ತಾಯಿ ಮಕ್ಕಳ ದುಃಸ್ಥಿತಿ, ಮಾನವೀಯತೆ ತೋರಿದ ಗದಗ ಪೊಲೀಸರು

ಗದಗ: ಮಾಹಾಮಾರಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಹಿನ್ನೆಲೆ ಗದಗ ನಗರದಲ್ಲಿ ತಾಯಿ ಮಕ್ಕಳು ಅನ್ನಾಹಾರವಿಲ್ಲದೆ ಪರದಾಡುತ್ತಿದ್ದ ಮನಕಲಕುವ ಘಟನೆ ನಡೆದಿದೆ. ಆಶ್ರಯ, ಅನ್ನ, ನೀರಲ್ಲದೇ ತಾಯಿ, ಮಕ್ಕಳು ಬೀದಿಯಲ್ಲಿ ಪರದಾಡುತ್ತಿದ್ದರು. ಗದಗ ನಗರದ ಮುಳಗುಂದ ನಾಕಾ ಬೀದಿಯಲ್ಲೇ ಮಕ್ಕಳೊಂದಿಗೆ ಈ ಮಹಿಳೆ ನಾಲ್ಕು ದಿನ‌ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಮಾನವೀಯತೆ ಮೆರೆದ ಗದಗ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಪೊಲೀಸರು ಬೀದಿಯಲ್ಲಿ ಪರದಾಡುತ್ತಿರೋ ತಾಯಿ, ಮಕ್ಕಳಿಗೆ ಆಶ್ರಯ ಕಲ್ಪಿಸಿದ್ದಾರೆ. ಊಟ, […]

ತಾಯಿ ಮಕ್ಕಳ ದುಃಸ್ಥಿತಿ, ಮಾನವೀಯತೆ ತೋರಿದ ಗದಗ ಪೊಲೀಸರು
Follow us
ಸಾಧು ಶ್ರೀನಾಥ್​
|

Updated on:Apr 22, 2020 | 11:19 AM

ಗದಗ: ಮಾಹಾಮಾರಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಹಿನ್ನೆಲೆ ಗದಗ ನಗರದಲ್ಲಿ ತಾಯಿ ಮಕ್ಕಳು ಅನ್ನಾಹಾರವಿಲ್ಲದೆ ಪರದಾಡುತ್ತಿದ್ದ ಮನಕಲಕುವ ಘಟನೆ ನಡೆದಿದೆ. ಆಶ್ರಯ, ಅನ್ನ, ನೀರಲ್ಲದೇ ತಾಯಿ, ಮಕ್ಕಳು ಬೀದಿಯಲ್ಲಿ ಪರದಾಡುತ್ತಿದ್ದರು. ಗದಗ ನಗರದ ಮುಳಗುಂದ ನಾಕಾ ಬೀದಿಯಲ್ಲೇ ಮಕ್ಕಳೊಂದಿಗೆ ಈ ಮಹಿಳೆ ನಾಲ್ಕು ದಿನ‌ ಕಳೆದಿದ್ದಾರೆ.

ಈ ಸಂದರ್ಭದಲ್ಲಿ ಮಾನವೀಯತೆ ಮೆರೆದ ಗದಗ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಪೊಲೀಸರು ಬೀದಿಯಲ್ಲಿ ಪರದಾಡುತ್ತಿರೋ ತಾಯಿ, ಮಕ್ಕಳಿಗೆ ಆಶ್ರಯ ಕಲ್ಪಿಸಿದ್ದಾರೆ. ಊಟ, ನೀರು, ಮಾಸ್ಕ್, ಹಣ್ಣು ನೀಡಿ ಖಾಕಿ‌ ಪಡೆ ಮಾನವೀಯತೆ ತೋರಿದೆ. ಬಳಿಕ ಆ ನಾಲ್ವರಿಗೂ ವಾಲ್ಮೀಕಿ ಭವನದಲ್ಲಿ ಆಶ್ರಯಕ್ಕೆ ವ್ಯವಸ್ಥೆ ಮಾಡಿ, ಪೊಲೀಸ್ ವಾಹನದಲ್ಲಿ ಭವನಕ್ಕೆ ತಲುಪಿಸಿದ್ದಾರೆ.

ಗದಗ ತಾಲೂಕಿನ ಹುಲಕೋಟಿ ಗ್ರಾಮದ ಪತಿ ಫಲೀರಪ್ಪ ಮನೆಯಿಂದ ಹೊರ ಹಾಕಿದ್ದಕ್ಕೆ ಮಹಿಳೆ ಮಕ್ಕಳೊಂದಿಗೆ ಬೀದಿಯಲ್ಲಿ ಬದುಕು ಸಾಗಿಸುವಂತಾಗಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ‌ ಮೂಲದ ಮಹಿಳೆ ಅನಂತಮ್ಮ ಈ ದುರವಸ್ಥೆ ಎದುರಿಸುತ್ತಿರುವ ಮಹಿಳೆ.

Published On - 11:17 am, Wed, 22 April 20