ಬೆಂಗಳೂರು: ಕೊರೊನಾ ಇಂಚಿಂಚಾಗಿ ದೇಶದೆಲ್ಲೆಡೆ ಹರಡುತ್ತಿದೆ. ಈ ಸಾಂಕ್ರಾಮಿಕ ರೋಗಕ್ಕೆ ಪ್ರತಿಯೊಬ್ಬ ಪ್ರಜೆಯೂ ಬೆಚ್ಚಿಬಿದ್ದಿದ್ದು ಸೋಂಕು ಹರಡದಂತೆ ದೇಶಾದ್ಯಂತ ಲಾಕ್ಡೌನ್ ಕೂಡ ವಿಸ್ತರಿಸಲಾಗಿದೆ. ಆದರೆ ಲಾಕ್ಡೌನ್ ಪರಿಣಾಮ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಆಗಿದೆ.
ಲಾಕ್ಡೌನ್ ಆದ ದಿನದಿಂದ ಏಪ್ರಿಲ್ 20ರವರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 81,623 ಕೋಟಿ ರೂಪಾಯಿ ನಷ್ಟವಾಗಿದೆ. ಅದರಲ್ಲಿ BMTC ಸಂಸ್ಥೆಗೆ 149 ಕೋಟಿ ಲಾಸ್ ಆಗಿದ್ದರೆ, KSRTC ಸಂಸ್ಥೆಗೆ 31,489 ಕೋಟಿ ರೂಪಾಯಿ ದಿವಾಳಿಯಾಗಿದೆ.
NWKSRTC ಸಂಸ್ಥೆಗೆ 172 ಕೋಟಿ ರೂ, NEKSRTC ಸಂಸ್ಥೆಗೆ 180 ಕೋಟಿ ರೂಪಾಯಿ ನಷ್ಟವಾಗಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ ಬಸ್ ಸಂಚಾರ ಸ್ಥಗಿತದಿಂದ 81,623 ಕೋಟಿ ರೂ. ನಷ್ಟವಾಗಿದೆ. ಈ ಬಗ್ಗೆ ಸಾರಿಗೆ ನಿಗಮಗಳು ಅಧಿಕೃತ ಮಾಹಿತಿ ನೀಡಿವೆ.
Published On - 1:38 pm, Wed, 22 April 20