ಉಪಚುನಾವಣೆ ತಡೆಗೆ ಸುಪ್ರೀಂ ಮೊರೆ ಹೋಗುತ್ತೇವೆ ಎಂದ ಅನರ್ಹ ಶಾಸಕ

|

Updated on: Sep 21, 2019 | 4:25 PM

ಚಿಕ್ಕಬಳ್ಳಾಪುರ: ಶಾಸಕರು ರಾಜೀನಾಮೆ ನೀಡಿದ ಕ್ಷೇತ್ರಗಳ ಉಪಚುನಾವಣೆ ನಡೆಸದಂತೆ ಸುಪ್ರೀಂಕೋರ್ಟ್​ ಮೊರೆ ಹೋಗುತ್ತೇವೆ ಎಂದು ಚಿಕ್ಕಬಳ್ಳಾಪುರದಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸೋಮವಾರ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇದೆ. ಈ ವೇಳೆಯೇ ಉಪಚುನಾವಣೆಯ ದಿನಾಂಕ ಘೋಷಣೆ ಆಗಿದೆ. ಹೀಗಾಗಿ ನಮ್ಮ ಅರ್ಜಿ‌ ಇತ್ಯರ್ಥವಾಗುವವರೆಗೂ  ಬೈಎಲೆಕ್ಷನ್​ಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಗೆ ನಮ್ಮ ವಕೀಲರು ಮನವಿ ಮಾಡಲಿದ್ದಾರೆ. ನಮಗೆ ಅನ್ಯಾಯ ಆಗಲಿಕ್ಕೆ ಸುಪ್ರೀಂಕೋರ್ಟ್ ಅವಕಾಶ ಕೊಡೋದಿಲ್ಲ. ನಮಗೆ ಖಂಡಿತವಾಗಿ ನ್ಯಾಯಾಲಯದಲ್ಲಿ ರಿಲೀಫ್ ಸಿಗುತ್ತೆ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ […]

ಉಪಚುನಾವಣೆ ತಡೆಗೆ ಸುಪ್ರೀಂ ಮೊರೆ ಹೋಗುತ್ತೇವೆ ಎಂದ ಅನರ್ಹ ಶಾಸಕ
Follow us on

ಚಿಕ್ಕಬಳ್ಳಾಪುರ: ಶಾಸಕರು ರಾಜೀನಾಮೆ ನೀಡಿದ ಕ್ಷೇತ್ರಗಳ ಉಪಚುನಾವಣೆ ನಡೆಸದಂತೆ ಸುಪ್ರೀಂಕೋರ್ಟ್​ ಮೊರೆ ಹೋಗುತ್ತೇವೆ ಎಂದು ಚಿಕ್ಕಬಳ್ಳಾಪುರದಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸೋಮವಾರ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇದೆ. ಈ ವೇಳೆಯೇ ಉಪಚುನಾವಣೆಯ ದಿನಾಂಕ ಘೋಷಣೆ ಆಗಿದೆ. ಹೀಗಾಗಿ ನಮ್ಮ ಅರ್ಜಿ‌ ಇತ್ಯರ್ಥವಾಗುವವರೆಗೂ  ಬೈಎಲೆಕ್ಷನ್​ಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಗೆ ನಮ್ಮ ವಕೀಲರು ಮನವಿ ಮಾಡಲಿದ್ದಾರೆ. ನಮಗೆ ಅನ್ಯಾಯ ಆಗಲಿಕ್ಕೆ ಸುಪ್ರೀಂಕೋರ್ಟ್ ಅವಕಾಶ ಕೊಡೋದಿಲ್ಲ. ನಮಗೆ ಖಂಡಿತವಾಗಿ ನ್ಯಾಯಾಲಯದಲ್ಲಿ ರಿಲೀಫ್ ಸಿಗುತ್ತೆ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Published On - 4:19 pm, Sat, 21 September 19