ಸಾಯಂಕಾಲ ಸೈರನ್ ಮತ್ತು ರಾತ್ರಿ ಸಮಯ ಬ್ಲ್ಯಾಕ್ ಔಟ್- ಎರಡೂ ಮಾಕ್ ಡ್ರಿಲ್ಗಳನ್ನು ಕಂಡ ಬೆಂಗಳೂರು
ಸೈರನ್ ಬಾರಿಸಿದ್ದನ್ನು ಕೇಳಿಸಿಕೊಂಡಿಲ್ಲ ಎಂದು ನಗರದ ಬಹಳಷ್ಟು ಭಾಗಗಳ ನಿವಾಸಿಗಳು ಹೇಳುತ್ತಿದ್ದಾರೆ. ನಾವು ನಿನ್ನೆ ವರದಿ ಮಾಡಿದಂತೆ 35 ಸ್ಥಳಗಳಲ್ಲಿ ಸೈರನ್ ಮೊಳಗಿಸಲು ವ್ಯವಸ್ಥೆ ಮಾಡಲಾಗಿತ್ತು ಮತ್ತು ಅವುಗಳ ಪೈಕಿ 32 ಮಾತ್ರ ವರ್ಕಿಂಗ್ ಕಂಡೀಷನ್ನಲ್ಲಿದ್ದವು. ಬೆಂಗಳೂರಿನ ಜನಸಂಖ್ಯೆ 1.25 ಕೋಟಿಗಿಂತ ಜಾಸ್ತಿ ಎಂದು ಹೇಳಲಾಗುತ್ತಿದೆ. ಕೆಲವರಿಗೆ ಸೈರನ್ ಕೇಳಿಸದಿರೋದು ಆಶ್ಚರ್ಯವೇನೂ ಅಲ್ಲ.
ಬೆಂಗಳೂರು, ಮೇ 7: ಸಾಮಾನ್ಯವಾಗಿ ಯುದ್ಧದ ಸಮಯದಲ್ಲಿ (war time) ಕಾರ್ಯರೂಪಕ್ಕೆ ತರುವ ಎರಡು ಆಯಾಮಗಳ ಮಾಕ್ ಡ್ರಿಲ್ ಅನ್ನು ಇಂದು ನಗರದಲ್ಲಿ ಪ್ರಯೋಗಿಸಲಾಯಿತು. ಸೈರನ್ ಮೊಳಗುವುದು ಮತ್ತು ರಾತ್ರಿಯ ಸಮಯ ಬ್ಲ್ಯಾಕ್ ಔಟ್ ಮಾಡುವುದು ಅಣುಕು ಪ್ರದರ್ಶನದ ಪ್ರಮುಖ ಆಯಾಮಗಳಾಗಿವೆ. ಇಂದು ಸಾಯಂಕಾಲ 4 ಗಂಟೆಗೆ ಸೈರನ್ ಮೊಳಗಿಸಲಾಯಿತು. ಸಾಯಂಕಾಲದ ನಂತರ ಬ್ಲ್ಯಾಕ್ ಔಟ್ ಮಾಡಿರುವುದನ್ನು ದೃಶ್ಯಗಳಲ್ಲಿ ನೋಡಬಹದು. ದೊಡ್ಡದೊಡ್ಡ ಕಟ್ಟಡಗಳಲ್ಲಿ ಮಿಣುಕು ದೀಪಗಳು ಚೆಲ್ಲುವಂಥ ಬೆಳಕನ್ನು ಕಾಣಬಹುದು.
ಇದನ್ನೂ ಓದಿ: ಭಾರತದ ಯುದ್ಧ ತಯಾರಿ: ಮಾಕ್ ಡ್ರಿಲ್ ಹಿನ್ನೆಲೆ ನಾಳೆ ಬೆಂಗಳೂರಲ್ಲಿ ಮೊಳಗಲಿದೆ ಮೂರು ಹಂತದ ಸೈರನ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