ಈ ಬಾರಿ ಹೊಸ ವರ್ಷ ಆಚರಣೆ ಇಲ್ಲ; ಈ ನಿರ್ಧಾರಕ್ಕೆ ಸಿಎಂ ಯಡಿಯೂರಪ್ಪ ಸಹ ಒಪ್ಪಿದ್ದಾರೆ: ಆರ್. ಅಶೋಕ್

| Updated By: ganapathi bhat

Updated on: Apr 07, 2022 | 5:40 PM

2020 ವಿದಾಯದತ್ತ ಸಾಗುತ್ತಿದ್ದು ಹೊಸ ವರ್ಷ ಸಂಭ್ರಮಾಚರಣೆಯ ಕುರಿತಾದ ಹೇಳಿಕೆಗಳು ಭಾರಿ ಸದ್ದು ಮಾಡುತ್ತಿವೆ. ಈ ಬಗ್ಗೆ ಇಂದು ಕಂದಾಯ ಸಚಿವ ಆರ್.ಅಶೋಕ್​ ಮಾತನಾಡಿದ್ದಾರೆ.

ಈ ಬಾರಿ ಹೊಸ ವರ್ಷ ಆಚರಣೆ ಇಲ್ಲ; ಈ ನಿರ್ಧಾರಕ್ಕೆ ಸಿಎಂ ಯಡಿಯೂರಪ್ಪ ಸಹ ಒಪ್ಪಿದ್ದಾರೆ: ಆರ್. ಅಶೋಕ್
ಆರ್. ಅಶೋಕ್
Follow us on

ಬೆಳಗಾವಿ: 2020 ವಿದಾಯದತ್ತ ಸಾಗುತ್ತಿದ್ದು.. ಹೊಸ ವರ್ಷ ಸಂಭ್ರಮಾಚರಣೆಯ ಕುರಿತಾದ ಹೇಳಿಕೆಗಳು ಭಾರಿ ಸದ್ದು ಮಾಡುತ್ತಿವೆ. ಈ ಬಗ್ಗೆ ಇಂದು ಕಂದಾಯ ಸಚಿವ ಆರ್.ಅಶೋಕ್​ ಮಾತನಾಡಿದ್ದಾರೆ. ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಆರ್. ಅಶೋಕ್, ವಿಪತ್ತು ನಿರ್ವಹಣಾ ಕಾಯ್ದೆಯಡಿ ಹೊಸ ವರ್ಷದ ಸಂಭ್ರಮಾಚರಣೆ ರದ್ದು ಮಾಡುವುದಾಗಿ ಹೇಳಿದ್ದಾರೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ. ಈ ನಿರ್ಧಾರಕ್ಕೆ ಸಿಎಂ ಯಡಿಯೂರಪ್ಪ ಒಪ್ಪಿದ್ದಾರೆ ಎಂದೂ ತಿಳಿಸಿದ್ದಾರೆ.

‌‌ಹೋಟೆಲ್, ಬಾರ್, ಪಬ್​ಗಳಲ್ಲಿ ಪಾರ್ಟಿ ಮಾಡಬಹುದು. ಆದರೆ, ಶೇಕಡಾ 50ರಷ್ಟು ಸಾಮರ್ಥ್ಯವನ್ನು ಮೀರುವಂತಿಲ್ಲ ಎಂದಿರುವ ಅವರು ಕೊವಿಡ್​ ಮಾರ್ಗಸೂಚಿ ಪಾಲಿಸಬೇಕು ಎಂದಿದ್ದಾರೆ. ಈ ಕುರಿತು ಅಧಿಕೃತ ಆದೇಶ ಹೊರಡಿಸುವುದಾಗಿ ಮಾಹಿತಿ ನೀಡಿದ್ದಾರೆ.

‘ಹೊಸ ವರ್ಷಾಚರಣೆ ನಮ್ಮ ಸಂಸ್ಕೃತಿ ಅಲ್ಲ; ಡಿ. 31-ಜ.1ರಂದು ಜನಜಂಗುಳಿ ಸೇರೋದು ನಿಷೇಧಿಸ್ತೇವೆ’

Published On - 5:22 pm, Sat, 5 December 20