ವೀರಶೈವ ಲಿಂಗಾಯತರಿಗೆ 2ಎ ಮೀಸಲಾತಿ ತಪ್ಪಿಸಿರೋದು ಯಡಿಯೂರಪ್ಪ ಮತ್ತು ವಿಜಯೇಂದ್ರ: ಬಸನಗೌಡ ಯತ್ನಾಳ್
ನಿನ್ನೆ ವಿಜಯೇಂದ್ರ ಬೆಂಬಲಿಗರು ನಡೆಸಿದ ಸ್ವಾಮೀಜಿಗಳ ಸಭೆಯಲ್ಲಿ ಒಬ್ಬರಾದರೂ ಪ್ರತಿಷ್ಠಿತ ಮಠಾಧೀಶ ಇರಲಿಲ್ಲ, ಅವರೆಲ್ಲರಿಗೆ ಸ್ವಾಮೀಜಿಗಳ ಉಡಿಗೆ ತೊಡಿಸಿ ಸಭೆಯಲ್ಲಿ ಕೂರಿಸಿದಂತಿತ್ತು, ಅವರ ಗುರುತೇ ಪ್ರಾಯಶಃ ವೀರಶೈವ ಲಿಂಗಾಯತರಿಗೆ ಇರಲಾರದು, ವೀರಶೈವ ಲಿಂಗಾಯತ ಮಹಾಸಭಾದ ಬೆಂಬಲ ಕೋರಿ ಶಾಮನೂರ ಶಿವಶಂಕ್ರಪ್ಪನವರ ಮನೆಗೆ ವಿಜಯೇಂದ್ರ ಹೋಗಿದ್ದು ಗುಟ್ಟಾಗಿ ಉಳಿದಿಲ್ಲ ಎಂದು ಯತ್ನಾಳ್ ಹೇಳಿದರು
ಬೆಂಗಳೂರು, ಮಾರ್ಚ್ 5 : ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರರನ್ನು (BY Vijayendra) ತಮ್ಮ ಎಂದಿನ ಶೈಲಿಯಲ್ಲಿ ಟೀಕಿಸಿದರು. ವೀರಶೈವ ಲಿಂಗಾಯತರಿಗೆ 2 ಎ ಮೀಸಲಾತಿ ತಪ್ಪಿಸಿದ್ದೇ ಯಡಿಯೂರಪ್ಪ ಮತ್ತು ವಿಜಯೇಂದ್ರ, ಅವರ ನಾಯಕತ್ವವನ್ನು ವೀರಶೈವ ಲಿಂಗಾಯತ ಸಮುದಾಯ ಒಪ್ಪುವುದು ಸಾಧ್ಯವೇ ಇಲ್ಲ ಎಂದು ಹೇಳಿದರು. ಸುಮಾರು ಒಂದು ತಿಂಗಳಿಂದ ಮೌನವಾಗಿದ್ದ ಯತ್ನಾಳ್ ಈಗ ಪುನಃ ಯಡಿಯೂರಪ್ಪ ಕುಟುಂಬವನ್ನು ಟೀಕಿಸಲು ಆರಂಭಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲಿಂಗಾಯತ ಸಮರ; ಯತ್ನಾಳ್ ವಿರುದ್ಧ ಅಖಾಡಕ್ಕಿಳಿದ ವಿಜಯೇಂದ್ರ ಬಣ
Latest Videos