ಫ್ರೀಡಂಪಾರ್ಕ್‌ನಲ್ಲಿಂದು ರುಪ್ಸಾ ಪ್ರೊಟೆಸ್ಟ್, 10 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ

ಕೊರೊನಾದಿಂದ ಇಲ್ಲಿಯವರೆಗೆ ಬಂದ್ ಆಗಿದ್ದ ಶಾಲೆಗಳು ಇತ್ತೀಚಿಗಷ್ಟೆ ಆರಂಭವಾಗಿವೆ. ಆದರೆ ಈ ಹೊತ್ತಿನಲ್ಲಿ ಖಾಸಗಿ ಶಾಲೆಗಳ ರುಪ್ಸಾ ಒಕ್ಕೂಟ ಮತ್ತೆ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದೆ. ಈ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೂಪ್ಸಾ ರೆಡಿಯಾಗಿದೆ.

ಫ್ರೀಡಂಪಾರ್ಕ್‌ನಲ್ಲಿಂದು ರುಪ್ಸಾ ಪ್ರೊಟೆಸ್ಟ್, 10 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ
ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್​ ತಾಳಿಕೋಟೆ
Follow us
ಆಯೇಷಾ ಬಾನು
|

Updated on: Jan 06, 2021 | 7:25 AM

ಬೆಂಗಳೂರು: ಬರೋಬ್ಬರಿ 9 ತಿಂಗಳು ಮುಚ್ಚಿದ ಶಾಲೆ, ಕಾಲೇಜು ಬಾಗಿಲು ಈಗ ಓಪನ್ ಆಗಿವೆ. ಮಕ್ಕಳು ಶಾಲೆಗಳ ಕಡೆ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದಾರೆ. ಕೊರೊನಾ ಭಯದಿಂದ ಆಚೆಗೆ ಬಂದು ಪೋಷಕರು ಮಕ್ಕಳನ್ನ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಆದ್ರೆ ಶಾಲೆಗಳ ಬಾಗಿಲಿಗೆ ಹಾಕಿದ್ದ ಬೀಗ ತೆೆಗೆದ ಒಂದು ವಾರಕ್ಕೆ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ.

ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿಂದು ರುಪ್ಸಾ ಪ್ರೊಟೆಸ್ಟ್ ಹೌದು, ರಾಜ್ಯದಲ್ಲಿ 12,800 ಖಾಸಗಿ ಶಾಲೆಗಳನ್ನು ಹೊಂದಿರುವ ರುಪ್ಸಾ ಒಕ್ಕೂಟ ಸರ್ಕಾರದ ವಿರುದ್ಧ ಇಂದು ಮತ್ತೊಮ್ಮೆ ಹೋರಾಟಕ್ಕಿಳಿಯಲು ಸಜ್ಜಾಗುತ್ತಿದೆ. ಈ‌ ಹಿಂದೆ ಖಾಸಗಿ ಶಾಲೆಗಳು ಆನ್​ಲೈನ್ ಕ್ಲಾಸ್ ಬಂದ್ ಮಾಡಿದ್ರು. ಆದರೆ ಪ್ರತಿಭಟನೆಗಿಳಿಯುವ ಮುನ್ನ ಶಿಕ್ಷಣ ಸಚಿವರು ರುಪ್ಸಾ ಪದಾಧಿಕಾರಿಗಳನ್ನು ಕರೆದು ಬೇಡಿಕೆಗಳು ಈಡೇರಿಸಲಾಗವುದು ಎಂದು ಭರವಸೆ ನೀಡಿದ್ದರು. ಆದರೆ ಇದರಲ್ಲಿ ಕೆಲ ಬೇಡಿಕೆ ಈಡೇರಿಸುವುದಾಗಿ ಸುಮ್ಮನಾಗಿಬಿಟ್ಟರು.

ಇದರಿಂದಾಗಿ ರೂಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಇಂದು 10 ಗಂಟೆಗೆ ಮೌರ್ಯ ಸರ್ಕಲ್ ‌ನಿಂದ ಪ್ರೀಡಂಪಾರ್ಕ್ ವರೆಗೆ ಬೃಹತ್ ಱಲಿ ಮಾಡಿ, ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದಾರೆ. ಈ ಹೋರಾಟದಲ್ಲಿ ರಾಜ್ಯದ 30 ಜಿಲ್ಲೆಗಳಿಂದ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು, 10 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರಂತೆ.

ರೂಪ್ಸಾ ಬೇಡಿಕೆ -ಸಂಕಷ್ಟದಲ್ಲಿರುವ ಶಾಲೆಗಳ ಶಿಕ್ಷಕರಿಗೆ ಪರಿಹಾರ ಘೋಷಣೆ ಮಾಡಬೇಕು. -ಕನಿಷ್ಠ 1 ಸಾವಿರ ಕೋಟಿ ಪ್ಯಾಕೇಜ್ ಘೋಷಣೆಗೆ ಒತ್ತಾಯ ಮಾಡಲಾಗಿದೆ. -ಸರ್ಕಾರ ಶಿಕ್ಷಕರಿಗೆ ಪ್ರತಿ ತಿಂಗಳು $10 ಸಾವಿರ ನೀಡಬೇಕು. -1985ರಿಂದ ಇರುವ ಶಾಲೆಗಳಿಗೆ ಅನುದಾನ ನೀಡಬೇಕು. -ಅನುದಾನರಹಿತ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. -ನ.10ರಂದು ಹೊರಡಿಸಿದ ಸುತ್ತೋಲೆ ಮರುಪರಿಶೀಲಿಸಬೇಕು. ಹಾಗೇ ಶಾಲೆಗಳ ಮಾನ್ಯತೆ ನವೀಕರಣ ಅದಾಲತ್ ರೂಪದಲ್ಲಿ ಆಗಬೇಕು. -ಗಡಿಭಾಗದ ಶಾಲೆಗಳನ್ನ ಮುಚ್ಚುವ ನಿರ್ಧಾರ ಹಿಂಪಡೆಯಬೇಕು. -2020-21ನೇ ಸಾಲಿನ RTE ಹಣ ಒಂದೇ ಕಂತಲ್ಲಿ ನೀಡಬೇಕು. -ಆರ್‌ಟಿಇ ಪುನರ್ ಅನುಷ್ಠಾನಕ್ಕೆ ತರಬೇಕೆಂದು ರೂಪ್ಸಾ ಒತ್ತಾಯಿಸಿದೆ.

ಶಾಲೆ ಪುನರಾರಂಭ ಮಾಡಿ ಒಂದು ವಾರವೂ ಕಳೆದಿಲ್ಲ. ಆಗಲೇ ಅನುದಾನ ರಹಿತ ಖಾಸಗಿ ಶಾಲೆಗಳು ಮತ್ತೆ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿಯುತ್ತಿವೆ. ಇದರಿಂದ ರಾಜ್ಯದ 40 ಲಕ್ಷ ವಿದ್ಯಾರ್ಥಿಗಳಿಗೆ ಮತ್ತೆ ಪ್ರತಿಭಟನೆಯ ಬಿಸಿ ತಟ್ಟಿಲಿದೆ. ಸರ್ಕಾರ ಖಾಸಗಿ ಶಾಲೆಗಳ ಸಮಸ್ಯೆ ಹೇಗೆ ಬಗೆಹರಿಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು