AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕರ ಒಂದು ವರ್ಷದ ವೇತನವನ್ನು ಶ್ರಮಿಕ ವರ್ಗಕ್ಕೆ ನೀಡಿ; ಸರ್ಕಾರಕ್ಕೆ ಸಾ.ರಾ.ಮಹೇಶ್ ಮನವಿ

ಶಾಸಕರ ಒಂದು ವರ್ಷದ ವೇತನ ಹಿಡಿದುಕೊಂಡು ಆ ಹಣವನ್ನು ಶ್ರಮಿಕ ವರ್ಗಕ್ಕೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಕೊವಿಡ್ ಟೆಸ್ಟಿಂಗ್ ಕಡಿಮೆ ಮಾಡಲಾಗಿದೆ. ಇದರಿಂದ ಪಾಸಿಟಿವ್ ಕೇಸ್ ಸಂಖ್ಯೆ ಕಡಿಮೆಯಾಗುತ್ತಿದೆ. ಕೊರೊನಾ ಇಳಿಕೆ ತೋರಿಸುವುದಕ್ಕೆ ಹೀಗೆ ಮಾಡಿದ್ದಾರೆ ಎಂದು ಮಾಜಿ ಸಚಿವ ಆರೋಪಿಸಿದ್ದಾರೆ.

ಶಾಸಕರ ಒಂದು ವರ್ಷದ ವೇತನವನ್ನು ಶ್ರಮಿಕ ವರ್ಗಕ್ಕೆ ನೀಡಿ; ಸರ್ಕಾರಕ್ಕೆ ಸಾ.ರಾ.ಮಹೇಶ್ ಮನವಿ
ಸಾ.ರಾ.ಮಹೇಶ್
sandhya thejappa
|

Updated on: May 16, 2021 | 1:20 PM

Share

ಮೈಸೂರು: ಲಾಕ್​ಡೌನ್​ ಹಿನ್ನೆಲೆ ಶ್ರಮಿಕ ವರ್ಗಕ್ಕೆ ಸಹಾಯ ಮಾಡಿ ಎಂದು ಸಾ.ರಾ.ಮಹೇಶ್ ಮನವಿ ಮಾಡಿದ್ದಾರೆ. ಶಾಸಕರ ಒಂದು ವರ್ಷದ ವೇತನ ಹಿಡಿದುಕೊಂಡು ಆ ಹಣವನ್ನು ಶ್ರಮಿಕ ವರ್ಗಕ್ಕೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಕೊವಿಡ್ ಟೆಸ್ಟಿಂಗ್ ಕಡಿಮೆ ಮಾಡಲಾಗಿದೆ. ಇದರಿಂದ ಪಾಸಿಟಿವ್ ಕೇಸ್ ಸಂಖ್ಯೆ ಕಡಿಮೆಯಾಗುತ್ತಿದೆ. ಕೊರೊನಾ ಇಳಿಕೆ ತೋರಿಸುವುದಕ್ಕೆ ಹೀಗೆ ಮಾಡಿದ್ದಾರೆ ಎಂದು ಮಾಜಿ ಸಚಿವ ಆರೋಪಿಸಿದ್ದಾರೆ.

