‘ಸಿನಿಮೋತ್ಸವಕ್ಕೆ ಆಹ್ವಾನ ಹಾಗಿರಲಿ, ಪಾಸ್ ಕೇಳಿದ್ದೆ ಅದೂ ಕೊಡಲಿಲ್ಲ’; ಟೆನ್ನಿಸ್ ಕೃಷ್ಣ ಬೇಸರ
ಸಿನಿಮೋತ್ಸವದ ವಿಚಾರ ಎಲ್ಲ ಕಡೆಗಳಲ್ಲೂ ಸುದ್ದಿ ಆಗುತ್ತಾ ಇದೆ. ಅನೇಕರಿಗೆ ಆಹ್ವಾನ ಸಿಕ್ಕಿಲ್ಲ ಎನ್ನು ವಿಚಾರ ಈಗ ಚರ್ಚೆಯ ಕೇಂದ್ರ ಬಿಂದು ಆಗಿದೆ. ತಮಗೆ ಆಹ್ವಾನ ಇಲ್ಲ ಎಂದು ಅನೇಕ ಸೆಲೆಬ್ರಿಟಿಗಳು ದೂರಿದ್ದಾರೆ. ಈಗ ಟೆನ್ನಿಸ್ ಕೃಷ್ಣ ಕೂಡ ಇದೇ ಆರೋಪ ಮಾಡಿದ್ದಾರೆ.
ಸಾಧು ಕೋಕಿಲ ಅವರು ಸಿನಿಮೋತ್ಸವಕ್ಕೆ ಎಲ್ಲರಿಗೂ ಆಹ್ವಾನ ನೀಡಿಲ್ಲ ಎಂಬ ಮಾತಿದೆ. ಈ ಬಗ್ಗೆ ಹಾಸ್ಯನಟ ಟೆನ್ನಿಸ್ ಕೃಷ್ಣ ಮಾತನಾಡಿದ್ದಾರೆ. ‘ಸಿನಿಮೋತ್ಸವದ ಜವಾಬ್ದಾರಿ ತೆಗೆದುಕೊಂಡಿರೋ ಸಾಧು ಕೋಕಿಲ ಎಲ್ಲ ಕಡೆಗಳಲ್ಲಿ ಹೋಗಿ ಆಹ್ವಾನ ನೀಡೋಕೆ ಸಾಧ್ಯವಿಲ್ಲ. ಹೀಗಾಗಿ, ಇನ್ನೂ ಕೆಲವರಿಗೆ ಆ ಜವಾಬ್ದಾರಿ ವಹಿಸಬೇಕಿತ್ತು. ನನ್ನನ್ನು ಯಾರೂ ಸಿನಿಮೋತ್ಸವಕ್ಕೆ ಕರೆದಿಲ್ಲ. ಪಾಸ್ ಕೇಳಿದೆ. ಅದೂ ಕೂಡ ಸಿಕ್ಕಿಲ್ಲ. ಫೋಟೋ ಕಳುಹಿಸಿ, ಫೋನ್ ಮಾಡಿದ್ದೀನಿ. ಆದಾಗ್ಯೂ ನನಗೆ ಸಿಗಲಿಲ್ಲ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 05, 2025 02:23 PM