ಮುಸಲ್ಮಾನರಿಗೆ ಧರ್ಮಾಧರಿತ ಮೀಸಲಾತಿ ನೀಡುವುದು ಸಂವಿಧಾನಬಾಹಿರ ಅನಿಸಿಕೊಳ್ಳುತ್ತದೆ: ಬಸನಗೌಡ ಯತ್ನಾಳ್
ರಾಜ್ಯದ ಕರ್ನಾಟಕ ಸರ್ಕಾರ ನಿರ್ದಿಷ್ಟವಾಗಿ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿದೆ, ತುಷ್ಠೀಕರಣದ ರಾಜಕೀಯದ ಮೂಲಕ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ ಮತ್ತು ದ್ರೋಹ ಬಗೆಯುತ್ತಿದೆ, ಸರಕಾರದ ನಿರ್ಣಯವನ್ನು ಸದನದಲ್ಲಿ ಮಾತ್ರ ಅಲ್ಲದೆ ನ್ಯಾಯಾಲಯದಲ್ಲೂ ಪ್ರಶ್ನಿಸುತ್ತೇವೆ, ಸಂವಿಧಾನಬಾಹಿರವಾಗಿ ಧರ್ಮಾಧರಿತ ಮೀಸಲಾತಿ ನೀಡಬಹುದೇ ಎಂದು ಕೋರ್ಟ್ನ್ನು ಕೇಳುತ್ತೇವೆ ಎಂದು ಯತ್ನಾಳ್ ಹೇಳಿದರು.
ಬೆಂಗಳೂರು, ಮಾರ್ಚ್ 5: ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ (Muslim community) ಶೇಕಡ 4 ಮೀಸಲಾತಿ ಕಲ್ಪಿಸುವ ಬಗ್ಗೆ ಕ್ಯಾಬಿನೆಟ್ ಚರ್ಚೆಯಾಗಿದೆ, ಅದನ್ನು ಜಾರಿಗೆ ತರುವ ನಿರ್ಣಯವನ್ನೂ ಸರ್ಕಾರ ತೆಗೆದುಕೊಳ್ಳಬಹುದು. ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9 ವರದಿಗಾರನೊಂದಿಗೆ ಮಾತಾಡಿರರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರ ಮುಸಲ್ಮಾನರಿಗೆ ಮೀಸಲಾತಿಯನ್ನು ಘೋಷಿಸಿದರೆ ಅದು ಸಂವಿಧಾನ ವಿರೋಧಿ ಅನಿಸಿಕೊಳ್ಳಲಿದೆ, ಯಾಕೆಂದರೆ, ಧರ್ಮಾಧರಿತ ಮೀಸಲಾತಿಯನ್ನು ನೀಡಲು ಬರೋದಿಲ್ಲ, ಸರ್ವೋಚ್ಛ ನ್ಯಾಯಾಲಯದಲ್ಲಿ ಇದರ ಬಗ್ಗೆ ವಾದವಿವಾದ ನಡೆದಿದೆ, ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿ ಸಲ್ಲದು ಎಂಬ ತೀರ್ಪು ನ್ಯಾಯಾಲಯ ನೀಡುವ ಭರವಸೆ ತಮಗಿದೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಾಸಕರ ವೇತನ ಪರಿಷ್ಕರಣೆ ವಿಷಯ ಸದನದಲ್ಲಿ ಚರ್ಚೆಗೆ ಬಂದಿಲ್ಲ, ನನಗಂತೂ ಹೆಚ್ಚಳ ಬೇಕಿಲ್ಲ: ಯತ್ನಾಳ್
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
