ಕೋರ್ಟ್​ನಿಂದ ಹಿಂದಿರುಗುವಾಗ ಅಡ್ಡಗಟ್ಟಿ ಮಾಲೂರು ರೌಡಿಯ ಕೊಲೆ

|

Updated on: Mar 18, 2021 | 11:02 PM

ಕೋಲಾರದ ಮಾಲೂರು ಮುಖ್ಯರಸ್ತೆ ಗಂಗಾಪುರ ಗೇಟ್​ ಬಳಿ ಬರ್ಬರ ಹತ್ಯೆ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಅರಳೇರಿ ಗ್ರಾಮದ ಗಿರೀಶ್​ (30) ಕೊಲೆಯಾದ ವ್ಯಕ್ತಿ.

ಕೋರ್ಟ್​ನಿಂದ ಹಿಂದಿರುಗುವಾಗ ಅಡ್ಡಗಟ್ಟಿ ಮಾಲೂರು ರೌಡಿಯ ಕೊಲೆ
ಕೊಲೆಯಾದ ರೌಡಿಶೀಟರ್ ಗಿರೀಶ್
Follow us on

ಕೋಲಾರ: ಹಳೇ ದ್ವೇಷದ ಹಿನ್ನೆಲೆ ಹಾಡಹಗಲೇ ಯುವಕನನ್ನು ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ ಮಾಲೂರು ಮುಖ್ಯರಸ್ತೆ ಗಂಗಾಪುರ ಗೇಟ್​ ಬಳಿ ಬರ್ಬರ ಹತ್ಯೆ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಅರಳೇರಿ ಗ್ರಾಮದ ಗಿರೀಶ್​ (30) ಕೊಲೆಯಾದ ವ್ಯಕ್ತಿ.

ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್​ ಆಗಿದ್ದ ಗಿರೀಶ್​ ಗುರುವಾರ (ಮಾರ್ಚ್ 18) ಸಹ ಕೋಲಾರದ ನ್ಯಾಯಾಲಯಕ್ಕೆ ಹಾಜರಾಗಿ ಮಾಲೂರಿಗೆ ವಾಪಸ್ಸಾಗುವ ವೇಳೆ ಕಾರ್​ನಲ್ಲಿ ಬಂದು ಅಡ್ಡಗಟ್ಟಿದ ಯುವಕರ ತಂಡ ಕಣ್ಣಿಗೆ ಕಾರದ ಪುಡಿ ಎರಚಿ, ಮಚ್ಚು ಹಾಗೂ ಲಾಂಗ್​ಗಳಿಂದ ಹಲ್ಲೆಮಾಡಿದೆ. ಮುಖ ಗುರುತೇ ಸಿಗದ ಹಾಗೆ ಹಲ್ಲೆ ಮಾಡಿರುವ ದುಷ್ಕರ್ಮಿಗಳ ತಂಡ ಗಿರೀಶ್​ ನೆಲಕ್ಕೆ ಬೀಳುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಲೂರು ಪೊಲೀಸರು ಅರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನು ಹಾಡಹಗಲೇ ನೆತ್ತರು ಹರಿದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕೋಲಾರ ಎಸ್ಪಿ ಕಾರ್ತಿಕ್​ ರೆಡ್ಡಿ, ಹೆಚ್ಚುವರಿ ಎಸ್ಪಿ ಜಾಹ್ನವಿ ಸೇರಿದಂತೆ ಬರಳಚ್ಚು ತಜ್ನರು, ಶ್ವಾನದಳ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಹಳೇ ದ್ವೇಷದ ಹಿನ್ನೆಲೆ ಈ ಘಟನೆ ನಡೆದಿರಬಹುದೆಂಬ ಅನುಮಾನದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿಗೆ 8 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ

Published On - 11:00 pm, Thu, 18 March 21