ಬೆಂಗಳೂರು to ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ರೈಲು ಸಂಚಾರದ ವೇಳಾಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು ನಗರ ಭಾಗದಿಂದ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ ಹಾಲ್ಟ್ ಸ್ಟೇಷನ್‌ ರೈಲು ಸೇವೆಗಳ ವಿವರದ ಬಗ್ಗೆ ಇಲ್ಲಿದೆ ಮಾಹಿತಿ.

ಬೆಂಗಳೂರು to ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ರೈಲು ಸಂಚಾರದ ವೇಳಾಪಟ್ಟಿ ಇಲ್ಲಿದೆ ನೋಡಿ
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on:Jan 04, 2021 | 1:20 PM

ಬೆಂಗಳೂರು: ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ವ್ಯವಸ್ಥೆ ನಾಳೆಯಿಂದ ಕಾರ್ಯಾರಂಭ ಆಗಲಿದೆ. ಪ್ರತಿ ರೈಲು 325 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಲಿದೆ.

ಈ ರೈಲು ಸೇವೆಯಿಂದ ಕೇವಲ ಪ್ರಯಾಣಿಕರಲ್ಲದೆ ವಿಮಾನ ನಿಲ್ದಾಣದ ಸಿಬ್ಬಂದಿಗೂ ನೆರವಾಗಲಿದೆ. ಏಕೆಂದರೆ, ನಗರ ಭಾಗದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಸಿಬ್ಬಂದಿ ನಿತ್ಯ 2ರಿಂದ 4 ಗಂಟೆ ವ್ಯಯ ಮಾಡುತ್ತಿದ್ದರು. ಅಲ್ಲದೆ, ಬಹಳಷ್ಟು ಹಣವನ್ನು ಕೂಡ ಖರ್ಚು ಮಾಡುತ್ತಿದ್ದರು. ಹೀಗಾಗಿ, ಅವರ ದಿನನಿತ್ಯದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಂತಾಗಿದೆ. ಕೆಂಪೇಗೌಡ ಇಂಟರ್​ನ್ಯಾಷನಲ್ ಏರ್​ಪೋರ್ಟ್ ಹಾಲ್ಟ್ ಸ್ಟೇಷನ್​ಗೆ ಹೋಗುವ  ರೈಲುಗಳ ವೇಳಾಪಟ್ಟಿಯ ಮಾಹಿತಿ ಇಲ್ಲಿದೆ ನೋಡಿ. ರೈಲು ಸಂಖ್ಯೆ 06283: ಕೆ.ಎಸ್.ಆರ್ ಬೆಂಗಳೂರು – ದೇವನಹಳ್ಳಿ ಡೆಮು ರೈಲು ಕೆಎಸ್ಆರ್ ಬೆಂಗಳೂರಿನಿಂದ 21:00 ಗಂಟೆಗೆ ಹೊರಟು 22:20 ಗಂಟೆಗೆ ದೇವನಹಳ್ಳಿಯನ್ನು ತಲುಪುತ್ತದೆ

 ರೈಲು ಸಂಖ್ಯೆ 06284: ದೇವನಹಳ್ಳಿ – ಬೆಂಗಳೂರು ಕಂಟೋನ್ಮೆಂಟ್ ಡೆಮು ರೈಲು ದೇವನಹಳ್ಳಿಯಿಂದ 07:45 ಗಂಟೆಗೆ ನಿರ್ಗಮಿಸುತ್ತದೆ ಮತ್ತು 08:50 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ

ರೈಲು ಸಂಖ್ಯೆ 06285: ಕೆ.ಎಸ್.ಆರ್ ಬೆಂಗಳೂರು – ದೇವನಹಳ್ಳಿ ಡೆಮು ರೈಲು ಕೆಎಸ್ಆರ್ ಬೆಂಗಳೂರಿನಿಂದ 04:45ಕ್ಕೆ ಹೊರಟು 06:05ಕ್ಕೆ ದೇವನಹಳ್ಳಿ ತಲುಪುತ್ತದೆ.

ರೈಲು ಸಂಖ್ಯೆ 06286: ದೇವನಹಳ್ಳಿ-ಕೆ.ಎಸ್.ಆರ್ ಬೆಂಗಳೂರು ಡೆಮು ರೈಲು ದೇವನಹಳ್ಳಿಯಿಂದ 22:30 ಗಂಟೆಗೆ ನಿರ್ಗಮಿಸುತ್ತದೆ ಮತ್ತು 23:55 ಗಂಟೆಗೆ ಕೆ.ಎಸ್.ಆರ್ ಬೆಂಗಳೂರಿಗೆ ತಲುಪುತ್ತದೆ.

