಆರೋಪಗಳನ್ನು ಮಾಡಿದರು. ಇತ್ತೀಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಎಫ್ ಡಿಎ ಮತ್ತು ಎಸ್ ಡಿಎ ಹುದ್ದೆಗಳಿಗಾಗಿ ನಡೆಸಿದ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಮಾತಾಡಿದ ಅವರು ತಾವು ಗೃಹ ಸಚಿವರಾಗಿದ್ದಾಗ ಪಿಎಸ್ ಐ ನೇಮಕಾತಿ ಹಗರಣದಲ್ಲಿ ಕಿಂಗ್ ಪಿನ್ ಆಗಿದ್ದ ಆರ್ ಡಿ ಪಾಟೀಲ್ ನನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಲಾಗಿತ್ತು ಅದರೆ ಜಾಮೀನು ಪಡೆದು ಹೊರಬಂದ ಅವನ ಮೇಲೆ ಕೆಈಎ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ ಒಂದು ಕಣ್ಣಿಡಬೇಕಿತ್ತು. ಆದರೆ, ಪೊಲೀಸರು ಅಧಿಕಾರದಲ್ಲಿರುವವರ ಆದೇಶದ ಮೇರೆಗೆ ಹಾಗೆ ಮಾಡಲಿಲ್ಲ.

ಹಗರಣದಲ್ಲಿ ಅವನ ಪಾತ್ರವಿದೆ ಅಂತ ಗೊತ್ತಾದ ಮೇಲೆ ಬಂಧಿಸಲು ಪೊಲೀಸರು ವಿಳಂಬ ಮಾಡಿ ತಪ್ಪಿಸಿಕೊಳ್ಳುವ ಅವಕಾಶ ಕಲ್ಪಿಸುತ್ತಾರೆ, ಇದರರ್ಥ ಸರ್ಕಾರವೇ ಪಾಟೀಲನ ರಕ್ಷಣೆಗೆ ನಿಂತಿದೆ ಎಂದು ಜ್ಞಾನೇಂದ್ರ ಹೇಳಿದರು. ಪ್ರಿಯಾಂಕ್ ಖರ್ಗೆಗೆ ಪಾಟೀಲ್ ಚೆನ್ನಾಗಿ ಗೊತ್ತು ಅವನು ಅವರ ಅಪ್ತ ಸಖ, ಯಾವಾಗಲೂ ಸಚಿವರ ಮನೆಯಲ್ಲೇ ಬಿದ್ದಿರುತ್ತಾನೆ. ಹಿಂದೆ ಪಿಎಸ್ ಐ ಹಗರಣ ನಡೆದಾಗ ವಿಧಾನ ಸಭೆಯಲ್ಲಿ ಪ್ರಿಯಾಂಕ್, ಪಾಟೀಲ್ ತನಗೆ ಗೊತ್ತಿಲ್ಲ ಅಂತ ಸುಳ್ಳು ಹೇಳಿದ್ದರು. ಪಾಟೀಲ್ ಕಾಂಗ್ರೆಸ್ ಟಿಕೆಟ್ ನಿಂದಲೇ ಅಫಜಲಪುರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆಗ ನನ್ನ ರಾಜೀನಾಮೆ ಕೇಳಿದ್ದ ಪ್ರಿಯಾಂಕ್ ಈಗೇನು ಮಾಡುತ್ತಾರೆ? ಎಂದು ಬಿಜೆಪಿ ಶಾಸಕ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 09, 2023 06:52 PM