71ನೇ ಗಣರಾಜ್ಯೋತ್ಸವ ಸಂಭ್ರಮ: ರಾಜ್​ಪಥ್​ನಲ್ಲಿ ರಾರಾಜಿಸಿದ ಅನುಭವ ಮಂಟಪ ಸ್ತಬ್ಧ ಚಿತ್ರ

ದೆಹಲಿ: ಇಂದು 71 ಗಣರಾಜ್ಯೋತ್ಸವ ಸಂಭ್ರಮ. ರಾಷ್ಟ್ರ ರಾಜಧಾನಿ ದೆಹಲಿಯ ರಾಜ್​ಪಥ್​ನಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯ್ತು. ಭಾರತೀಯ ಸೇನಾ ಶಕ್ತಿ ಪ್ರದರ್ಶನ ನಡೆಯಿತು. ಇದೇ ವೇಳೆ ಬಸವಣ್ಣನ ವಚನ ಕಂಪು ಕೂಡ ರಾಜಪಥ್​ನಲ್ಲಿ ಪಸರಿತು. ರಾರಾಜಿಸಿದ ಬಸವಣ್ಣನವರ ಅನುಭವ ಮಂಟಪ ಸ್ತಬ್ಧ ಚಿತ್ರ! ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು. ಈ ವೇಳೆ ರಾಜ್ಯದಿಂದ ಬಸವಣ್ಣರ ಅನುಭವ ಮಂಟಪದ ಸ್ತಬ್ಧಚಿತ್ರ ಕಣ್ಮನ ಸೂರೆಗೊಂಡಿತು. 25 ಮಂದಿ ವಚನ ಹೇಳೋ ಮೂಲ ಬಸವಣ್ಣನ ಸಿದ್ಧಾಣತದ ಕಂಪನ್ನ […]

71ನೇ ಗಣರಾಜ್ಯೋತ್ಸವ ಸಂಭ್ರಮ: ರಾಜ್​ಪಥ್​ನಲ್ಲಿ ರಾರಾಜಿಸಿದ ಅನುಭವ ಮಂಟಪ ಸ್ತಬ್ಧ ಚಿತ್ರ
ಸಾಧು ಶ್ರೀನಾಥ್​

Updated on: Jan 26, 2020 | 6:49 PM

ದೆಹಲಿ: ಇಂದು 71 ಗಣರಾಜ್ಯೋತ್ಸವ ಸಂಭ್ರಮ. ರಾಷ್ಟ್ರ ರಾಜಧಾನಿ ದೆಹಲಿಯ ರಾಜ್​ಪಥ್​ನಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯ್ತು. ಭಾರತೀಯ ಸೇನಾ ಶಕ್ತಿ ಪ್ರದರ್ಶನ ನಡೆಯಿತು. ಇದೇ ವೇಳೆ ಬಸವಣ್ಣನ ವಚನ ಕಂಪು ಕೂಡ ರಾಜಪಥ್​ನಲ್ಲಿ ಪಸರಿತು.

ರಾರಾಜಿಸಿದ ಬಸವಣ್ಣನವರ ಅನುಭವ ಮಂಟಪ ಸ್ತಬ್ಧ ಚಿತ್ರ!
ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು. ಈ ವೇಳೆ ರಾಜ್ಯದಿಂದ ಬಸವಣ್ಣರ ಅನುಭವ ಮಂಟಪದ ಸ್ತಬ್ಧಚಿತ್ರ ಕಣ್ಮನ ಸೂರೆಗೊಂಡಿತು. 25 ಮಂದಿ ವಚನ ಹೇಳೋ ಮೂಲ ಬಸವಣ್ಣನ ಸಿದ್ಧಾಣತದ ಕಂಪನ್ನ ರಾಜಧಾನಿಯಲ್ಲಿ ಪಸರಿಸಿದ್ರು. ಇನ್ನುಳಿದಂತೆ, ಜಮ್ಮು-ಕಾಶ್ಮೀರ, ಒಡಿಶಾ ಸೇರಿ ವಿವಿಧ ರಾಜ್ಯ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.

ಹುತಾತ್ಮ ಯೋಧರಿಗೆ ಮೋದಿ ನಮನ:
ಪ್ರತಿ ವರ್ಷ ಗಣರಾಜ್ಯೋತ್ಸವದಂದು ಇಂಡಿಯಾ ಗೇಟ್ ಬಳಿಯಿರೋ ‘ಅಮರ್ ಜವಾನ್ ಜ್ಯೋತಿ’ಗೆ ಪ್ರಧಾನಿ ನಮನ ಸಲ್ಲಿಸೋದು ಸಂಪ್ರದಾಯ. ಆದ್ರೆ, ಇಂದು ಮೋದಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ರು. ಇಂಡಿಯಾ ಗೇಟ್ ಪಕ್ಕದಲ್ಲೇ ನಿರ್ಮಾಣಗೊಂಡಿರೋ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ, ಡಿಜಿಟಲ್ ಬುಕ್​ನಲ್ಲಿ ಸಹಿ ಹಾಕಿದ್ರು.

ಈ ಬಾರಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಆಗಮಿಸಿದ್ರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜತೆಗೆ ಬ್ರೆಜಿಲ್ ಅಧ್ಯಕ್ಷರು ರಾಜ್​​ಪಥ್​ಗೆ ತೆರಳಿದ್ರು. ಪ್ರಧಾನಿ ಮೋದಿ ಇಬ್ಬರೂ ರಾಷ್ಟ್ರಪತಿಗಳನ್ನ ಸ್ವಾಗತಿಸಿದ್ರು. ನಂತರ ರಾಮನಾಥ್ ಕೋವಿಂದ್ ಧ್ವಜಾರೋಹಣ ನೆರವೇರಿಸಿದ್ರು. ಅಂತಿಮವಾಗಿ ರಾಷ್ಟ್ರಗೀತೆಯೊಂದಿಗೆ ಪರೇಡ್ ಸಂಪನ್ನಗೊಳ್ಳುತ್ತಲೇ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಬ್ರೆಜಿಲ್ ಅಧ್ಯಕ್ಷರನ್ನ ಕಳುಹಿಸಿಕೊಟ್ಟ ಪ್ರಧಾನಿ ಮೋದಿ, ಕೆಲಕಾಲ ರಾಜಪಥದಲ್ಲಿ ನಡೆದಾಡಿದ್ರು.


sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us