AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಗಳಿಗೆ ಬಾಕಿ ಇರುವ ಆರ್​ಟಿಇ ಮೊತ್ತ ಪಾವತಿಸಿ; ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ

ಒಂದು ಕಡೆ ಕೋವಿಡ್ ನಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಮತ್ತೆ ಸರ್ಕಾರ ಕೂಡ ಖಾಸಗಿ ಶಾಲೆಗಳಿಗೆ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಹೀಗಾಗಿ ಬಿಡುಗಡೆ ಮಾಡಿರುವ ಆರ್​ಟಿಇ ಹಣ ಶಾಲೆಗಳಿಗೆ ಸರಿಯಾಗಿ ತಲುಪುವಂತೆ ಕ್ರಮ ವಹಿಸಿ. ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡುವಂತೆ ಆಗ್ರಹಿಸಿ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ.

ಶಾಲೆಗಳಿಗೆ ಬಾಕಿ ಇರುವ ಆರ್​ಟಿಇ ಮೊತ್ತ ಪಾವತಿಸಿ; ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ
ಸಂಗ್ರಹ ಚಿತ್ರ
guruganesh bhat
|

Updated on: May 24, 2021 | 9:31 PM

Share

ಬೆಂಗಳೂರು: ಶಾಲೆಗಳಿಗೆ ಬಾಕಿ ಆರ್‌ಟಿಇ ಹಣ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

2020-21ನೇ ಶೈಕ್ಷಣಿಕ ವರ್ಷದ ಆರ್‌ಟಿಇ ಹಣವನ್ನು ಈವರೆಗೂ ಮರು ಪಾವತಿಸಿಲ್ಲ. ಶೇ.15ರಷ್ಟು ಶಾಲೆಗಳಿಗೆ ಮಾತ್ರ ಹಣ ಬಿಡುಗಡೆ ‌ಮಾಡಲಾಗಿದೆ. ಸರ್ಕಾರ ಆರ್‌ಟಿಇ ಹಣ ಬಿಡುಗಡೆ ಮಾಡಿದರೂ ಮರು ಪಾವತಿ ಮಾಡಿಲ್ಲ. ಬಿಇಒ, ಡಿಡಿಪಿಐ ಅಧಿಕಾರಿಗಳು ಹಣ ವಸೂಲಿಗೆ ಇಳಿದಿದ್ದಾರೆ. ಲಂಚ ನೀಡಿದ್ರೆ ಮಾತ್ರ ಆರ್‌ಟಿಇ ಹಣ ಬಿಡುಗಡೆ ಮಾಡಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಪತ್ರದಲ್ಲಿ ಆಗ್ರಹ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರೆ ಬರೆದಿದ್ದಾರೆ.

ಒಂದು ಕಡೆ ಕೋವಿಡ್ ನಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಮತ್ತೆ ಸರ್ಕಾರ ಕೂಡ ಖಾಸಗಿ ಶಾಲೆಗಳಿಗೆ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಹೀಗಾಗಿ ಬಿಡುಗಡೆ ಮಾಡಿರುವ ಆರ್​ಟಿಇ ಹಣ ಶಾಲೆಗಳಿಗೆ ಸರಿಯಾಗಿ ತಲುಪುವಂತೆ ಕ್ರಮ ವಹಿಸಿ. ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡುವಂತೆ ಆಗ್ರಹಿಸಿ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ನೀವು ಕೊವಿಡ್​ನಿಂದ ಈಗಷ್ಟೇ ಚೇತರಿಸಿಕೊಂಡಿದ್ದೀರಾ? ದೀರ್ಘಕಾಲ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಭಾರತದ ಟಾಪ್ ವೈದ್ಯರು

ಕೊವಿಡ್ ವಾರಿಯರ್ಸ್ ವಿರುದ್ಧ ಹಲ್ಲೆ ಮಾಡಿದರೆ ಕ್ರಮ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

(RUPSA President Lokesh Talikatte urges release THE money to all private schools)