ಇತರೆ ಧರ್ಮದ ದೇವರುಗಳು ಕೋಪಿಷ್ಟರು.. ಆದರೆ ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ -S.L.ಭೈರಪ್ಪ
ಇತರೆ ಧರ್ಮದ ದೇವರುಗಳು ಕೋಪಿಷ್ಟರು. ದೇವರ ಬಗ್ಗೆ ಸಣ್ಣ ಟೀಕೆ ಮಾಡಿದರೂ ಭಕ್ತರು ಹೊಡೆಯುತ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ. ಹಿಂದೂ ಧರ್ಮದಲ್ಲಿರುವ ವೈಶಾಲ್ಯತೆ ಬೇರೆ ಧರ್ಮಗಳಲ್ಲಿ ಇಲ್ಲ ಎಂದು ಭೈರಪ್ಪ ಹೇಳಿದರು.
ಮೈಸೂರು: ಇತರೆ ಧರ್ಮದ ದೇವರುಗಳು ಕೋಪಿಷ್ಟರು. ದೇವರ ಬಗ್ಗೆ ಸಣ್ಣ ಟೀಕೆ ಮಾಡಿದರೂ ಭಕ್ತರು ಹೊಡೆಯುತ್ತಾರೆ. ಆದರೆ ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ. ಹಿಂದೂ ಧರ್ಮದಲ್ಲಿರುವ ವೈಶಾಲ್ಯತೆ ಬೇರೆ ಧರ್ಮಗಳಲ್ಲಿ ಇಲ್ಲ. ನಾವು ದೇವರನ್ನು ಬೈಯುತ್ತೇವೆ, ಟೀಕೆ ಮಾಡುತ್ತೇವೆ. ಅದನ್ನ ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಬೇರೆ ಧರ್ಮದವರಿಗೆ ಈ ವೈಶಾಲ್ಯತೆಯನ್ನು ಹೇಳಿಕೊಡಬೇಕಿದೆ. ಇಲ್ಲದಿದ್ದರೆ ಹಿಂದೂ ಧರ್ಮದ ವೈಶಾಲ್ಯತೆಗೆ ಧಕ್ಕೆಯಾಗುತ್ತೆ ಎಂದು ಭೈರಪ್ಪ ಹೇಳಿದರು.
‘ಜಿನ್ನಾ, ಗಾಂಧಿ ಉಪವಾಸ ಮಾಡಿ ಸಾಯಲಿ ಎಂದು ಬಯಸುತ್ತಿದ್ದ’ ರಾಮ ಅಹಿಂಸಾ ಮಾರ್ಗವನ್ನು ಹಿಡಿದಿದ್ದ. ಗಾಂಧಿ ಕೂಡ ಅದೇ ಮಾರ್ಗವನ್ನ ಅನುಸರಿಸಿ ಉಪವಾಸ ಸತ್ಯಗ್ರಹ ಮಾಡುತ್ತಿದ್ದರು. ಉಪವಾಸ ಮಾಡಿದಾಗ ಹಿಂದೂಗಳು ಅವರ ಮಾತುಗಳನ್ನು ಕೇಳುತ್ತಿದ್ದರು. ಆದರೆ ಜಿನ್ನಾ, ಗಾಂಧಿ ಉಪವಾಸ ಮಾಡಿ ಸಾಯಲಿ ಎಂದು ಬಯಸುತ್ತಿದ್ದ ಎಂದು ಕಾರ್ಯಕ್ರಮದಲ್ಲಿ ಸಾಹಿತಿ S.L.ಭೈರಪ್ಪ ಹೇಳಿದರು.
‘ಗೋವಿಗೂ ನಮಗೂ ಇರೋದು ತಾಯಿ ಮಕ್ಕಳ ಸಂಬಂಧ’ ರಾಜ್ಯದಲ್ಲಿ ಗೋ ಹತ್ಯೆ ಕಾಯ್ದೆ ಜಾರಿ ಸಮರ್ಥಿಸಿದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಗೋವಿಗೂ ನಮಗೂ ಇರೋದು ತಾಯಿ ಮಕ್ಕಳ ಸಂಬಂಧ. ಗೋವು ಅಹಿಂಸೆಯ ಪ್ರತೀಕ. ಚಿಕ್ಕಂದಿನಿಂದ ಗೋವಿನ ಹಾಲು ಕುಡಿದೇ ಎಲ್ಲರೂ ಬೆಳೆದಿದ್ದೇವೆ. ವಯಸ್ಸಾದ ಮೇಲೆ ತಾಯಿಯನ್ನು ನಿರುಪಯುಕ್ತ ಅಂತಾ ಹೇಳಲಾಗುವುದೇ? ಗೋವು ಹಾಲು ಕೊಡುವುದನ್ನು ನಿಲ್ಲಿಸಿದ ಮೇಲೂ ಗೊಬ್ಬರ ಕೊಡುತ್ತದೆ. ನಾವೀಗ ಕೆಮಿಕಲ್ ಯುಕ್ತ ಆಹಾರವನ್ನು ತಿನ್ನುತ್ತಿರುವ ಕಾರಣದಿಂದಲೇ ಕ್ಯಾನ್ಸರ್ ಬರ್ತಿದೆ ಎಂದು S.L.ಭೈರಪ್ಪ ಹೇಳಿದರು.
ಗೋವುಗಳನ್ನು ರೈತರು ಗೊಬ್ಬರದ ಸಲುವಾಗಿಯಾದ್ರೂ ಸಲಹಬೇಕು. ಗೋವನ್ನು ಟೀಕಿಸುವವರು ಮೂಲಭೂತ ಜ್ಞಾನ ಇಲ್ಲದವರು ಎಂದು ಹಿರಿಯ ಸಾಹಿತಿ ಹೇಳಿದರು.
ಹನುಮಂತ ಗುಲಾಮಗಿರಿಯ ಸಂಕೇತ, ಹನುಮ ಜಯಂತಿಯನ್ನೇ ಪ್ರಶ್ನೆ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯರ ಹೇಳಿಕೆಗೆ ಇದು ನಾನು ಉತ್ತರ ಕೊಡಲು ಲಾಯಕ್ಕೇ ಇಲ್ಲದ ವಿಚಾರ. ಹಾಗಾಗಿ ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಭೈರಪ್ಪ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ರಾಮ ಆದರ್ಶ ವ್ಯಕ್ತಿ; ಆದರೆ, ಪ್ರಧಾನಿ ಮೋದಿ ರಾಮನಲ್ಲ.. ಕೃಷ್ಣ -S.L.ಭೈರಪ್ಪ
Published On - 7:53 pm, Sun, 3 January 21