ರೈಲು ಸಂಖ್ಯೆ 06287: ಯಲಹಂಕ – ದೇವನಹಳ್ಳಿ ಡೆಮು ರೈಲು ಯಲಹಂಕದಿಂದ 07:00 ಗಂಟೆಗೆ ಹೊರಟು 07:35 ಗಂಟೆಗೆ ದೇವನಹಳ್ಳಿಯನ್ನು ತಲುಪುತ್ತದೆ.

ರೈಲು ಸಂಖ್ಯೆ 06288: ದೇವನಹಳ್ಳಿ – ಯಲಹಂಕ ಡೆಮು ರೈಲು ದೇವನಹಳ್ಳಿಯಿಂದ 06:15 ಗಂಟೆಗೆ ನಿರ್ಗಮಿಸುತ್ತದೆ ಮತ್ತು 06:50 ಗಂಟೆಗೆ ಯಲಹಂಕವನ್ನು ತಲುಪುತ್ತದೆ.

ಮೇಲಿನ ಡೆಮು ರೈಲುಗಳು 6 ಟ್ರೇಲಿಂಗ್ ಕಾರುಗಳು ಮತ್ತು 2 ಮೋಟಾರ್ ಕಾರುಗಳ ಸಂಯೋಜನೆಯನ್ನು ಹೊಂದಿವೆ. ರೈಲುಗಳು ವಾರದಲ್ಲಿ 6 ದಿನ ಓಡುತ್ತವೆ. ಆದರೆ, ಭಾನುವಾರದಂದು ಯಾವುದೇ ಸೇವೆ ಇರುವುದಿಲ್ಲ.

ರೈಲು ಸಂಖ್ಯೆ 06280: ಬಂಗಾರ್‌ಪೇಟೆ – ಬೆಂಗಳೂರು ಕಂಟೋನ್ಮೆಂಟ್ ಡೆಮು ರೈಲು ಸೇವೆಗಳನ್ನು ಕೆ.ಎಸ್‌.ಆರ್ ಬೆಂಗಳೂರಿನವರೆಗೆ ವಿಸ್ತರಿಸಲಾಗುವುದು. ಮೇಲಿನ ಡೆಮು ರೈಲುಗಳನ್ನು ಪರಿಚಯಿಸುವುದರಿಂದ ರೈಲು 23:00 ಗಂಟೆಗೆ ಕೆ.ಎಸ್.ಆರ್ ಬೆಂಗಳೂರಿಗೆ ತಲುಪಲಿದೆ.

ರೈಲು ಸಂಖ್ಯೆ 06269: 17:55 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡುವ ರೈಲು 18:50 ಗಂಟೆಗೆ ಕೆ.ಐ.ಎ.ಡಿ. ಹಾಲ್ಟ್ ಆಗಮಿಸಿ 18.51 ಗಂಟೆಗೆ ಬಂಗಾರ್‌ಪೇಟ್‌ಗೆ ಹೊರಡುತ್ತದೆ.

ರೈಲು ಸಂಖ್ಯೆ 06270: ಬಂಗಾರ್‌ಪೇಟೆ – ಯಶವಂತಪುರ ಡೆಮು ರೈಲು 08.25 ಗಂಟೆಗೆ ಕೆ.ಐ.ಎ.ಡಿ. ಹಾಲ್ಟ್ ಆಗಮಿಸಿ 08:26 ಗಂಟೆಗೆ ಯಶವಂತಪುರಕ್ಕೆ ಹೊರಡುತ್ತದೆ.

ರೈಲು ಸಂಖ್ಯೆ 06279: ಯಶವಂತಪುರ – ಬಂಗಾರ್‌ಪೆಟ್ ಡೆಮು ರೈಲು ಯಶವಂತಪುರ ದಿಂದ 08.30 ಗಂಟೆಗೆ ಹೊರಟು 09.16 ಗಂಟೆಗೆ ಕೆ.ಐ.ಎ.ಡಿ. ಹಾಲ್ಟ್ ಆಗಮಿಸಿ 09:17 ಗಂಟೆಗೆ ಬಂಗಾರ್‌ಪೇಟ್‌ಗೆ ಹೊರಡುತ್ತದೆ.

ರೈಲು ಸಂಖ್ಯೆ 06280: ಬಂಗಾರ್‌ಪೇಟೆ ಕೆ.ಎಸ್‌.ಆರ್ ಬೆಂಗಳೂರು ಡೆಮು ರೈಲು 18:42 ಗಂಟೆಗೆ ಕೆ.ಐ.ಎ.ಡಿ. ಹಾಲ್ಟ್ ಆಗಮಿಸಿ 18:43 ಗಂಟೆಗೆ ಕೆ.ಎಸ್‌.ಆರ್ ಬೆಂಗಳೂರು ಕಡೆಗೆ ಹೊರಡುತ್ತದೆ.

ಇನ್ಮುಂದೆ ಕೇವಲ 10 ರೂಪಾಯಿಗೆ.. ಮೆಜೆಸ್ಟಿಕ್​ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿ!

Published On - 9:32 pm, Sun, 3 January 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