ಆರೋಪ ಮಾಡಿದವರು ಕ್ಷಮೆಯಾಚಿಸಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್ ಮೈಸೂರು ಜಿಲ್ಲಾಧಿಕಾರಿಗೆ ಪ್ರಶ್ನೆಗಳ ಸುರಿಮಳೆ ಹಾಕಿದ್ದಾರೆ. ಕನ್ನಡಿಗ ದಲಿತ ಡಿಸಿಯನ್ನು ವರ್ಗಾವಣೆ ಮಾಡಿಸಿದ್ದು ಸುಳ್ಳಾ? ಕೇವಲ 29 ದಿನದಲ್ಲೇ ಡಿಸಿ ವರ್ಗಾವಣೆ ಮಾಡಿಸಿದ್ದು ಸುಳ್ಳಾ? ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ ತೀರ್ಪು ಬಂತು. ಈಗ ಅದರ ತೀರ್ಪು ಬರದಂತೆ ಮ್ಯಾನೇಜ್ ಮಾಡಿದ್ದು ಸುಳ್ಳಾ? ಸಿಎಟಿ ಮ್ಯಾನೇಜ್ ಮಾಡಿದ್ದು ಸುಳ್ಳಾ? ವಾಲ್ಮೀಕಿ ಜಯಂತಿಗೆ ಬರದೆ ಬಂಡೀಪುರಕ್ಕೆ ಹೋಗಿದ್ದು ಸುಳ್ಳಾ? ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಮಾತ್ರೆ ಕೊಡಲು ದುಡ್ಡಿಲ್ಲ. ಇಂಡೋರ್ ಜಿಮ್, ಈಜುಕೊಳ ನಿರ್ಮಿಸಿಕೊಂಡಿದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಜೊತೆಗೆ ಈಜುಕೊಳ ನಿರ್ಮಾಣಕ್ಕೆ ಅನುಮತಿ ಕೊಟ್ಟವರು ಯಾರು? ಇದಕ್ಕೆ ಎಲ್ಲಿಂದ ಹಣ ಬಂತು? ಅದು ಕಟ್ಟಿರುವುದು ಸುಳ್ಳಾ? ಪ್ರಧಾನಿ, ಮುಖ್ಯಮಂತ್ರಿ ಮನೆಯಲ್ಲಿ ಈಜುಕೊಳ ಇದೆಯಾ? ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ನಿವಾಸದಲ್ಲಿದೆಯಾ? ಕರ್ನಾಟಕ ರಾಜ್ಯದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳಾ? ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯ ಹೊತ್ತಿ ಉರಿದಿದ್ದು ಸುಳ್ಳಾ? ಈಜುಕೊಳದ 50 ಲಕ್ಷ ಹಣ ಕೊರೊನಾಗೆ ಬಳಸಬೇಕಾಗಿತ್ತು. ಹಾಗಾದರೆ ನಿಮ್ಮನ್ನು ಯಾರು ಕೇಳಬೇಕೆಂದು ನೇರವಾಘಿ ಮಹೇಶ್ ಪ್ರಶ್ನಿಸಿದ್ದಾರೆ.

ಮೈಸೂರು ಡಿಸಿ ವಿಚಾರವಾಗಿ ದಾಖಲೆ ಬಿಡುಗಡೆ ಮಾಡುವೆ ಕೆ.ಆರ್.ನಗರದಲ್ಲಿ ಕೊವಿಡ್ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಅಲ್ಲಿನ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಸ್ಟಿರಾಯಿಡ್ ನೀಡುತ್ತಿದ್ದಾರೆ. ಮೈಸೂರು ಡಿಸಿ ರೋಹಿಣಿಗೆ ಗೊತ್ತಿದ್ದರೂ ಏಕೆ ಕ್ರಮಕೈಗೊಂಡಿಲ್ಲ. ಕೆ.ಆರ್.ನಗರದಲ್ಲಿ ಸಾವು ನೋವಿಗೆ ಜವಾಬ್ದಾರರು ಯಾರು? ಇದರ ಬಗ್ಗೆ ಜಿಲ್ಲಾಡಳಿತಕ್ಕೆ ಕೇಳುವುದೇ ದೊಡ್ಡ ತಪ್ಪಾಗಿದೆ. ವಿರೋಧ ಪಕ್ಷದವರು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದರು.

ಇಲ್ಲಿ ಯಾರೂ ಶಾಶ್ವತವಲ್ಲ. ಕಾಲ ಚಕ್ರ ಉರುಳುತ್ತದೆ. ಕೊವಿಡ್ ಮುಗಿಯಲಿ, ಮೈಸೂರು ಡಿಸಿ ವಿಚಾರವಾಗಿ ದಾಖಲೆ ಬಿಡುಗಡೆ ಮಾಡುವೆ. ಶಾಸಕಾಂಗವೇ ಕಾರ್ಯಾಂಗದ ಮಾತು ಕೇಳಬೇಕಾಗಿದೆ. ಮೈಸೂರು ಜಿಲ್ಲೆಯಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಮಾಜಿ ಸಚಿವರು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

(Sa ra Mahesh appealed to government to pay the legislators one year salary for working class)