ಗ್ರಾ.ಪಂ ಎಲೆಕ್ಷನ್​ನಲ್ಲಿ ಸೋತಿದ್ದಕ್ಕೆ ಹಲ್ಲೆ ಆರೋಪ: ಗುಂಪು ಘರ್ಷಣೆಯಲ್ಲಿ ನಿವೃತ್ತ ಶಿಕ್ಷಕ ಸಾವು

ಗ್ರಾ.ಪಂ. ಚುನಾವಣೆ ಸಂಬಂಧ ನಡೆದ ಘರ್ಷಣೆಯಲ್ಲಿ ನಿವೃತ್ತ ಶಿಕ್ಷಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾ.ಪಂ. ವ್ಯಾಪ್ತಿಯ ಮಿನಿಗರಹಳ್ಳಿಯಲ್ಲಿ ನಡೆದಿದೆ.

ಗ್ರಾ.ಪಂ ಎಲೆಕ್ಷನ್​ನಲ್ಲಿ ಸೋತಿದ್ದಕ್ಕೆ ಹಲ್ಲೆ ಆರೋಪ: ಗುಂಪು ಘರ್ಷಣೆಯಲ್ಲಿ ನಿವೃತ್ತ ಶಿಕ್ಷಕ ಸಾವು
ಹಲ್ಲೆಯಲ್ಲಿ ಗಾಯಗೊಂಡ ಮೃತ ಶಿಕ್ಷಕನ ಪುತ್ರ ವಿಜಯೇಂದ್ರ

Updated on: Jan 03, 2021 | 10:38 PM

ದಾವಣಗೆರೆ: ಗ್ರಾ.ಪಂ. ಚುನಾವಣೆ ಸಂಬಂಧ ನಡೆದ ಘರ್ಷಣೆಯಲ್ಲಿ ನಿವೃತ್ತ ಶಿಕ್ಷಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾ.ಪಂ. ವ್ಯಾಪ್ತಿಯ ಮಿನಿಗರಹಳ್ಳಿಯಲ್ಲಿ ನಡೆದಿದೆ. ಎಲೆಕ್ಷನ್​ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ನಿವೃತ್ತ ಶಿಕ್ಷಕ ಕೃಷ್ಣಪ್ಪ(68) ಮೃತಪಟ್ಟಿದ್ದಾರೆ.

ಇತ್ತೀಚಿಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಮೃತ ಕೃಷ್ಣಪ್ಪರ ಸಂಬಂಧಿ ಗೆಲವು ಸಾಧಿಸಿದ್ದರು. ಹಾಗಾಗಿ, ಪರಾಜಿತ ಅಭ್ಯರ್ಥಿಯ ಕಡೆಯವರು ಇಂದು ಉದ್ದೇಶಪೂರ್ವಕವಾಗಿ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು, ಮೃತ ಕೃಷ್ಣಪ್ಪ ಪುತ್ರ ವಿಜಯೇಂದ್ರಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ, ಮಿನಿಗರಹಳ್ಳಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಗ್ರಾಮಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

ಪಾದಚಾರಿಗೆ KSRTC ಬಸ್​ ಡಿಕ್ಕಿ: ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಸಾವು