ಜಮೀನಿನ ಮತ್ತೊಂದು ಕಡೆ ಅಂತ್ಯಕ್ರಿಯೆ ಮಾಡಿ ಎಂದಿದ್ದಕ್ಕೆ ಹೀಗಾ ಮಾಡೋದು!
ಬೆಳಗಾವಿ: ಲಾಕ್ಡೌನ್ ನಡುವೆಯೂ ಅಂತ್ಯಸಂಸ್ಕಾರ ಮಾಡುವ ವಿಚಾರಕ್ಕೆ ವ್ಯಕ್ತಿಯ ಮನೆ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ಕವಳೆವಾಡಿ ಗ್ರಾಮದಲ್ಲಿ ನಡೆದಿದೆ. ಸ್ಮಶಾನ ಭೂಮಿ ದಾನವಾಗಿ ನೀಡಿದ್ದ ಮನೋಹರ ಮೋರೆ ಎಂಬುವರ ಮನೆ ಮೇಲೆ ಕಿಡಿಗೇಡಿಗಳು ಕಲ್ಲುತೂರಿದ್ದಾರೆ. ತಮ್ಮ ಜಮೀನಿನ ಇನ್ನೊಂದು ಭಾಗದಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಮನೋಹರ ಹೇಳಿದ್ದ. ಹಾಗಾಗಿ ಜಮೀನು ಮಾಲೀಕರೊಂದಿಗೆ ಕಿರಿಕ್ ಮಾಡಿಕೊಂಡು ಉದ್ಧಟತನ ಮೆರೆದಿದ್ದಾರೆ. ಅಂತ್ಯಸಂಸ್ಕಾರ ನಡೆಸಲು ಬಂದವರು ಮನೋಹರ ಮನೆಯ ಕಿಟಕಿ ಗಾಜು ಪುಡಿ ಪುಡಿ ಮಾಡಿ, ಕಾರಿನ ಗ್ಲಾಸು ಒಡೆದು ಹಾಕಿದ್ದಾರೆ. […]
ಬೆಳಗಾವಿ: ಲಾಕ್ಡೌನ್ ನಡುವೆಯೂ ಅಂತ್ಯಸಂಸ್ಕಾರ ಮಾಡುವ ವಿಚಾರಕ್ಕೆ ವ್ಯಕ್ತಿಯ ಮನೆ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ಕವಳೆವಾಡಿ ಗ್ರಾಮದಲ್ಲಿ ನಡೆದಿದೆ. ಸ್ಮಶಾನ ಭೂಮಿ ದಾನವಾಗಿ ನೀಡಿದ್ದ ಮನೋಹರ ಮೋರೆ ಎಂಬುವರ ಮನೆ ಮೇಲೆ ಕಿಡಿಗೇಡಿಗಳು ಕಲ್ಲುತೂರಿದ್ದಾರೆ.
ತಮ್ಮ ಜಮೀನಿನ ಇನ್ನೊಂದು ಭಾಗದಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಮನೋಹರ ಹೇಳಿದ್ದ. ಹಾಗಾಗಿ ಜಮೀನು ಮಾಲೀಕರೊಂದಿಗೆ ಕಿರಿಕ್ ಮಾಡಿಕೊಂಡು ಉದ್ಧಟತನ ಮೆರೆದಿದ್ದಾರೆ. ಅಂತ್ಯಸಂಸ್ಕಾರ ನಡೆಸಲು ಬಂದವರು ಮನೋಹರ ಮನೆಯ ಕಿಟಕಿ ಗಾಜು ಪುಡಿ ಪುಡಿ ಮಾಡಿ, ಕಾರಿನ ಗ್ಲಾಸು ಒಡೆದು ಹಾಕಿದ್ದಾರೆ. ನಿನ್ನೆ ಸಂಜೆ ಘಟನೆ ನಡೆದ್ರೂ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.