ಬೆಂಗಳೂರಿನಲ್ಲಿ ರಸ್ತೆಗಿಳಿಯೋಕು ಮುನ್ನ ಎಚ್ಚರ ಎಚ್ಚರ..!

ಬೆಂಗಳೂರಿನಲ್ಲಿ ರಸ್ತೆಗಿಳಿಯೋಕು ಮುನ್ನ ಎಚ್ಚರ ಎಚ್ಚರ..!

ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಭಾರತ ಲಾಕ್​ಡೌನ್ ಮಾಡಲಾಗಿದೆ. ಈ ವೇಳೆ ಕೆಲ ಅನುಮತಿ ಇರುವ ವಾಹನಗಳನ್ನು ಹೊರತುಪಡಿಸಿ ಯಾವ ವಾಹನಗಳು ಕೂಡ ಓಡಾಡುವ ಹಾಗಿಲ್ಲ. ಆದರೆ ಲಾಕ್​ಡೌನ್ ನಿಯಮ ಉಲ್ಲಂಘಿ ರಸ್ತೆಗಳಿಯುವವರಿಗೆ ಈಗ ಬಿಗ್ ಶಾಕ್ ಕಾದಿದೆ.

ಹೆಲ್ಮೆಟ್ ಧರಿಸದೆ ಸಂಚರಿಸುವ ಸವಾರರಿಗೆ ಭಾರಿ ದಂಡ ವಿಧಿಸಲು ಪೊಲೀಸರು ಮುಂದಾಗಿದ್ದಾರೆ. ಟ್ರಿನಿಟಿ ಸರ್ಕಲ್​ ಬಳಿಯ ಚೆಕ್​ಪೋಸ್ಟ್​ನಲ್ಲಿ ತಪಾಸಣೆ ಮಾಡಲಾಗುತ್ತಿದ್ದು, ಸವಾರ ಹಾಗೂ ಚಾಲಕರ ಫೋಟೋ ಪಡೆದು ನೋಟಿಸ್ ನೀಡಿ ಭಾರಿ ದಂಡ ವಿಧಿಸಲು ಮುಂದಾಗಿದ್ದಾರೆ. ಮಾಸ್ಕ್ ಹಾಕದೆ ಸಂಚರಿಸುವ ಕಾರು ಚಾಲಕರಿಗೂ ಪೈನ್ ಬೀಳಲಿದೆ.

ಲಾಕ್​​ಡೌನ್ ನಡುವೆ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸಿದ ಬಹುತೇಕ ವಾಹನಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. ಇದುವರೆಗೂ 38,974 ವಾಹನಗಳು ಜಪ್ತಿಯಾಗಿವೆ. ನಗರದಲ್ಲಿ 36,375 ದ್ವಿಚಕ್ರವಾಹನಗಳು, 1602 ಕಾರುಗಳು ಹಾಗೂ ಆಟೋ ಇನ್ನಿತರ ವಾಹನಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

ಪ್ರತಿಯೊಂದು ವಾಹನಗಳ ಪಾಸ್, ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ತುರ್ತು ಸೇವೆ ನೆಪದಲ್ಲಿ ಪಾಸ್​​​​​​ ಪಡೆದು ಬೇಕಾಬಿಟ್ಟಿ ಸಂಚಾರ ಮಾಡುತ್ತಿದ್ದು, ಪರಿಶೀಲನೆ ವೇಳೆ ಪಾಸ್ ದುರ್ಬಳಕೆ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಖಾಕಿ ಕೆಲವೆಡೆ ಪಾಸ್ ದುರ್ಬಳಕೆ ಮಾಡಿದ ವಾಹನಗಳನ್ನ ಕಂಪ್ಲೀಟ್ ಸೀಜ್ ಮಾಡ್ತಿದೆ. https://www.facebook.com/Tv9Kannada/videos/239944930701434/

Published On - 9:39 am, Wed, 22 April 20

Click on your DTH Provider to Add TV9 Kannada