ಬೆಂಗಳೂರಿನಲ್ಲಿ ರಕ್ತ ಹೀರ್ತಿದೆ ಕಿಲ್ಲರ್ ಕೊರೊನಾ! 18 ದಿನದಲ್ಲಿ 106 ಸಾವು

ಬೆಂಗಳೂರು: ಕಿಲ್ಲರ್ ಕೊರೊನಾದಿಂದಾಗಿ ಜನ ಮನೆಯಿಂದ ಹೊರಗೆ ಹೆಜ್ಜೆ ಇಡಲು ಸಾವಿರ ಸಲ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಸಾವಿನ ಸಂಖ್ಯೆ ಏರಿಕೆಯಾಗ್ತಿರೋದ್ಯಾಕೆ? ಸಿಲಿಕಾನ್​ ಸಿಟಿಯಲ್ಲಿ ಕೊರನಾ ಸರಣಿ ಸಾವಿಗೆ ನಿಜವಾದ ಕಾರಣವೇನು? ಎನ್ನುವ ‘ಸಾವಿನ ಸತ್ಯ’ದ ಭಯಾನಕತೆಯನ್ನು ಟಿವಿ9 ಬಿಚ್ಚಿಟ್ಟಿದೆ. ಮಹಾ ಕ್ರೂರಿ ಕೊರೊನಾಗೆ ಬೆಂಗಳೂರಿನಲ್ಲಿ ದಿನವೂ ಜನ ಬಲಿಯಾಗುತ್ತಿದ್ದಾರೆ. ಜುಲೈ 4 ರಂದು 24 ಬಲಿಯಾಗಿದೆ, ಜುಲೈ 05ರಂದು 16 ಬಲಿ, ಜುಲೈ […]

ಬೆಂಗಳೂರಿನಲ್ಲಿ ರಕ್ತ ಹೀರ್ತಿದೆ ಕಿಲ್ಲರ್ ಕೊರೊನಾ! 18 ದಿನದಲ್ಲಿ 106 ಸಾವು
Follow us
ಆಯೇಷಾ ಬಾನು
| Updated By:

Updated on:Jul 09, 2020 | 1:07 PM

ಬೆಂಗಳೂರು: ಕಿಲ್ಲರ್ ಕೊರೊನಾದಿಂದಾಗಿ ಜನ ಮನೆಯಿಂದ ಹೊರಗೆ ಹೆಜ್ಜೆ ಇಡಲು ಸಾವಿರ ಸಲ ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಸಾವಿನ ಸಂಖ್ಯೆ ಏರಿಕೆಯಾಗ್ತಿರೋದ್ಯಾಕೆ? ಸಿಲಿಕಾನ್​ ಸಿಟಿಯಲ್ಲಿ ಕೊರನಾ ಸರಣಿ ಸಾವಿಗೆ ನಿಜವಾದ ಕಾರಣವೇನು? ಎನ್ನುವ ‘ಸಾವಿನ ಸತ್ಯ’ದ ಭಯಾನಕತೆಯನ್ನು ಟಿವಿ9 ಬಿಚ್ಚಿಟ್ಟಿದೆ.

ಮಹಾ ಕ್ರೂರಿ ಕೊರೊನಾಗೆ ಬೆಂಗಳೂರಿನಲ್ಲಿ ದಿನವೂ ಜನ ಬಲಿಯಾಗುತ್ತಿದ್ದಾರೆ. ಜುಲೈ 4 ರಂದು 24 ಬಲಿಯಾಗಿದೆ, ಜುಲೈ 05ರಂದು 16 ಬಲಿ, ಜುಲೈ 06ರಂದು 11 ಬಲಿ, ಜುಲೈ 7ರಂದು 22, ಜುಲೈ 08ರಂದು 13 ಬಲಿ, ಈ ರೀತಿ ದಿನೇ ದಿನೇ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.

ಜನರ ದೇಹ ಹೊಕ್ಕು ರಣಹಿಂಸೆ ಕೊಟ್ಟು ಜೀವ ಕಸೀತಿರೋ ವೈರಸ್ ಏಪ್ರಿಲ್ ರಲ್ಲಿ 06 ಮಂದಿಯನ್ನ ಬಲಿಪಡೆದಿದೆ. ಮೇ 04 ಮಂದಿ, ಜೂನ್​ನಲ್ಲಿ 85 ಮಂದಿ, ಜುಲೈ 8ರವರೆಗೆ 106 ಮಂದಿ ಬಲಿಯನ್ನ ಬಲಿ ಪಡೆದಿದೆ. ಈ ರೀತಿ ಕೊರೊನಾ ಬಲಿಷ್ಠವಾಗಿ ಬೆಳೆದು ಸೋಂಕಿತರನ್ನು ಬಲಿ ಪಡೆಯಲು ನಿಂತಿದೆ.

