ಸಾಲದ ಶೂಲಕ್ಕೆ ಒಂದು ಕುಟುಂಬವೇ ಬಲಿ.. ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

ಅವರಿಗೆ ಹತ್ತಾರು ಎಕರೆ ಜಮೀನಿದೆ. ಅದ್ರೂ ವರ್ಷದಿಂದ ವರ್ಷಕ್ಕೆ ಸಾಲದ ಕಂತೆ ಏರುತ್ತಲೇ ಇತ್ತು. ಇಡೀ ಕುಟುಂಬ ಸಾಲಕ್ಕೆ ಬೇಸತ್ತು ಹೋಗಿತ್ತು. ಕೊನೆಗೆ ಆ ರೈತ ಮಹಿಳೆ ತೆಗೆದುಕೊಂಡ ನಿರ್ಧಾರ ಮಾತ್ರ ಹೃದಯ ವಿದ್ರಾವಕ.

ಸಾಲದ ಶೂಲಕ್ಕೆ ಒಂದು ಕುಟುಂಬವೇ ಬಲಿ.. ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Mar 19, 2021 | 7:37 AM

ಬಳ್ಳಾರಿ: ಅಮ್ಮನ ಜೊತೆ ಮನೆಯಲ್ಲಿ ಕುಣಿದಾಡುತ್ತಾ.. ನಲಿದಾಡುತ್ತಾ.. ಖುಷಿ ಖುಷಿಯಾಗಿರಬೇಕಾದ ಅಮ್ಮ-ಮಕ್ಕಳು ಸಾಲದ ಶೂಲಕ್ಕೆ ತಮ್ಮ ಜೀವವನ್ನೇ ಬಿಟ್ಟಿದ್ದಾರೆ. ಈ ಘಟನೆಯನ್ನು ನೆನಪಿಸಿಕೊಂಡ್ರೆ ಕಣ್ಣಲ್ಲಿ ನೀರು ಬರುತ್ತೆ. ವಿಧಿಯಾಟ ತುಂಬ ಘೋರ ಅನಿಸುತ್ತೆ.. ಇಂತಹ ಹೃದಯವಿದ್ರವಾಕ ಘಟನೆ ಕಂಡು ಬಂದಿದ್ದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾಲಿಗನೂರು ಗ್ರಾಮದಲ್ಲಿ.

ಈ ಗ್ರಾಮದ ನಾಗರತ್ನ ಎಂಬುವರು ತನ್ನಿಬ್ಬರ ಮಕ್ಕಳೊಂದಿಗೆ ಹೊಲದಲ್ಲಿದ್ದ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗರತ್ನ ಜೊತೆ 12 ವರ್ಷದ ಶ್ರುತಿ ಮತ್ತು 7 ವರ್ಷದ ಗಿರಿಜಾ ಸಾವಿನ ಮನೆ ಸೇರಿದ್ದಾರೆ. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ ಆದರೆ ಖಾಸಗಿ ಬ್ಯಾಂಕಿನಲ್ಲಿ ಅಂದಾಜು 5.60 ಲಕ್ಷ ರೂ, ಹಾಗೂ ಲೇವಾದೇವಿಗಾರ ಬಳಿ 15 ಲಕ್ಷ ರೂ. ಸಾಲ ಪಡೆದಿದ್ರು ಎನ್ನಲಾಗುತ್ತಿದೆ. ಸಾಲಗಾರರ ಕಾಟಕ್ಕೆ ಬೇಸತ್ತು ನಾಗರತ್ನ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಿನ್ನೆ ಬೆಳಗ್ಗೆ ನಾಗರತ್ನಮ್ಮ ಇಬ್ಬರು ಮಕ್ಕಳೊಂದಿಗೆ ತಮ್ಮ ಜಮೀನಿಗೆ ತೆರಳಿದ್ದಾರೆ. ಈ ವೇಳೆ ಇಬ್ಬರು ಮಕ್ಕಳನ್ನ ಕೃಷಿ ಹೊಂಡಕ್ಕೆ ತಳ್ಳಿ, ತಾನು ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಾಹ್ನ ಕಳೆದ್ರೂ ಪತ್ನಿ ಹಾಗೂ ಇಬ್ಬರು ಮಕ್ಕಳು ಮನೆಗೆ ವಾಪಸ್ ಬಾರದ ಕಾರಣ ಪತಿ ವೀರೇಶ್ ಗೌಡ ಜಮೀನಿಗೆ ತೆರಳಿ ಹುಡುಕಿದ್ದಾನೆ. ನಂತರ ಕೃಷಿ ಹೊಂಡದಲ್ಲಿ ಬಿದ್ದಿರುವುದು ಕಂಡಿದೆ. ತಕ್ಷಣ ಅಕ್ಕ ಪಕ್ಕದವರಿಗೆ ಈ ವಿಷಯ ಮುಟ್ಟಿಸುತ್ತಾನೆ. ನಾಗರತ್ನರ ಒಂದು ತಪ್ಪು ನಿರ್ಧಾರದಿಂದ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಸಿರುಗುಪ್ಪ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಅದೇ ಏನೇ ಇರಲೀ ಸಾಲವೆಂಬ ಶೂಲ ಇಡೀ ಕುಟುಂಬವನ್ನ ಬಲಿ ಪಡೆದಿರುವುದು ದುರಂತವೇ ಸರಿ.

