ರಾತ್ರಿ ರಿಸೆಪ್ಷನ್​ನಲ್ಲಿದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆ; ಕೊನೆಗೆ ವಧು ಕೈ ಹಿಡಿದ BMTC ಕಂಡಕ್ಟರ್

ರಾತ್ರಿ ರಿಸೆಪ್ಷನ್​ನಲ್ಲಿದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ತರೀಕೆರೆಯ ಶೃಂಗೇರಿ ಸಮುದಾಯ ಭವನದಲ್ಲಿ ನಡೆದಿದೆ. ಮದುವೆ ಛತ್ರದಲ್ಲೇ ಇದ್ದ ಮತ್ತೋರ್ವ ಯುವಕ ಮಧುಮಗಳ ಕೈ ಹಿಡಿದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ರಾತ್ರಿ ರಿಸೆಪ್ಷನ್​ನಲ್ಲಿದ್ದ ವರ ಬೆಳಗ್ಗೆ ಮುಹೂರ್ತಕ್ಕೆ ನಾಪತ್ತೆ; ಕೊನೆಗೆ ವಧು ಕೈ ಹಿಡಿದ BMTC ಕಂಡಕ್ಟರ್
ನವದಂಪತಿಯ ಮುದ್ದಾದ ಫೋಟೋಗಳು!
Follow us
KUSHAL V
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 03, 2021 | 6:08 PM

ಚಿಕ್ಕಮಗಳೂರು: ರಾತ್ರಿ ರಿಸೆಪ್ಷನ್​ನಲ್ಲಿದ್ದ ವರ ಬೆಳಗ್ಗೆ ಮುಹೂರ್ತದ ವೇಳೆಗೆ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ತರೀಕೆರೆಯ ಶೃಂಗೇರಿ ಸಮುದಾಯ ಭವನದಲ್ಲಿ ನಡೆದಿದೆ. ಈ ನಡುವೆ, ಮದುವೆ ಛತ್ರದಲ್ಲೇ ಇದ್ದ ಮತ್ತೋರ್ವ ಯುವಕ ಮದುಮಗಳ ಕೈ ಹಿಡಿದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಏನಿದು ಸ್ಟೋರಿ? ಬೈ ದಿ ಬೈ, ದೋರನಾಳು ಗ್ರಾಮದ ನವೀನ್ ಎಂಬ ಯುವಕ ಹಾಗೂ ಸಿಂಧು ಎಂಬ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಅಂತೆಯೇ, ನಿನ್ನೆ ಶೃಂಗೇರಿ ಸಮುದಾಯ ಭವನದಲ್ಲಿ ಗಂಡು ಹೆಣ್ಣನ್ನು ಕೂಡಿಸಿ ಅದ್ಧೂರಿ ರಿಸೆಪ್ಷನ್​ ಸಹ ಏರ್ಪಡಿಸಲಾಗಿತ್ತು.

ಲವರ್​ ಮುನಿದಿದ್ದಕ್ಕೆ ವರ ಪರಾರಿ! ಈ ನಡುವೆ, ಸೈಕಲ್​ ಗ್ಯಾಪ್​ನಲ್ಲಿ, ನವೀನ್​ ಪ್ರೀತಿಸುತ್ತಿದ್ದ ಹುಡುಗಿ ಅಚಾನಕ್​ ಆಗಿ ಛತ್ರಕ್ಕೆ ಎಂಟ್ರಿಕೊಟ್ಟು ಮದುವೆ ನಿಲ್ಲಿಸುವುದಾಗಿ ಧಮ್ಕಿ ಹಾಕಿದ್ದಾಳಂತೆ. ಇದರಿಂದ ಪತರಗುಟ್ಟಿ ಹೋದ ವರ ಕಲ್ಯಾಣ ಮಂಟಪದಿಂದಲೇ ಎಸ್ಕೇಪ್​! ಕುಟುಂಬಸ್ಥರು ಆತನಿಗಾಗಿ ಎಲ್ಲಿ ಹುಡುಕಿದರೂ ಸಿಗಲೇ ಇಲ್ಲವಂತೆ.

ಇತ್ತ, ವರ ಪರಾರಿಯಾದ ಬೆನ್ನಲ್ಲೇ ಕಂಗೆಟ್ಟು ಹೋಗಿದ್ದ ಸಿಂಧು ಪಾಡು ನೋಡಿ ಛತ್ರದಲ್ಲೇ ಇದ್ದ ಮತ್ತೋರ್ವ ಯುವಕ ಆಕೆಯ ಕೈಹಿಡಿದ್ದಾನೆ. BMTCಯಲ್ಲಿ ಕಂಡಕ್ಟರ್​ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತರೀಕೆರೆ ತಾಲೂಕಿನ ನಂದಿ ಗ್ರಾಮದ ಯುವಕ ಚಂದ್ರು ಸಿಂಧುವನ್ನು ವರಿಸಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಜೊತೆಗೆ, ಒಳ್ಳೇ ಉದ್ಯೋಗದಲ್ಲಿರುವ ಹುಡುಗ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಸಿಂಧು ಸಂತಸ ವ್ಯಕ್ತಪಡಿಸಿದ್ದಾಳೆ.

ಜೂ. ಒಡೆಯರ್ ಗೆ 3ನೇ ಹುಟ್ಟು ಹಬ್ಬ.. ಅಮ್ಮನ ತೋಳಲ್ಲಿ ನಲಿದಾಡಿದ ಕಂದ