ಬೆಂಗಳೂರಲ್ಲಿ 18 ದಿನದಲ್ಲಿ 106 ಸಾವು ಇನ್ನು ಕಳೆದ 18 ದಿನಗಳಲ್ಲಿ ಬೆಂಗಳೂರಲ್ಲಿ ಕೊರೊನಾ ರಣಕೇಕೆ ನೋಡಿದ್ರೆ ಬೆಚ್ಚಿ ಬೀಳುವಂತಿದೆ. ಯಾಮಾರಿದ್ರೆ ಸಾಕು ವಕ್ಕರಿಸಿ ಜೀವ ತೆಗೆಯುತ್ತಿರುವ ವೈರಸ್ ಕೇವಲ 18 ದಿನಕ್ಕೆ 106 ಮಂದಿಯನ್ನು ಬಲಿ ಪಡೆದಿದೆ. ಜೂನ್-16 : 05ಬಲಿ, ಜೂನ್-17 : 05ಬಲಿ, ಜೂನ್-18 : 08ಬಲಿ, ಜೂನ್-19 : 07 ಬಲಿಯಾಗಿದೆ. ಜೂನ್-20rಂದು 03 ಬಲಿ, ಜೂನ್-21 : 03ಬಲಿ, ಜೂನ್-22 : 03ಬಲಿ, ಜೂನ್-23 : 06ಬಲಿ, ಜೂನ್-24 : 05bಲಿ, ಜೂನ್-25 : ಸಾವುದೇ ಸಾವು ಸಂಭವಿಸಿಲ್ಲ. ಜೂನ್-26 : 03ಬಲಿ, ಜೂನ್-27 : 03ಬಲಿ, ಜೂನ್-28 : 04, ಜೂನ್-29 : 03, ಜೂನ್-30 : 04, ಈ ರೀತಿ ಜೂನ್​ನಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮೆರೆದಿದೆ.

ಜುಲೈ-1 : 02 ಬಲಿ, ಜುಲೈ-2 : 03bಲಿ, ಜುಲೈ-3 : 05, ಜುಲೈ-4 : 24, ಜುಲೈ-5 : 16, ಜುಲೈ-6 : 11ಬಲಿ, ಜುಲೈ-7 : 22, ಜುಲೈ-8 : 13ಬಲಿಯನ್ನು ಪಡೆದಿದೆ. ಈ ರೀತಿ ತಿಂಗಳಿನಿಂದ ತಿಂಗಳಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ.

ಕೊರೊನಾ ಸಾವಿನ ಹಿಂದಿರುವ ಮೂರು ಸತ್ಯಗಳು: ಸತ್ಯ 1 : ಌಂಬುಲೆನ್ಸ್​ಗಳು ತಡವಾಗಿ ಬರ್ತಿವೆ. ರಾಜ್ಯದಲ್ಲಿ ಆ್ಯಂಬುಲೆನ್ಸ್​ಗಳ ಕೊರತೆ ಎದುರಾಗಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದರೆ ಆ್ಯಂಬುಲೆನ್ಸ್​ಗಳು ಮಾತ್ರ ಬೆರಳೆಣಿಕೆಯಷ್ಟಿವೆ. ಆ್ಯಂಬುಲೆನ್ಸ್​ಗಳು ಸರಿಯಾದ ಸಮಯಕ್ಕೆ ಸಿಗದ ಕಾರಣ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರನ್ನ ಟಿಟಿ ವಾಹನಗಳಲ್ಲಿ ಶಿಫ್ಟ್ ಮಾಡುವ ಪರಿಸ್ಥಿತಿ ಎದುರಾಗಿದೆ.

ಸತ್ಯ 2 : ಕೋ ಮಾರ್ಬಿಡಿಟಿಯವರಿಗೆ ಚಿಕಿತ್ಸೆ ಸಿಗದಿರೋದು ಕೋ ಮಾರ್ಬಿಡಿಟಿ ಅಂದ್ರೆ ಇತರೆ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದಿರುವುದು. ಕೊರೊನಾ ಸೋಂಕಿನ ಭಯದಿಂದಾಗಿ ಇತರೆ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲು ನಕಾರ ಮಾಡಲಾಗುತ್ತಿದೆ.

ಸತ್ಯ 3 : ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಇರುವುದು ಮಧುಮೇಹ, ಅಸ್ತಮಾ, ಸಿಓಪಿಡಿ, ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಲಿವರ್ ಸಮಸ್ಯೆ, ಹೃದಯ ಸಂಬಂಧೀ ಕಾಯಿಲೆ ಇರುವವರಿಗೆ ಕೂಡಲೇ ಆಕ್ಸಿಜನ್ ವ್ಯವಸ್ಥೆ ಬೇಕಾಗುತ್ತೆ. ಆದ್ರೆ ಅಂಥಾ ಕಾಯಿಲೆ ಇರೋ ರೋಗಿಗಳಿಗೆ ಆಕ್ಸಿಜನ್ ಟೈಮ್​ಗೆ ಸಿಗುತ್ತಿಲ್ಲ. ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋದರೆ ಒಳಗಡೆಯೇ ಸೇರಿಸಿಕೊಳ್ಳುತ್ತಿಲ್ಲ. ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಸಾಯುವವರ ಸಂಖ್ಯೆ ಹೆಚ್ಚಳವಾಗ್ತಿದೆ.

Published On - 9:45 am, Thu, 9 July 20

ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?