ಇದೇ ರೀತಿ ನಡೆದಿತ್ತು ಮತ್ತೊಂದು ಘಟನೆ ಇನ್ನು ಬಳ್ಳಾರಿಯಲ್ಲೇ ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು. ಸಲಕ್ಕೆ ಹೆದರಿ ಪೋಷಕರಿಬ್ಬರು ತನ್ನ ಇಬ್ಬರು ಮಕ್ಕಳನ್ನ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆಗೆ ಬಿಸಾಕಿದ್ದರು. ಖುಷಿ(3) ಮತ್ತು ಚಿರು(1) ಮೃತ ಮಕ್ಕಳು.

ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಚಿರಂಜೀವಿ ಹಾಗೂ ಆತನ ಪತ್ನಿ ನಂದಿನಿಯಿಂದ ಈ ಕೃತ್ಯ ನಡೆದಿತ್ತು. ಸಾಲ ಮಾಡಿಕೊಂಡಿದ್ದ ಚಿರಂಜೀವಿ ಕಳೆದ ಐದು ತಿಂಗಳಿಂದ ಚಂದ್ರಶೇಖರಪುರದಲ್ಲಿರುವ ಪತ್ನಿ ಮನೆಯಲ್ಲಿ ವಾಸವಾಗಿದ್ದನು. ಸಾಲಬಾಧೆ ತಾಳಲಾಗದೆ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ರು.

ಆರಂಭದಲ್ಲಿ ಮಕ್ಕಳಾದ ಖುಷಿ, ಚಿರು ಇಬ್ಬರನ್ನು ಕೆರೆಗೆ ದೂಡಿದ್ದಾರೆ. ಬಳಿಕ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ನೀರಿಗೆ ಬೀಳಲು ಹೆದರಿ ಹಿಂದೇಟು ಹಾಕಿದ್ದಾರೆ. ಪತ್ನಿಯನ್ನ ಕೆರೆ ಬಳಿ ಬಿಟ್ಟು ಪತಿ ಚಿರಂಜೀವಿ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ: ಸಾಲಗಾರನಿಗೆ ಕಿರುಕುಳ, ಹಿಂಸಾಚಾರ, ಬೆದರಿಕೆ ಹಾಕುವಂತಿಲ್ಲ -ಕರ್ನಾಟಕ ಲೇವಾದೇವಿದಾರರ ವಿಧೇಯಕ ಅಂಗೀಕಾರ

Published On - 7:31 am, Fri, 19 March 21