ಲಾಕ್​ಡೌನ್​ನಿಂದ ರಾಜ್ಯ ಸಾರಿಗೆ ನಿಗಮಕ್ಕೆ ಎಷ್ಟು ಕೋಟಿ ಲಾಸ್ ಗೊತ್ತಾ?

ಲಾಕ್​ಡೌನ್​ನಿಂದ ರಾಜ್ಯ ಸಾರಿಗೆ ನಿಗಮಕ್ಕೆ ಎಷ್ಟು ಕೋಟಿ ಲಾಸ್ ಗೊತ್ತಾ?
ಕೆಎಸ್​ಆರ್​ಟಿಸಿ ಬಸ್​

ಬೆಂಗಳೂರು: ಕೊರೊನಾ ಇಂಚಿಂಚಾಗಿ ದೇಶದೆಲ್ಲೆಡೆ ಹರಡುತ್ತಿದೆ. ಈ ಸಾಂಕ್ರಾಮಿಕ ರೋಗಕ್ಕೆ ಪ್ರತಿಯೊಬ್ಬ ಪ್ರಜೆಯೂ ಬೆಚ್ಚಿಬಿದ್ದಿದ್ದು ಸೋಂಕು ಹರಡದಂತೆ ದೇಶಾದ್ಯಂತ ಲಾಕ್​ಡೌನ್ ಕೂಡ ವಿಸ್ತರಿಸಲಾಗಿದೆ. ಆದರೆ ಲಾಕ್​ಡೌನ್ ಪರಿಣಾಮ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಆಗಿದೆ.

ಲಾಕ್​ಡೌನ್ ಆದ ದಿನದಿಂದ ಏಪ್ರಿಲ್ 20ರವರೆಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 81,623 ಕೋಟಿ ರೂಪಾಯಿ ನಷ್ಟವಾಗಿದೆ. ಅದರಲ್ಲಿ BMTC ಸಂಸ್ಥೆಗೆ 149 ಕೋಟಿ ಲಾಸ್ ಆಗಿದ್ದರೆ, KSRTC ಸಂಸ್ಥೆಗೆ 31,489 ಕೋಟಿ ರೂಪಾಯಿ ದಿವಾಳಿಯಾಗಿದೆ.

NWKSRTC ಸಂಸ್ಥೆಗೆ 172 ಕೋಟಿ ರೂ, NEKSRTC ಸಂಸ್ಥೆಗೆ 180 ಕೋಟಿ ರೂಪಾಯಿ ನಷ್ಟವಾಗಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ ಬಸ್ ಸಂಚಾರ ಸ್ಥಗಿತದಿಂದ 81,623 ಕೋಟಿ ರೂ. ನಷ್ಟವಾಗಿದೆ. ಈ ಬಗ್ಗೆ ಸಾರಿಗೆ ನಿಗಮಗಳು ಅಧಿಕೃತ ಮಾಹಿತಿ ನೀಡಿವೆ.

https://www.facebook.com/Tv9Kannada/videos/682652249214938/

Published On - 1:38 pm, Wed, 22 April 20

Click on your DTH Provider to Add TV9 Kannada