ಮುಸಲ್ಮಾನರಿಗೆ ಧರ್ಮಾಧರಿತ ಮೀಸಲಾತಿ ನೀಡುವುದು ಸಂವಿಧಾನಬಾಹಿರ ಅನಿಸಿಕೊಳ್ಳುತ್ತದೆ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ

Updated on: Mar 05, 2025 | 4:34 PM

ರಾಜ್ಯದ ಕರ್ನಾಟಕ ಸರ್ಕಾರ ನಿರ್ದಿಷ್ಟವಾಗಿ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿದೆ, ತುಷ್ಠೀಕರಣದ ರಾಜಕೀಯದ ಮೂಲಕ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ ಮತ್ತು ದ್ರೋಹ ಬಗೆಯುತ್ತಿದೆ, ಸರಕಾರದ ನಿರ್ಣಯವನ್ನು ಸದನದಲ್ಲಿ ಮಾತ್ರ ಅಲ್ಲದೆ ನ್ಯಾಯಾಲಯದಲ್ಲೂ ಪ್ರಶ್ನಿಸುತ್ತೇವೆ, ಸಂವಿಧಾನಬಾಹಿರವಾಗಿ ಧರ್ಮಾಧರಿತ ಮೀಸಲಾತಿ ನೀಡಬಹುದೇ ಎಂದು ಕೋರ್ಟ್​ನ್ನು ಕೇಳುತ್ತೇವೆ ಎಂದು ಯತ್ನಾಳ್ ಹೇಳಿದರು.

ಬೆಂಗಳೂರು, ಮಾರ್ಚ್ 5: ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ (Muslim community) ಶೇಕಡ 4 ಮೀಸಲಾತಿ ಕಲ್ಪಿಸುವ ಬಗ್ಗೆ ಕ್ಯಾಬಿನೆಟ್ ಚರ್ಚೆಯಾಗಿದೆ, ಅದನ್ನು ಜಾರಿಗೆ ತರುವ ನಿರ್ಣಯವನ್ನೂ ಸರ್ಕಾರ ತೆಗೆದುಕೊಳ್ಳಬಹುದು. ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9 ವರದಿಗಾರನೊಂದಿಗೆ ಮಾತಾಡಿರರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರ ಮುಸಲ್ಮಾನರಿಗೆ ಮೀಸಲಾತಿಯನ್ನು ಘೋಷಿಸಿದರೆ ಅದು ಸಂವಿಧಾನ ವಿರೋಧಿ ಅನಿಸಿಕೊಳ್ಳಲಿದೆ, ಯಾಕೆಂದರೆ, ಧರ್ಮಾಧರಿತ ಮೀಸಲಾತಿಯನ್ನು ನೀಡಲು ಬರೋದಿಲ್ಲ, ಸರ್ವೋಚ್ಛ ನ್ಯಾಯಾಲಯದಲ್ಲಿ ಇದರ ಬಗ್ಗೆ ವಾದವಿವಾದ ನಡೆದಿದೆ, ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿ ಸಲ್ಲದು ಎಂಬ ತೀರ್ಪು ನ್ಯಾಯಾಲಯ ನೀಡುವ ಭರವಸೆ ತಮಗಿದೆ ಎಂದು ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಾಸಕರ ವೇತನ ಪರಿಷ್ಕರಣೆ ವಿಷಯ ಸದನದಲ್ಲಿ ಚರ್ಚೆಗೆ ಬಂದಿಲ್ಲ, ನನಗಂತೂ ಹೆಚ್ಚಳ ಬೇಕಿಲ್ಲ: ಯತ್ನಾಳ್

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.