ಸಿದ್ದರಾಮಯ್ಯ ಪುತ್ರನ ಸಾವಿಗೆ ಯಾರು ಕಾರಣ?
ಸಿದ್ದರಾಮಯ್ಯ ಮಗ ರಾಕೇಶ್ ಇನ್ನೂ 50 ವರ್ಷ ಬದುಕಿರ್ತಿದ್ದ, ಪಾಪ ಅವನನ್ನ ಹೋಟೆಲ್ನಲ್ಲಿ ಕೂರಿಸಿಕೊಂಡು ಸಾಯೋ ಹಾಗೆ ಮಾಡಿದ್ದಾರೆ. ರಾಕೇಶ್ ಸಿದ್ದರಾಮಯ್ಯ ಸಾವಿಗೆ ಕಾರಣ ಯಾರು? ಅವನೇ ಕಾರಣ.. ಈಗ ನಮಗೆ ಪಾಠ ಹೇಳೋಕೆ ಅವನಿಗೆ ನೈತಿಕತೆ ಏನಿದೆ? ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಪುತ್ರನ ಸಾವಿನ ಬಗ್ಗೆ ಪ್ರಶ್ನಿಸಿದ್ದಾರೆ. ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೈರತಿ ಸುರೇಶ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಹೀಗಾಗಿ ಪರೋಕ್ಷವಾಗಿ ಬೈರತಿ ಸುರೇಶ್ ವಿರುದ್ಧ ಎಂಟಿಬಿ ನಾಗರಾಜ್ ಆಕ್ರೋಶ […]
ಸಿದ್ದರಾಮಯ್ಯ ಮಗ ರಾಕೇಶ್ ಇನ್ನೂ 50 ವರ್ಷ ಬದುಕಿರ್ತಿದ್ದ, ಪಾಪ ಅವನನ್ನ ಹೋಟೆಲ್ನಲ್ಲಿ ಕೂರಿಸಿಕೊಂಡು ಸಾಯೋ ಹಾಗೆ ಮಾಡಿದ್ದಾರೆ. ರಾಕೇಶ್ ಸಿದ್ದರಾಮಯ್ಯ ಸಾವಿಗೆ ಕಾರಣ ಯಾರು? ಅವನೇ ಕಾರಣ.. ಈಗ ನಮಗೆ ಪಾಠ ಹೇಳೋಕೆ ಅವನಿಗೆ ನೈತಿಕತೆ ಏನಿದೆ? ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಪುತ್ರನ ಸಾವಿನ ಬಗ್ಗೆ ಪ್ರಶ್ನಿಸಿದ್ದಾರೆ.
ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೈರತಿ ಸುರೇಶ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಹೀಗಾಗಿ ಪರೋಕ್ಷವಾಗಿ ಬೈರತಿ ಸುರೇಶ್ ವಿರುದ್ಧ ಎಂಟಿಬಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನಗೆ ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸಿದ್ದು ಎಸ್.ಎಂ.ಕೃಷ್ಣ: ಇನ್ನು ಇದೇ ವೇಳೆ ಮಾತನಾಡಿದ ಎಂಟಿಬಿ ನಾಗರಾಜ್, ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಿದ್ದಾರೆ. ನನಗೆ ಟಿಕೆಟ್ ಕೊಡಿಸಿ ಮಂತ್ರಿ ಮಾಡಿದ್ದೇ ನಾನು ಅಂತ ಪದೇ ಪದೆ ಹೇಳಿಕೊಳ್ಳುತ್ತಿದ್ದಾರೆ. ಆದ್ರೆ ನನಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೊಡಿಸಿದ್ದು ಸಿದ್ದರಾಮಯ್ಯ ಅಲ್ಲ, ಎಸ್.ಎಂ.ಕೃಷ್ಣ. ಸಿದ್ದರಾಮಯ್ಯ ಕಾಂಗ್ರೆಸ್ಗೆ ಸೇರಿದ್ದು 2006ರಲ್ಲಿ, ಆದ್ರೆ ಅದಕ್ಕೂ ಮೊದಲೇ ನಾನು ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ಈಗ ನಾನೇ ಟಿಕೆಟ್ ಕೊಡಿಸಿದ್ದು ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಎಂಟಿಬಿ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಕುರುಬರಿಗಾಗಿ ಏನು ಮಾಡಿದ್ದಾರೆ?: ಸಿದ್ದರಾಮಯ್ಯ ಸ್ವಜಾತಿ ಪ್ರೇಮ ಅಂತಿರ್ತಾರೆ, ಆದರೆ ಇವರು ಕುರುಬರಿಗಾಗಿ ಏನು ಮಾಡಿದ್ರು? 5 ವರ್ಷ ಸಿಎಂ ಆಗಿ, ಸಚಿವ ಸಂಪುಟ ವಿಸ್ತರಣೆ ಮಾಡಿದ್ರು. ಆದ್ರೆ ಅವರು ಒಬ್ಬ ಕುರುಬ ಶಾಸಕರನ್ನೂ ಮಂತ್ರಿ ಮಾಡಲಿಲ್ಲ. ಮೇಟಿಗೆ 6 ತಿಂಗಳು ಸಚಿವ ಸ್ಥಾನ ಕೊಟ್ಟು ವಾಪಸ್ ತಗೊಂಡ್ರು. ಆದೇ ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ 6 ಜನ ಒಕ್ಕಲಿಗರನ್ನ ಸಚಿವರನ್ನಾಗಿ ಮಾಡಿದ್ರು. ಹೆಚ್.ಡಿ.ದೇವೇಗೌಡರು 7 ಜನರನ್ನ ಮಂತ್ರಿ ಮಾಡಿದ್ರು, ವೀರೇಂದ್ರ ಪಾಟೀಲ್ 5 ಲಿಂಗಾಯತರಿಗೆ ಮಂತ್ರಿ ಸ್ಥಾನ ನೀಡಿದ್ರು ಆದ್ರೆ ಮಾಜಿ ಸಿಎಂ ಸಿದ್ದರಾಮಯ್ಯ ಎಷ್ಟು ಕುರುಬರಿಗೆ ಮಂತ್ರಿ ಭಾಗ್ಯ ನೀಡಿದ್ದಾರೆ? ಎಂದು ಸಿದ್ದರಾಮಯ್ಯ ವಿರುದ್ಧ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಾಕ್ ಪ್ರಹಾರ ನಡೆಸಿದ್ದಾರೆ.
Published On - 3:53 pm, Sun, 22 September 19