ಡ್ರಗ್​ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಬಿಡುಗಡೆ

|

Updated on: Dec 11, 2020 | 9:44 PM

ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ಡೀಲ್​ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮೊದಲು ನಟಿ ರಾಗಿಣಿ ದ್ವಿವೇದಿ ಅರೆಸ್ಟ್​ ಆಗಿದ್ದರು. ನಂತರ ಈ ಪ್ರಕರಣದಲ್ಲಿ ಸಂಜನಾ ಹೆಸರು ತಳಕು ಹಾಕಿಕೊಂಡಿತ್ತು. ನಂತರ ಅವರನ್ನು ಬಂಧಿಸಲಾಗಿತ್ತು.

ಡ್ರಗ್​ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಗಲ್ರಾನಿ ಬಿಡುಗಡೆ
ಸಂಜನಾ
Follow us on

ಬೆಂಗಳೂರು: ಡ್ರಗ್ಸ್​ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾನಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ ಬೆನ್ನಲ್ಲೇ ಅವರು ಜೈಲಿನಿಂದ ಹೊರ ಬಂದಿದ್ದಾರೆ. ಈ ಮೂಲಕ 3 ತಿಂಗಳ ಬಳಿಕ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಂತಾಗಿದೆ.

ನಟಿ ಸಂಜನಾಗೆ ಗೈನಕಾಲಜಿಗೆ (Gynecology) ಸಂಬಂಧಿಸಿದ ಚಿಕಿತ್ಸೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಿ ಎಂದು ಸಂಜನಾ ಪರ ವಕೀಲರು ವೈದ್ಯರ ಪ್ರಮಾಣ ಪತ್ರದ ಜೊತೆಗೆ ಕೋರ್ಟ್​​ಗೆ ಮನವಿ ಸಲ್ಲಿಸಿದ್ದರು. ವಿಚಾರಣೆ ಬಳಿ ಅದನ್ನು ಅದನ್ನು ಅಂಗೀಕರಿಸಿದ ನ್ಯಾಯಧೀಶರು ಅನಾರೋಗ್ಯ ಕಾರಣಕ್ಕಾಗಿ ನಟಿ ಸಂಜನಾಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ಡೀಲ್​ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮೊದಲು ನಟಿ ರಾಗಿಣಿ ದ್ವಿವೇದಿ ಅರೆಸ್ಟ್​ ಆಗಿದ್ದರು. ನಂತರ ಈ ಪ್ರಕರಣದಲ್ಲಿ ಸಂಜನಾ ಹೆಸರು ತಳಕು ಹಾಕಿಕೊಂಡಿತ್ತು. ಆದರೆ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಂಜನಾ ಸ್ಪಷ್ಟನೆ ನೀಡಿದ್ದರು. ಆದರೆ, ಪೊಲೀಸರು ಇವರನ್ನು ಕೂಡ ಬಂಧಿಸಿ ಕರೆದೊಯ್ದಿದ್ದರು.

ಮಾಧ್ಯಮಗಳಿಗಿಲ್ಲ ಪ್ರತಿಕ್ರಿಯೆ: ನಟಿ ಸಂಜನಾ ಗಲ್ರಾನಿ ಹೆಸರು ಡ್ರಗ್​ ಕೇಸ್​ನಲ್ಲಿ ತಳುಕು ಹಾಕಿಕೊಂಡ ಬೆನ್ನಲ್ಲೇ ಮಾಧ್ಯಮಗಳ ವಿರುದ್ಧ  ಅವರು ಹರಿಹಾಯ್ದಿದ್ದರು. ಈಗ ಅವರು ಜೈಲಿನಿಂದ ಹೊರ ಬಂದ ಕೂಡಲೇ ಮಾಧ್ಯಮದವರಿಗೆ ಯಾವುದೆ ಪ್ರತಿಕ್ರಿಯೆ ನೀಡದೇ ಹೊರ ನಡೆದಿದ್ದಾರೆ.

ನಟಿ ಸಂಜನಾಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ; ಹೀಗಾಗಿ ಜಾಮೀನು ಮಂಜೂರು

Published On - 9:41 pm, Fri, 11 December 20